ಭಾರತದ ಅತ್ಯಂತ ಮಾಲಿನ್ಯ ನಗರ ಮಾರ್ಚ್ 2026 ಪಟ್ಟಿ ರಿಲೀಸ್, ದೆಹಲಿ ಅಲ್ಲ ನಂ.1 ಯಾರು?, ಉತ್ತರ ಪ್ರದೇಶದ ಹಲವು ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ಯಾವುದಾದರು ಸಿಟಿ ಈ ಪಟ್ಟಿಯಲ್ಲಿ ಇದೆಯಾ?

ಮಾಲಿನ್ಯ ವಿಚಾರದಲ್ಲಿ ಭಾರತ ಹಲವು ದೇಶಗಳನ್ನು ಹಿಂದಿಕ್ಕಿದೆ. ಇಲ್ಲಿನ ಸರ್ಕಾರ , ಸಾರ್ವಜನಿಕರೂ ಇಬ್ಬರ ಪಾತ್ರ ಇದರಲ್ಲಿ ಬಹುದೊಡ್ಡದು.ದೇಶದಲ್ಲಿ ಅತೀ ಹೆಚ್ಚಿ ಮಾಲಿನ್ಯ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಭಾರತದಲ್ಲಿ ಮಾರ್ಚ್ 2026ರಲ್ಲಿ ಯಾವ ನಗರ ವಾಯು ಸೇರಿದಂತೆ ಇಥರ ಎಲ್ಲಾ ಕಾರಣಗಳಿಂದ ಅತೀ ಹೆಚ್ಚು ಮಲಿನಗೊಂಡಿತ್ತು ಅನ್ನೋ ಪಟ್ಟಿ ಬಿಡುಗಡೆಯಾಗಿದೆ. ಈ ಟಾಪ್ 10 ಪಟ್ಟಿಯಲ್ಲಿ ದೆಹಲಿ ಇಲ್ಲ.

ಭಾರತದಲ್ಲಿ ಅತೀ ಹೆಚ್ಚು ಮಾಲಿನ್ಯಗೊಂಡ ಮಾರ್ಚ್ ತಿಂಗಳ ನಗರ ಗುರುಗ್ರಾಂ. ಅತೀ ಹೆಚ್ಚು ಕಾಮಗಾರಿಗಳೂ ನಡೆಯುತ್ತಿರುವ ನಗರ ಇದಾಗಿದೆ. ಇಲ್ಲಿನ ಮಾಲಿನ್ಯದ ಪ್ರಮಾಣ PM2.5 of 116 μg/m3 ಮಟ್ಟ ತಲುಪಿದೆ. ಮಾರ್ಚ್ ತಿಂಗಳಲ್ಲಿ ಅತೀ ಹೆಚ್ಚು ಮಾಲಿನ್ಯಗೊಂಡಿರುವ ನಗರ ಎಂದು ಗುರುತಿಸಲಾಗಿದೆ.

ಗರುಗ್ರಾಂ

ಬಹದುರ್ಘಡ

ಫರೀದಾಬಾದ್

ಸಿಂಗ್ರೌಲಿ

ಮಂದೀದೀಪ್

ಘಾಜಿಯಾಬಾದ್

ಮನೆಸರ್

ಭಿವಡಿ

ನೋಯ್ಡಾ

ನಂದೇಸಾರಿ

ಉತ್ತರ ಪ್ರದೇಶದಲ್ಲಿನ 21 ನಗರಗಳ ಪೈಕಿ 8 ನಗರಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿದೆ. ಇನ್ನು ಹರ್ಯಾಣದ 9 ನಗರಳಲ್ಲಿ ಮಾಲಿನ್ಯದ ಶೇಕಡ ಹೆಚ್ಚಿದೆ. ಭಾರತದ ಹಲವು ನಗರಗಳು ಮಾಲಿನ್ಯದ ಗಡಿ ದಾಟಿದೆ. ಹಾಗಂತ ದೆಹಲಿಯಲ್ಲಿ ಮಾಲಿನ್ಯ ತಗ್ಗಿದೆ ಎಂದರ್ಥವಲ್ಲ. ದೆಹಲಿಯನ್ನು ಹಿಂದಿಕ್ಕಿ ಇತರ ನಗರಗಳು ಮುಂದೆ ಸಾಗಿದೆ ಅಷ್ಟೆ.

NAAQS ಅತೀ ಮಾಲಿನ್ಯ ನಗರ ಅಂತರೆ ಪಿಎಂ 10 ಲೆವಲ್ ಮೀರಿದ ನಗರಗಳಲ್ಲಿ ಕರ್ನಾಟಕದ ನಗರಗಳಿಲ್ಲ. ಹರ್ಯಾಣ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳ ನಗರಗಳು ಪಿಎಂ10 ಲೆವೆಲ್ ಪಟ್ಟಿಯಲ್ಲಿತ್ತು. ಇತ್ತೀಚೆಗೆ ಮಾಲಿನ್ಯದ ಪ್ರಮಾಣ ಇಳಿಕೆಯಾಗುತ್ತಿರುವುದು ಈ ರಾಜ್ಯಗಳ ನಗರಗಳ ಜನರ ಸಮಾಧಾನಕ್ಕೆ ಕಾರಣವಾಗಿದೆ.

NAAQS ಮಲಿನ ನಗರದಲ್ಲಿಲ್ಲ ಕರ್ನಾಟಕದ ನಗರ

Source link
ಭಾರತದ ಅತ್ಯಂತ ಮಾಲಿನ್ಯ ನಗರ ಮಾರ್ಚ್ 2026 ಪಟ್ಟಿ ರಿಲೀಸ್, ದೆಹಲಿ ಅಲ್ಲ ನಂ.1 ಯಾರು?