Headlines

ಹಿಟ್ಟು ಎಲ್ಲೂ ಅಂಟಿಕೊಳ್ಳದೆ, ಹರಿಯದೆ ಸುಲಭವಾಗಿ ಮೇಲೇಳುತ್ತೆ ದೋಸೆ, ಉಪ್ಪಿನ ಟ್ರಿಕ್ಸ್ ತಿಳ್ಕೊಳ್ಳಿ

ಹಿಟ್ಟು ಎಲ್ಲೂ ಅಂಟಿಕೊಳ್ಳದೆ, ಹರಿಯದೆ ಸುಲಭವಾಗಿ ಮೇಲೇಳುತ್ತೆ ದೋಸೆ, ಉಪ್ಪಿನ ಟ್ರಿಕ್ಸ್ ತಿಳ್ಕೊಳ್ಳಿ

ಹಿಟ್ಟು ಎಲ್ಲೂ ಅಂಟಿಕೊಳ್ಳದೆ, ಹರಿಯದೆ ಸುಲಭವಾಗಿ ಮೇಲೇಳುತ್ತೆ ದೋಸೆ, ಉಪ್ಪಿನ ಟ್ರಿಕ್ಸ್ ತಿಳ್ಕೊಳ್ಳಿ

Cooking the perfect crispy dosa: ದೋಸೆ ಹೋಟೆಲ್ ಶೈಲಿಯಲ್ಲಿ ಕ್ರಿಸ್ಪಿಯಾಗಿ ಬರಬೇಕೆಂದರೆ ಕೇವಲ ನಾನ್-ಸ್ಟಿಕ್ ಪ್ಯಾನ್ ಮಾತ್ರ ಸಾಕು ಎಂಬುದು ಅನೇಕರ ನಂಬಿಕೆ. ಆದರೆ ಈ ಸರಳ ಉಪಾಯವು ತವಾ ಮೇಲಿರುವ ಜಿಡ್ಡನ್ನು ತೆಗೆದು, ದೋಸೆ ಹರಿಯದಂತೆ ಸುಲಭವಾಗಿ ಎದ್ದು ಬರಲು ಸಹಾಯ ಮಾಡುತ್ತದೆ.

ಅದೆಷ್ಟೇ ಎಕ್ಸ್‌ಪರ್ಟ್‌ ಅಂದ್ರು ಕೆಲವೊಮ್ಮೆ ಅಥವಾ ಸಾಮಾನ್ಯವಾಗಿ ನಾವು ದೋಸೆ ಮಾಡುವಾಗ ಅದು ತವಾಗೆ ಅಂಟಿಕೊಳ್ಳುತ್ತದೆ. ದೋಸೆ ಕೇವಲ ನಾನ್-ಸ್ಟಿಕ್ ಪ್ಯಾನ್ ಮೇಲೆ ಮಾತ್ರ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆ ನಿಮ್ಮದಾಗಿದ್ದರೆ, ಅದನ್ನು ಈಗ ಬದಲಾಯಿಸುವ ಸಮಯ ಬಂದಿದೆ. ಏಕೆಂದರೆ ಈ ಒಂದು ಸಣ್ಣ ಟ್ರಿಕ್ ಬಳಸುವ ಮೂಲಕ ನೀವು ಸಾಮಾನ್ಯ ಕಬ್ಬಿಣ ಅಥವಾ ಸ್ಟೀಲ್ ತವಾ ಮೇಲೆಯೂ ಕುರುಕುರು ದೋಸೆಯನ್ನು ಸುಲಭವಾಗಿ ಮಾಡಬಹುದು.

ಸಾಮಾನ್ಯ ಕಬ್ಬಿಣ ಅಥವಾ ಸ್ಟೀಲ್ ತವಾದ ಮೇಲ್ಮೈ ಸ್ವಲ್ಪ ಒರಟಾಗಿರುತ್ತದೆ. ಇದರಿಂದಾಗಿ ಅದರ ಮೇಲೆ ಎಣ್ಣೆ ಅಥವಾ ನೀರು ಸಮಾನವಾಗಿ ಹರಡಲು ಸಾಧ್ಯವಾಗುವುದಿಲ್ಲ. ನೀವು ನೇರವಾಗಿ ಹಿಟ್ಟನ್ನು ಹಾಕಿದಾಗ ಅದು ಮೇಲ್ಮೈಗೆ ಅಂಟಿಕೊಳ್ಳುತ್ತದೆ ಮತ್ತು ದೋಸೆ ಮಗುಚುವಾಗ ಹರಿದು ಹೋಗುತ್ತದೆ.

ಉಪ್ಪು ಈ ಸಮಸ್ಯೆಗೆ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಉಪ್ಪು ತವಾದ ಮೇಲಿರುವ ತೇವಾಂಶವನ್ನು ಹೀರಿಕೊಳ್ಳುವುದು ಮಾತ್ರವಲ್ಲದೆ, ಹಳೆಯ ಎಣ್ಣೆ ಅಥವಾ ಜಿಡ್ಡನ್ನು ಹೊರತೆಗೆಯುತ್ತದೆ. ಇದರಿಂದ ತವಾ ಸ್ಮೂತ್ ಮತ್ತು ಸ್ವಚ್ಛವಾಗುತ್ತದೆ. ಈ ಟ್ರಿಕ್ ವಿಶೇಷವಾಗಿ ಹಳೆಯ ಕಬ್ಬಿಣದ ತವಾಗಳಿಗೆ ತುಂಬಾ ಪ್ರಯೋಜನಕಾರಿ.

*ಮೊದಲು ತವಾವನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಲು ಇಡಿ*ತವಾ ಚೆನ್ನಾಗಿ ಬಿಸಿಯಾದ ನಂತರ 1-2 ಚಮಚ ಉಪ್ಪನ್ನು ಹಾಕಿ ಸಮಾನವಾಗಿ ಹರಡಿ.*ಚಮಚದ ಸಹಾಯದಿಂದ ಉಪ್ಪನ್ನು ತವಾವಿನ ಮೇಲೆ ಸ್ವಲ್ಪ ಸಮಯ ಉಜ್ಜುತ್ತಾ ಇರಿ.*1 ರಿಂದ 2 ನಿಮಿಷಗಳಲ್ಲಿ ಉಪ್ಪಿನ ಬಣ್ಣ ಬದಲಾಗುತ್ತದೆ. ನಂತರ ಅದನ್ನು ಒಂದು ಸ್ವಚ್ಛವಾದ ಬಟ್ಟೆ ಅಥವಾ ಟಿಶ್ಯೂ ಪೇಪರ್ ಸಹಾಯದಿಂದ ಒರೆಸಿ ತೆಗೆಯಿರಿ.

ಈ ಪ್ರಕ್ರಿಯೆಯ ನಂತರ, ತವಾ ತಾಪಮಾನವನ್ನು ಸಾಮಾನ್ಯಗೊಳಿಸಲು ಅದರ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿ.ನಂತರ ಸ್ವಲ್ಪ ಎಣ್ಣೆಯನ್ನು ಹಚ್ಚಿ ಟಿಶ್ಯೂ ಪೇಪರ್‌ನಿಂದ ಹರಡಿ.ಈಗ ನೀವು ದೋಸೆ ಹಿಟ್ಟನ್ನು ಹಾಕಬಹುದು. ಹೇಗಿದ್ದರೂ ತವಾ ಈಗ ನಾನ್-ಸ್ಟಿಕ್ ಆಗಿರುವುದರಿಂದ ಹಿಟ್ಟು ಅಂಟಿಕೊಳ್ಳುವುದಿಲ್ಲ.ದೋಸೆ ಕುರುಕುರಾಗಲು ಅಂಚುಗಳಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ.ಕೆಳಭಾಗವು ತಿಳಿ ಚಿನ್ನದ ಬಣ್ಣಕ್ಕೆ ಬಂದಾಗ ನಿಧಾನವಾಗಿ ಮಗುಚಿ.ಹಿಟ್ಟು ಎಲ್ಲಿಯೂ ಅಂಟಿಕೊಳ್ಳದೆ ದೋಸೆ ಸುಲಭವಾಗಿ ಎದ್ದು ಬರುತ್ತದೆ.

Source link

Leave a Reply

Your email address will not be published. Required fields are marked *