
ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ 2’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ‘ಟಾಕ್ಸಿಕ್’ ಸಿನಿಮಾ ಅದೇ ದಿನ ರಿಲೀಸ್ ಆಗಬೇಕಿತ್ತು ಆದರೆ ‘ಟಾಕ್ಸಿಕ್’ ಬಿಡುಗಡೆ ಆಗಲಿದೆ. ‘ಧುರಂಧರ್ 2’ ಗೆ ಹೆದರಿ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಗೆ ಮುಂದಕ್ಕೆ ಹಾಕಿಕೊಂಡವು. ಆದರೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗುತ್ತಿದೆ. ಆದರೆ ‘ಧುರಂಧರ 2’ ಸಿನಿಮಾ ಬಿಡುಗಡೆಗೆ ಮುಂಚೆಯೇ ಪವನ್ ಸಿನಿಮಾಕ್ಕೆ ಸ್ಪರ್ಧೆ ಒಡ್ಡುತ್ತಿದೆ. ಆದರೆ ‘ಧುರಂಧರ್ 2’ ಗೆ ಪ್ರತಿಸ್ಪರ್ಧೆ ಒಡ್ಡಲು ‘ಭಗತ್ ಸಿಂಗ್’ ತಂಡ ಯೋಜನೆ ಹಾಕಿಕೊಂಡಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಸ್ಪೆಷಲ್ ಶೋಗಳನ್ನು ಚಾಲನೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ ಆದರೆ, ‘ಧುರಂಧರ 2’ ಸಿನಿಮಾ ಮುಂಚಿತವಾಗಿಯೇ ಪ್ರೀಮಿಯರ್ ಶೋಗಳನ್ನು ಪ್ರಕಟಿಸಿತು. ಸಿನಿಮಾ ಬಿಡುಗಡೆಗೆ ಹಿಂದಿನ ದಿನ ಅಂದರೆ ಮಾರ್ಚ್ 18ರಂದು ಸಂಜೆ ಐದು ಗಂಟೆಯಿಂದಲೇ ಪ್ರದರ್ಶನ ಕಾಣುತ್ತಿದೆ. ಇದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಭಾರಿ ಪೆಟ್ಟು ನೀಡಿದೆ. ‘ಉಸ್ತಾದ್ ಸಿಂಗ್’ ಸಿನಿಮಾ ಸಹ ಪ್ರೀಮಿಯಂ ಶೋ ನಡೆಯಲು ಯೋಜಿಸಿತ್ತು, ಆದರೆ ‘ಧುರಂಧರ 2’ ಕಾರಣಕ್ಕೆ ಅದು ರದ್ದಾಗಿತ್ತು.
ಇದನ್ನೂ ಓದಿ:’ಕಾಲರ್ ಎತ್ತರ’ ಎಂದು ಕುಣಿದ ಪವನ್ ಕಲ್ಯಾಣ: ಸ್ಟೆಪ್ಪು ನೋಡಿ
ಆದರೆ ಇದೀಗ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಹೊಸ ಯೋಜನೆಯಲ್ಲಿ ಬಂದಿದೆ. ಸಂಜೆ ಪೇಯ್ಡ್ ಪ್ರೀಮಿಯರ್ ಶೋ ಬದಲಿಗೆ ಬೆಳಿಗಿನ ಜಾವ ಬೆನಿಫಿಟ್ ಶೋಗಳನ್ನು ಚಾಲನೆ ಮಾಡಲು ಮುಂದಾಗಿದೆ. ಆಂಧ್ರ ಮತ್ತು ತೆಲಂಗಾಣಗಳಲ್ಲಿ ಬೆಳಗಿನ ಜಾವ 4 ಮತ್ತು 5 ಗಂಟೆಗೆ ಪ್ರದರ್ಶನಗಳು ನಡೆಯುತ್ತಿವೆ. ಅಲ್ಲಿ ಮಾತ್ರವೇ ಅಲ್ಲದೆ ಕರ್ನಾಟಕದಲ್ಲಿಯೂ ಸಹ ಅರ್ಲಿ ಮಾರ್ನಿಂಗ್ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ. ಸಿನಿಮಾದ ಟಿಕೆಟ್ ದರಗಳು ಸುಮಾರು 500 ರೂಪಾಯಿಗಳು ಆಂಧ್ರ ಮತ್ತು ತೆಲಂಗಾಣದಲ್ಲಿ ಇರಲಿವೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಸಹಜವಾಗಿಯೇ ಟಿಕೆಟ್ ದರ ಹೆಚ್ಚೇ ಇರಲಿದೆ.
‘ಪುಷ್ಪ 2’ ಸಿನಿಮಾದ ಸ್ಪೆಷಲ್ ಶೋನಲ್ಲಿ ಆಗಿದ್ದ ಅನಾಹುತದ ಬಳಿಕ ತೆಲಂಗಾಣದಲ್ಲಿ ಬೆನಿಫಿಟ್ ಶೋ, ಫ್ಯಾನ್ಸ್ ಶೋಗಳನ್ನು ರದ್ದು ಮಾಡಲಾಗಿದೆ. ಆಂಧ್ರದಲ್ಲಿಯೂ ಸಹ ಅರ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಆದರೆ ಇದೀಗ ಪವನ್ ಕಲ್ಯಾಣ್ ಸಿನಿಮಾಕ್ಕಾಗಿ ಇದೀಗ ಮತ್ತೆ ಅರ್ಲಿ ಮಾರ್ನಿಂಗ್ ಶೋ ಪ್ರದರ್ಶಿಸಲಾಗುತ್ತಿದೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ಸಹ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಇಂದು (ಮಾರ್ಚ್ 14) ಬಿಡುಗಡೆಯಾಗಿದೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ