
ಪವನ್ ಕಲ್ಯಾಣ್ (ಪವನ್ ಕಲ್ಯಾಣ್) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಮಾರ್ಚ್ 19 ರಂದು ಆಗಲಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯ ಹಿಂದಿನ ದಿನ ಪ್ರೀಮಿಯರ್ ಪ್ರದರ್ಶನಗಳು ಸರಿಯಾಗಿವೆ. ಆದರೆ ಈ ಬಾರಿ ಮಾರ್ಚ್ 18 ರಂದು ‘ಧುರಂಧರ 2’ ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಮಾಡಿರುವ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸ್ಪೆಷನ್ ಶೋಗಳನ್ನು ಮಾತ್ರ ಪ್ರದರ್ಶಿಸುತ್ತಿದೆ. ಬಿಡುಗಡೆಯ ದಿನ ಅಂದರೆ ಮಾರ್ಚ್ 19 ರಂದು ಬೆಳಿಗಿನ ಜಾವ ಸಿನಿಮಾದ ಸ್ಪೆಷಲ್ ಪ್ರದರ್ಶನಗಳು ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ.
ಪ್ರತಿ ಬಾರಿ ಪವನ್ ಸಿನಿಮಾಕ್ಕೆ ಭಾರಿ ಸಂಖ್ಯೆಯ ಪ್ರದರ್ಶನಗಳು ಬೆಂಗಳೂರಿನಲ್ಲಿ ಸಿಗುತ್ತಿದ್ದವು, ಆದರೆ ಬಾರಿ ಇಲ್ಲ. ‘ಧುರಂಧರ್ 2’ ಸಿನಿಮಾದ ಕಾರಣಕ್ಕಾಗಿ ಸಿನಿಮಾಕ್ಕೆ ಹೆಚ್ಚಿನ ಶೋಗಳು ಸಿಕ್ಕಿಲ್ಲ ಎಂದು ತೀರ ಕಡಿಮೆ ಶೋಗಳು ಮಾತ್ರವೇ ಸಿಕ್ಕಿವೆ. ಸಾಧಾರಣ ಸಂಖ್ಯೆಯ ಪ್ರದರ್ಶನಗಳು ಸಿಕ್ಕಿದ್ದು, ಹಲವಾರು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ಪ್ರದರ್ಶನಗಳನ್ನು ಸಹ ಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ಬೆಳಗಿನ ಜಾವ 6:30 ಇಂದ ಶೋಗಳು ಪ್ರಾರಂಭವಾಗುತ್ತಿವೆ. ಕೆಲವು ಚಿತ್ರಮಂದಿರಗಳಲ್ಲಿ 7 ಗಂಟೆಗೆ ಶೋ ಪ್ರದರ್ಶಿಸಲಾಗುತ್ತಿದೆ. ವಿಶೇಷ ಶೋಗಳಿಗೆ ಬೆಂಗಳೂರಿನ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಆದರೆ ತೀರ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿಲ್ಲ. ‘ಧುರಂಧರ 2’ ಸಿನಿಮಾದ ಟಿಕೆಟ್ ಬೆಲೆಗೆ ‘ಉಸ್ತಾದ್ ಭಾಗ ಸಿಂಗ್’ನ ವಿಶೇಷ ಶೋನ ಟಿಕೆಟ್ ಬೆಲೆಗಳು ಕಡಿಮೆ ಇವೆ. ವಿಶೇಷ ಶೋಗೆ ಕೆಲವೆಡೆ 400 ಹಾಗೂ 500 ರೂಪಾಯಿಗಳಿವೆ. ಅದೇ ಚಿತ್ರಮಂದಿರದ 10 ಗಂಟೆ ಶೋಗೆ ಟಿಕೆಟ್ ಬೆಲೆ 350 ಅಥವಾ 250 ರೂಪಾಯಿಗಳಿವೆ. ಕೆಲವೆಡೆ ಇನ್ನೂ ಕಡಿಮೆ ಇವೆ.
ಇದನ್ನೂ ಓದಿ:’ಕಾಲರ್ ಎತ್ತರ’ ಎಂದು ಕುಣಿದ ಪವನ್ ಕಲ್ಯಾಣ: ಸ್ಟೆಪ್ಪು ನೋಡಿ
ಈ ಬಾರಿ ಪವನ್ ಕಲ್ಯಾಣ್ ಸಿನಿಮಾಕ್ಕೆ ಬಹಳ ಕಡಿಮೆ ಶೋಗಳು ದೊರೆತಿವೆ. ಮಂಗಳವಾರ ಬುಕ್ಮೈಶೋನಲ್ಲಿ ಇರುವ ಮಾಹಿತಿಯ ಪ್ರಕಾರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ 150ಕ್ಕೂ ಕಡಿಮೆ ಶೋಗಳು ದೊರೆತಿವೆ. ಪರದೆಗಳ ಸಂಖ್ಯೆ 35 ದಾಟಿಲ್ಲ. ಈ ಹಿಂದಿನ ‘ಓಜಿ’ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯ ಪರದೆಗಳು ಮತ್ತು ಶೋಗಳು ಲಭ್ಯವಿವೆ. ಆದರೆ ಈ ಬಾರಿ ‘ಧುರಂಧರ 2’ ಹೊಡೆತಕ್ಕೆ ‘ಉಸ್ತಾದ್ ಭಗತ್ ಸಿಂಗ್’ ಭಾರಿ ಪೆಟ್ಟುಣ್ಣುತ್ತಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಕಲ್ಯಾಣ್ ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ಇದ್ದಾರೆ. ಈ ಸಿನಿಮಾದಲ್ಲಿ ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ಕಾಣುತ್ತೀರಿ ಎಂದು ನಿರ್ದೇಶಕ ಹರೀಶ್ ಭರವಸೆ ಕೊಟ್ಟಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ