ಪೆಟ್ರೋಲ್, ಡೀಸೆಲ್ ಖಾಲಿ ವದಂತಿ: ಚಾಮರಾಜನಗರ, ಕೊಳ್ಳೇಗಾಲದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ವಾಹನ ಸವಾರರು

ಪೆಟ್ರೋಲ್, ಡೀಸೆಲ್ ಖಾಲಿ ವದಂತಿ: ಚಾಮರಾಜನಗರ, ಕೊಳ್ಳೇಗಾಲದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ವಾಹನ ಸವಾರರು


ಪೆಟ್ರೋಲ್, ಡೀಸೆಲ್ ಖಾಲಿ ವದಂತಿ: ಚಾಮರಾಜನಗರ, ಕೊಳ್ಳೇಗಾಲದಲ್ಲಿ ಬ್ಯಾಂಕ್‌ಗಳಿಗೆ ಮುಗಿಬಿದ್ದ ವಾಹನ ಸವಾರರು

ಚಾಮರಾಜನಗರ, ಮಾರ್ಚ್ 21: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದ ಆತಂಕದ ನಡುವೆ ಚಾಮರಾಜನಗರ ಜಿಲ್ಲೆಯಲ್ಲಿ ಪೆಟ್ರೋಲ್ ಕೊರತೆ ವದಂತಿ ಭಾರೀ ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ಪಟ್ಟಣಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂಬ ವದಂತಿ ಹಬ್ಬಿದ್ದು, ವಾಹನ ಸವಾರರು ಏಕಾಏಕಿ ಪೆಟ್ರೋಲ್ ಬಂಕ್‌ಗಳತ್ತ ಮುಗಿಬಿದ್ದರು. ಇದರಿಂದ ಹಲವು ಬ್ಯಾಂಕ್‌ಗಳಲ್ಲಿ ಉದ್ದ ಸಾಲುಗಳು ಕಂಡುಬಂದಿವೆ. ಗ್ಯಾಸ್ ಕೊರತೆಯಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಸಮಸ್ಯೆ ಉಂಟಾಗಬಹುದು ಎಂಬ ಭಯ ಜನರಲ್ಲಿ ಹೆಚ್ಚಾಗಿದ್ದು, ಮುಂಜಾಗ್ರತೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಇಂಧನವನ್ನು ಖರೀದಿಸಲು ಜನರು ಹರಸಾಹಸ ಪಟ್ಟರು. ಕೆಲವು ಕಡೆ ವಾಹನಗಳ ದೀರ್ಘ ಸಾಲುಗಳು ಟ್ರಾಫಿಕ್ ಸಮಸ್ಯೆಯನ್ನು ಉಂಟುಮಾಡಿದವು.

ಬ್ಯಾಂಕ್ ಸಿಬ್ಬಂದಿ, ‘ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಲಭ್ಯವಿದೆ, ಯಾವುದೇ ಕೊರತೆ ಇಲ್ಲ’ ಎಂದು ಸ್ಪಷ್ಟಪಡಿಸಿದರೂ, ಜನರು ಅದನ್ನು ನಂಬದೇ ಖರೀದಿಸಲು ಮುಂದಾದರು. ಕೆಲ ಸಮಯ ತಾತ್ಕಾಲಿಕ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *