
ಆನಂದ್ ಸಾಯಿ ಕೂಡ ಪವರ್ ಸ್ಟಾರ್ ಅವರ ಆಪ್ತ ಸ್ನೇಹಿತ. ಇವರಿಬ್ಬರ ಸ್ನೇಹ ಬರೋಬ್ಬರಿ 30 ವರ್ಷಗಳದ್ದು. ಆನಂದ್ ಸಾಯಿ ಕೂಡ ಚಿತ್ರರಂಗದವರೇ. ಅವರು ಖ್ಯಾತ ಕಲಾ ನಿರ್ದೇಶಕ. ‘ತೊಲಿ ಪ್ರೇಮ’, ‘ತಮ್ಮುಡು’, ‘ಜಾನಿ’, ‘ಗುಡುಂಬಾ ಶಂಕರ್’, ‘ಬಾಲು’, ‘ಬಂಗಾರಂ’, ‘ಅಣ್ಣಾವರಂ’, ‘ಜಲ್ಸಾ’ ಮುಂತಾದ ಚಿತ್ರಗಳಿಗೆ ಇವರಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. 2010ರಲ್ಲಿ ‘ಕೊಮುರಂ ಪುಲಿ’ ಚಿತ್ರಕ್ಕೆ ಕೊನೆಯ ಬಾರಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ 2013ರಲ್ಲಿ ‘ನಾಯಕ್’ ಚಿತ್ರದ ಬಳಿಕ ಸಿನಿಮಾ ಬಿಟ್ಟು, ಯಾದಾದ್ರಿ ದೇವಸ್ಥಾನದ ಮುಖ್ಯ ವಾಸ್ತುಶಿಲ್ಪಿಯಾಗಿ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರು.