Headlines

ಶಿವಣ್ಣ ಬಳಿಕ ‘ಪೆದ್ದಿ’ ಸೆಟ್ ಸೇರಿದ ಮತ್ತೋರ್ವ ಕನ್ನಡದ ಖ್ಯಾತ ಕಲಾವಿದ

ಶಿವಣ್ಣ ಬಳಿಕ ‘ಪೆದ್ದಿ’ ಸೆಟ್ ಸೇರಿದ ಮತ್ತೋರ್ವ ಕನ್ನಡದ ಖ್ಯಾತ ಕಲಾವಿದ


ಶಿವಣ್ಣ ಬಳಿಕ 'ಪೆದ್ದಿ' ಸೆಟ್ ಸೇರಿದ ಮತ್ತೋರ್ವ ಕನ್ನಡದ ಖ್ಯಾತ ಕಲಾವಿದ

ತೆಲುಗಿನ ಸ್ಪೋರ್ಟ್ಸ್ ಡ್ರಾಮಾ ‘ಪೆದ್ದಿ’ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಹೀರೋ ಆದರೆ, ಕನ್ನಡದ ಶಿವರಾಜ್ ಕುಮಾರ್ ಅವರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಈಗ ಕನ್ನಡದ ಹೀರೋ ಒಬ್ಬರ ಎಂಟ್ರಿ ಆಗಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಸಾಯಿ ಕುಮಾರ್. ತಮ್ಮ ಕಂಚಿನ ಕಂಠದ ಮೂಲಕ ಗಮಮ ಸೆಳೆದ ಅವರು, ಈಗ ‘ಪೆದ್ದಿ’ ಸಿನಿಮಾದ ಭಾಗ ಆಗಿದ್ದಾರೆ.

ಸಾಯಿ ಕುಮಾರ್ ಅವರು ಕನ್ನಡದಲ್ಲಿ ನಟಿಸಿದ್ದಾರೆ, ಪರಭಾಷೆಯಲ್ಲೂ ನಟಿಸಿದ್ದಾರೆ. ಅವರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅದರಲ್ಲೂ ತಮ್ಮ ಕಂಠದ ಮೂಲಕ ಅವರು ಹೆಚ್ಚು ಚಿರಪರಿಚಿತರು. ಈಗ ಅವರು ‘ಪೆದ್ದಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ರಾಮ್ ಚರಣ್ ಅವರು ‘ಯೇವಡು’ ಸಿನಿಮಾದಲ್ಲಿ ಸಾಯಿ ಕುಮಾರ್ ನಟಿಸಿದ್ದರು. ಈಗ ಇದೆ ಬಳಿಕ ಈ ಕಲಾವಿದರು ಒಂದಾಗುತ್ತಿದ್ದಾರೆ.

‘ಪೆದ್ದಿ’ ಸಿನಿಮಾ ಹಳ್ಳಿಗೆ ಸಾಗುತ್ತದೆ. ಇದರಲ್ಲಿ ಕ್ರೀಡೆ ಕೂಡ ಹೈಲೈಟ್ ಆಗುವ ಸಾಧ್ಯತೆ ಇದೆ. ಸದ್ಯ ಸಿನಿಮಾ ಕೊನೆಯ ಹಂತದಲ್ಲಿದೆ. ಸಾಯಿ ಕುಮಾರ್ ಅವರು ಶೂಟ್‌ನಲ್ಲಿ ಭಾಗಿ ಆಗಿದ್ದಾರೋ ಅಥವಾ ಶೂಟ್ ಇದೆಯೋ ಎಂಬ ವಿಷಯ ರಿವೀಲ್ ಆಗಿಲ್ಲ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾ ಶೂಟಿಂಗ್ ಮುಗಿಯಿತೇ? ರಾಮ್ ಚರಣ್ ಕೊಟ್ಟರು ಉತ್ತರ

ಈ ಮೊದಲು ‘ಪೆದ್ದಿ’ ಸಿನಿಮಾ ಏಪ್ರಿಲ್ 30 ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಆದರೆ, ಸಿನಿಮಾ ಕೆಲಸಗಳು ಆಗಿಲ್ಲ. ಹೀಗಾಗಿ, ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರದಲ್ಲಿ ರಾಮ್ ಚರಣ್, ಶಿವರಾಜ್ ಕುಮಾರ್ ಜೊತೆ ದಿವ್ಯೆಂದು ಶರ್ಮ, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ವೃದ್ಧಿ ಸಿನಿಮಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ತೆಲುಗು ಜೊತೆಗೆ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ.
ಈ ಸಿನಿಮಾಗೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಟೀಸರ್ ಮ್ಯೂಸಿಕ್ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *