
ಪವನ್ ಕಲ್ಯಾಣ್ (ಪವನ್ ಕಲ್ಯಾಣ್), ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಆಂಧ್ರ ಡಿಸಿಎಂ ಆಗಿದ್ದರೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ ಪವನ್ ಅವರ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್ ಕಲ್ಯಾಣ’ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಸಹ ನಟಿಸಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ಶ್ರೀಲೀಲಾ, ರಾಶಿ ಖನ್ನಾ ಇನ್ನೂ ಕೆಲವು ಭಾಗಿ ಆಗಿದ್ದರು. ಈ ವೇಳೆ ಪವನ್ ಕಲ್ಯಾಣ್ ಮಾತನಾಡಿ ತಮಗೆ ಶ್ರೀಲೀಲಾ ಜೊತೆ ನನ್ನನ್ನು ಒಂದೇ ಫ್ರೇಮ್ ನಲ್ಲಿ ತೋರಿಸಬೇಡಿ ಎಂದು ನಿರ್ದೇಶಕರ ಬಳಿ ಹೇಳಿಬಿಟ್ಟಿದ್ದೆ. ಅದಕ್ಕೆ ಕಾರಣವೇನು?
ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ, ನಿರೂಪಕಿ ಸುಮಾ ಕನಕಾಲ ಅವರು ಪವನ್ ಅವರೊಟ್ಟಿಗೆ ಮಾತನಾಡುತ್ತಾ, ನೀವು ಸಖತ್ ಆಗಿ ಡ್ಯಾನ್ಸ್ ಮಾಡಿದ್ದೀರಿ, ಶ್ರೀಲೀಲಾ ಡ್ಯಾನ್ಸ್ ಸಹ ಟ್ರೈಲರ್ ನಲ್ಲಿ ಕಾಣಿಸುತ್ತದೆ. ಅದಕ್ಕೆ ಪವನ್ ಕಲ್ಯಾಣ್, ‘ನಾನು ನಿರ್ದೇಶಕರ ಬಳಿ ಕಡ್ಡಾಯವಾಗಿ ಹೇಳಿಬಿಟ್ಟೆ, ನನ್ನನ್ನು ಶ್ರೀಲೀಲಾ ಜೊತೆಗೆ ಡ್ಯಾನ್ಸ್ ಮಾಡಬೇಡಿ, ನಾನು ಒಬ್ಬನೇ ಡ್ಯಾನ್ಸ್ ಮಾಡಬೇಕು ಅಥವಾ ಶ್ರೀಲೀಲಾ ಒಬ್ಬರೇ ಡ್ಯಾನ್ಸ್ ಮಾಡಬೇಕು, ಹಾಡುಗಳಲ್ಲಿ ನನ್ನ ಶ್ರೀಲೀಲಾ ಜೊತೆ ತೋರಿಸಲೇಬೇಡಿ. ಏಕೆಂದರೆ ಶ್ರೀಲೀಲಾ ಅದ್ಭುತವಾದ ಡ್ಯಾನ್ಸರ್, ಡ್ಯಾನ್ಸ್ ನಲ್ಲಿ ಅವರು ನನ್ನನ್ನು ಸುಲಭವಾಗಿ ಡಾಮಿನೇಟ್ ಮಾಡಿಬಿಡುತ್ತಾರೆ’ ಎಂದರು ಪವನ್ ಕಲ್ಯಾಣ್.
ಶ್ರೀಲೀಲಾ ಅದ್ಭುತವಾದ ಡ್ಯಾನ್ಸರ್ಗೆ ಅನುಮಾನವೇ ಇಲ್ಲ. ಹಲವಾರು ಮಂದಿ ನಟರು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ, ಶ್ರೀಲೀಲಾರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಇದೀಗ ಪವನ್ ಕಲ್ಯಾಣ್ ಸಹ ಶೈಲಿಯಲ್ಲಿ ಶ್ರೀಲೀಲಾ ಡ್ಯಾನ್ಸ್ ಅನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ:ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ
ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಲೀಲಾ, ಪವನ್ ಕಲ್ಯಾಣ್ ಅವರ ಗುಣಗಾನ ಮಾಡುತ್ತಾ ಅವರನ್ನು ‘ಅಜ್ಞಾತವಾಸಿ’ ಎಂದು ಕರೆದರು. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ನಟಿಸುವಾಗ ನಾನು ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದೆ, ಅಲ್ಲೆಲ್ಲ ಪವನ್ ಅವರು ಹೇಗೆ ಎಂದೆಲ್ಲ ಕೇಳುತ್ತಿದ್ದರು, ಆಗ ನಾನು, ‘ಪವನ್ ಕಲ್ಯಾಣ್ ಒಬ್ಬರ ರೀತಿ ಅಜ್ಞಾತವಾಸಿ’ ಎಂದೆ. ಹಾಗೆಂದರೇನು ಎಂದು ಕೇಳಿದರು, ಚಾಟ್ಜಿಪಿಟಿ ಮಾಡಿಕೊಳ್ಳಿ ಎಂದು ಅವರಿಗೆ ಹೇಳಿದೆ. ನಿಮ್ಮಿಂದ ಸಾಕಷ್ಟು ಕಲಿತೆ, ಎಲ್ಲದರಲ್ಲೂ ಧನಾತ್ಮಕವಾಗಿ ಇರುವುದು ಕಲಿತೆ, ನಿಮ್ಮಿಂದ ಪರಿಸರ ಪ್ರೇಮ ಕಲಿತೆ. ಸಮಾಜದ ಬಗ್ಗೆ ಕಾಳಜಿ ಇರಬೇಕು ಎಂದು ಕಲಿತೆ. ನೀವು ಸಿನಿಮಾಗಳಲ್ಲಿ ನಟಿಸುವುದರಿಂದ ಸಿನಿಮಾ ರಂಗಕ್ಕೆ ಒಳ್ಳೆಯದಾಗುತ್ತದೆ. ನೀವು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರಬೇಕು’ ಎಂದರು ಶ್ರೀಲೀಲಾ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ಇದ್ದಾರೆ. ಈ ಸಿನಿಮಾದಲ್ಲಿ ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ಕಾಣುತ್ತೀರಿ ಎಂದು ನಿರ್ದೇಶಕ ಹರೀಶ್ ಭರವಸೆ ಕೊಟ್ಟಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ