ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಬಳಿಕ ಮಾಜಿ ಅಧ್ಯಕ್ಷ ಸಾವು

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಬಳಿಕ ಮಾಜಿ ಅಧ್ಯಕ್ಷ ಸಾವು


ಬೆಳಗಾವಿ, (ಅಕ್ಟೋಬರ್ 20): ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ (ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಫಲಿತಾಂಶ 2025) ನಿನ್ನೆ (ಅಕ್ಟೋಬರ್ 19) ಪ್ರಕಟಗೊಂಡಿದ್ದು, ಇದರಲ್ಲಿ ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಶಾಸಕ ಅಶೋಕ ಪಟ್ಟಣ ಅವರ ಆಪ್ತ ಮಲ್ಲಣ್ಣ ಯಾದವಾಡ ಅವರು ಗೆಲುವು ಸಾಧಿಸಿದ್ದಾರೆ. ಆದರೆ, ಈ ಗೆಲುವಿನ ಸಂಭ್ರಮಾಚರಣೆ ಬಳಿಕ ಪಿಕೆಪಿಎಸ್ ಮಾಜಿ ಅಧ್ಯಕ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಾಸಕ ಅಶೋಕ್ ಪಟ್ಟಣ ಆಪ್ತ ಗಿರಿಯಪ್ಪ ಗಂಟೋಟಿ(40) ಹೃದಯಘಾತದಿಂದ ಪ್ರಚಾರ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಕಾಮಕೇರಿ ನಿವಾಸಿ ಗಿರಿಯಪ್ಪ, ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಪರವಾಗಿ ಶಾಸಕ ಅಶೋಕ ಪಟ್ಟಣ ಜೊತೆಗೂಡಿ ಪ್ರಚಾರ ನಡೆಸಿದರು. ಆದರೆ, ಗೆಲುವಿನ ಸಂಭ್ರಮದಲ್ಲೇ ದುರಂತ ಸಾವು ಕಂಡಿದ್ದಾರೆ.

ಇದನ್ನೂ ಓದಿ: 29 ವರ್ಷದ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಕಾರ: ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ಎಂದ ಜಾರಕಿಹೊಳಿ

ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಅವರ ಪರ ಪ್ರಚಾರ ಮಾಡಿದ್ದ ಗಿರಿಯಪ್ಪ ಗಂಟೋಟಿ, ಫಲಿತಾಂಶದ ದಿನವಾದ ನಿನ್ನೆ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು. ಆದರೆ, ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯು ರಾಮದುರ್ಗ ಮತ್ತು ಬೆಳಗಾವಿಯಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ. ಚುನಾವಣೆ ಗೆಲುವಿನ ಸಂಭ್ರಮದಲ್ಲಿದ್ದವರಿಗೆ ಇದು ಕಂಬನಿ ಮಿಡಿಯುವಂತೆ ಮಾಡಿದೆ.



Source link

Leave a Reply

Your email address will not be published. Required fields are marked *