ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ (ಪುಷ್ಪಾ ಅರುಣ್ ಕುಮಾರ್) ಹಾಸನದಲ್ಲಿ ವಿಚಾರಕ್ಕೆ ವಿವಾದ ಮಾಡಿಕೊಂಡಿದ್ದಾರೆ. ಪಿಡಿಒ ನಟರಾಜ್ ವಿರುದ್ಧ ಅವರು ಆರೋಪ ಮಾಡಿದರು. ಅದಕ್ಕೆ ನಟರಾಜ್ ಅವರು ಪ್ರತಿಕ್ರಿಯೆ ಈಗ ತಿಳಿಸಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ನಟರಾಜ್ (ಪಿಡಿಒ ನಟರಾಜ್) ಅವರು ತಳ್ಳಿಹಾಕಿದ್ದಾರೆ. ‘ಸತ್ಯಮಂಗಲ ಗ್ರಾಮ ಪಂಚಾಯಿತಿಯಲ್ಲಿ 2018ರಿಂದ 2022ರ ತನಕ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಈ-ಸ್ವತ್ತು ನಾನೇ ಮಾಡಿಕೊಟ್ಟಿದ್ದು. ಹಾಗಿದ್ದರೂ ನನ್ನ ಮೇಲೆ ಅವರು ಆರೋಪ ಮಾಡುತ್ತಿದ್ದಾರೆ. ಯಾಕೆ ಎಂಬುದು ಗೊತ್ತಿಲ್ಲ. ನಾವು ನಮ್ಮ ವೃತ್ತಿ ಮಾಡಿದ್ದೇವೆ. ಸುಳ್ಳರು, ಕಳ್ಳರು ಅಂತ ಹೇಳಿದರೆ ನೋವಾಗುತ್ತದೆ. ನಾನು ಕೂಡ ವಕೀಲನಾಗಿ ಕೆಲವು ವರ್ಷ ಕೆಲಸ ಮಾಡಿದ್ದೇನೆ. ಪುಷ್ಪಾ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಯೋಚಿಸಿದ್ದೇನೆ’ ಎಂದು ನಟರಾಜ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.