Headlines

ಪಿಎಂ ಇಂಟರ್ನ್​ಸಿಪ್ ಸ್ಕೀಮ್ ಪರಿಷ್ಕೃತ ಮಾರ್ಗಸೂಚಿ; ವಯೋಮಿತಿಯಲ್ಲಿ ಬದಲಾವಣೆ, ಭತ್ಯೆ ಹೆಚ್ಚಳ, ಇಂಟರ್ನ್ ಅವಧಿ ಕಿರಿದು

ಪಿಎಂ ಇಂಟರ್ನ್​ಸಿಪ್ ಸ್ಕೀಮ್ ಪರಿಷ್ಕೃತ ಮಾರ್ಗಸೂಚಿ; ವಯೋಮಿತಿಯಲ್ಲಿ ಬದಲಾವಣೆ, ಭತ್ಯೆ ಹೆಚ್ಚಳ, ಇಂಟರ್ನ್ ಅವಧಿ ಕಿರಿದು


ಪಿಎಂ ಇಂಟರ್ನ್‌ಸಿಪ್ ಸ್ಕೀಮ್ ಪರಿಷ್ಕೃತ ಮಾರ್ಗಸೂಚಿ; ವಯೋಮಿತಿಯಲ್ಲಿ ಬದಲಾವಣೆ, ಭತ್ಯೆ ಹೆಚ್ಚು, ಇಂಟರ್ನ್ ಅವಧಿ ಕಿರಿದು

ನವದೆಹಲಿ, ಮಾರ್ಚ್ 25: ಯುವಜನರ ಕೌಶಲ್ಯಾಭಿವೃದ್ಧಿ ಉದ್ದೇಶದಿಂದ ಸರ್ಕಾರ ಪ್ರಾಯೋಗಿಕವಾಗಿ ನಡೆಸುತ್ತಿರುವ ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಸ್ಕೀಮ್ (PM ಇಂಟರ್ನ್‌ಶಿಪ್ ಸ್ಕೀಮ್) ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಒಂದು ವರ್ಷ ಇದ್ದ ಇಂಟರ್ನ್‌ಶಿಪ್ ಅವಧಿಯನ್ನು 6-9 ತಿಂಗಳಿಗೆ ಇಳಿಸಲಾಗಿದೆ. ಸ್ಕೀಮ್‌ಗೆ ಅರ್ಹತಾ ವಯೋಮಿತಿಯನ್ನು 21-24 ವರ್ಷಕ್ಕೆ ಬದಲಾಗಿ 18-25 ವರ್ಷ ವಯೋಮಾನಕ್ಕೆ ಬದಲಾಯಿಸಲಾಗಿದೆ. ಕೇಂದ್ರ ಸಚಿವರು ಈ ಕುರಿತು ರಾಜ್ಯಸಭೆಯಲ್ಲಿ ಮಾಹಿತಿ.

ಈ ಪರಿಷ್ಕೃತ ಮಾರ್ಗಸೂಚಿ ಮಾರ್ಚ್ 12 ರಿಂದ ಜಾರಿಗೆ ಬಂದಿದೆ. ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಮತ್ತು ಪದವಿಯ ಕೊನೆಯ ಹಂತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್‌ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಯೋಜನೆ

ಮಾಸಿಕ ಭತ್ಯೆಯಲ್ಲಿ ಒಟ್ಟು

ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ನಲ್ಲಿ ಮಾಸಿಕ ಭತ್ಯೆ 5,000 ರೂ ಇತ್ತು. ಅದನ್ನು 9,000 ರೂಗೆ ಏರಿಸಲಾಗಿದೆ. ಸ್ಕೀಮ್‌ನಲ್ಲಿ ರಾಲಿಂಗ್ ಇಂಟರ್ನ್‌ಶಿಪ್ ಸೈಕಲ್ ವಿಧಾನವನ್ನು ಅಳವಡಿಸಲಾಗಿದೆ. ಇದರಿಂದ ನಿರಂತರವಾಗಿ ಪೋಸ್ಟಿಂಗ್, ಆಯ್ಕೆಗೆ ಅವಕಾಶ ಇರುತ್ತದೆ. ಮಾರ್ಗಸೂಚಿ ಬದಲಾವಣೆ ಎಂದರೆ, ಈ ಸ್ಕೀಮ್‌ನಲ್ಲಿ ಭಾಗವಹಿಸುವ ಕಂಪನಿಗಳ ಸಂಖ್ಯೆ ಮತ್ತು ವಿಸ್ತಾರವನ್ನು ಹೆಚ್ಚಿಸಲಾಗಿದೆ.

ಇಂಟರ್ನ್‌ಸಿಪ್ ಸ್ಕೀಮ್‌ನ ಮೊದಲ ಸುತ್ತಿನ ಪ್ರಾಜೆಕ್ಟ್‌ನಲ್ಲಿ ಪಾರ್ಟ್ನರ್ ಕಂಪನಿಗಳು 1.27 ಲಕ್ಷ ಇಂಟರ್ನ್‌ಶಿಪ್ ಅವಕಾಶವನ್ನು ನೀಡಲಾಯಿತು. ಈ ಮೇಲಿನ 60,000 ಅಭ್ಯರ್ಥಿಗಳಿಗೆ 82,000 ಆಫರ್ ನೀಡಲಾಗಿದೆ. ಅವರಲ್ಲಿ 8,760 ಮಂದಿ ಇಂಟರ್ನ್‌ಶಿಪ್‌ಗೆ ಸೇರ್ಪಡೆಯಾಗಿದ್ದರು.

ಇನ್ನು ಎರಡನೇ ಸುತ್ತಿನಲ್ಲಿ ಪಾಲುದಾರ ಕಂಪನಿಗಳಿಗೆ 1.18 ಇಂಟರ್ನ್‌ಶಿಪ್ ಲಕ್ಷ ಅವಕಾಶ ನೀಡಲಾಗಿತ್ತು. 71,000 ಅಭ್ಯರ್ಥಿಗಳಿಗೆ 83,000 ಆಫರ್ ನೀಡಲಾಗಿದೆ. ಈ ಮೇಲಿನ 7,300 ಮಂದಿ ಇಂಟರ್ನ್‌ಶಿಪ್ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ಸರ್ಕಾರದ ಸುಕನ್ಯಾ ಸಮೃದ್ದಿ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?

ಈ ಸ್ಕೀಮ್ನ ಮೊದಲ ಎರಡು ಸುತ್ತಿನ ಅಭ್ಯರ್ಥಿಗಳಿಂದ ನೀರಸ ಪ್ರತಿಕ್ರಿಯೆ ಬರಲು ಕೆಲವು ಕಾರಣಗಳನ್ನು ಪತ್ತೆ ಮಾಡಲಾಗಿದೆ. ಇಂಟರ್ನ್‌ಶಿಪ್ ಮಾಡಲು ಅಭ್ಯರ್ಥಿಗಳಿಗೆ 5 ರಿಂದ 10 ಕಿಮೀ ದೂರ ಪ್ರಯಾಣ ಉತ್ತಮ ಆಯ್ಕೆ ಎಂಬುದು ಇತ್ತೀಚಿನ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಜೊತೆಗೆ, 12 ತಿಂಗಳ ಇಂಟರ್ನ್ ಅವಧಿ ತೀರಾ ಹೆಚ್ಚಾಯಿತು ಎಂಬ ಅಭಿಪ್ರಾಯಗಳೂ ಬಂದಿದ್ದವು. ಈ ಕಾರಣಕ್ಕೆ ಸರ್ಕಾರ ಸ್ಕಿಮ್‌ನ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *