ಜನವರಿ, ನವೆಂಬರ್ 17: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (ಪಿಎಂ ಕಿಸಾನ್ ಯೋಜನೆ) 21ನೇ ಕಂತಿನ ಹಣವನ್ನು ಸರ್ಕಾರ ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಿದೆ. ವರದಿಗಳ ಪ್ರಕಾರ 2025ರ ನವೆಂಬರ್ 19, ಬುಧವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 10 ಕೋಟಿ ರೈತರು (ರೈತರು) ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಕೊಡಲಿದ್ದಾರೆ. ಹಿಂದಿನ ಕಾಂತಿನ ಹಣವನ್ನು ವಾರಾಣಸಿಯಿಂದ ಪ್ರಧಾನಿಗಳು ಆ. 2ರಂದು ಬಿಡುಗಡೆ ಮಾಡಿದರು.
ಏನಿದು ಪಿಎಂ ಕಿಸಾನ್ ಯೋಜನೆ?
ಕಾಯಕದಲ್ಲಿ ನಿರತ ರೈತರಿಗೆ ಧನ ಸಹಾಯ ನೀಡುವ ಯೋಜನೆ ಪಿಎಂ ಕಿಸಾನ್. 2019ರಲ್ಲಿ ಪ್ರಾರಂಭವಾದ ಈ ಸ್ಕೀಮ್ ಅಡಿಯಲ್ಲಿ ಅರ್ಹ ರೈತರಿಗೆ 2,000 ರೂಗಳು 3 ಕಂತುಗಳಲ್ಲಿ, ವರ್ಷಕ್ಕೆ ಒಟ್ಟು 6,000 ರೂ ಹಣ ಖರ್ಚಾಗುತ್ತದೆ. ಪ್ರತೀ ಬೆಳೆ ಸೀಸನ್‌ಗೆ ಮುಂಚೆ ರೈತರಿಗೆ ಸರ್ಕಾರ ನೀಡುವ ನೆರವಿನ ಹಣ ಇದು. ಬೀಜ, ರಸಗೊಬ್ಬರ ವೆಚ್ಚಗಳಿಗೆ ನೆರವಾಗಲು ಈ ಸ್ಕೀಮ್ ಇದೆ.
ಇದನ್ನೂ ಓದಿ: ಪಿಎಂ ಕಿಸಾನ್: ಈ ಬಾರಿ ಕೆಲ ರೈತರಿಗೆ 2,000 ಬದಲಿಗೆ 4,000 ರೂ ಸಿಗುತ್ತಾ? ಇಲ್ಲಿದೆ ಕಾರಣ
ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಿದ್ದರೆ ಈ ಕೆಲಸ ಮಾಡಿ…
ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ಇತ್ತೀಚೆಗೆ ನೊಂದಾಯಿಸಿದ್ದು, ಮೊದಲ ಕಂತಿನ ನಿರೀಕ್ಷೆಯಲ್ಲಿದ್ದರೆ ಮೊದಲು ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಪರಿಶೀಲಿಸಿ.
ಪಿಎಂ ಕಿಸಾನ್ ವೆಬ್ ಸೈಟ್ ವಿಳಾಸ ಇದೆ: pmkisan.gov.in/
- ಇಲ್ಲಿ ಮುಖ್ಯಪುಟ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸೆಕ್ಷನ್ ಸಿಗುತ್ತದೆ. ಅಲ್ಲಿ ಬೆನಿಫಿಶಿಯರಿ ಪಟ್ಟಿಯನ್ನು ಕ್ಲಿಕ್ ಮಾಡಿ.
- ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರು ಆಯ್ಕೆ ಮಾಡಿಕೊಳ್ಳಿ.
- ಈ ಗ್ರಾಮದಲ್ಲಿರುವ ಎಲ್ಲಾ ಸದಸ್ಯರ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.
ನಿಮಗೆ ಈ 21 ಕಂತಿನ ಹಣ ಬಿಡುಗಡೆಗೆ ಅನುಮೋದನೆ ಸಿಕ್ಕಿದೆಯಾ ಎಂಬುದನ್ನೂ ಪರಿಶೀಲಿಸಬಹುದು. ಅದಕ್ಕೆ ಇದೆ ಫಾರ್ಮರ್ಸ್ ಕಾರ್ನರ್ ನಲ್ಲಿ ‘ನೋ ಯುವರ್ ಸ್ಟೇಟಸ್’ ಅನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ಅಥವಾ ರಿಜಿಸ್ಟ್ರೇಶನ್ ಐಡಿಯನ್ನು ನಮೂದಿಸಿ. ಇಲ್ಲಿ ನಿಮ್ಮ ಕಂತಿನ ಹಣ ಬಿಡುಗಡೆಗೆ ಅನುಮೋದನೆ ಕೊಡಲಾಗಿದೆಯಾ, ಪೆಂಡಿಂಗ್ನಲ್ಲಿದೆಯಾ ಅಥವಾ ತಡೆ ಹಿಡಿಯಲಾಗಿದೆಯಾ ಎಂಬ ಮಾಹಿತಿ ಸಿಗುತ್ತದೆ.
ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೇರಿಕಾದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರ ಸಖತ್ ಬೇಡಿಕೆ
ನೊಂದಾಯಿಸಿದ್ದರೂ ಬಳಕೆದಾರರ ಪಟ್ಟಿಯಲ್ಲಿ ಯಾಕಿಲ್ಲ?
- ಭೂ ದಾಖಲೆಗಳಲ್ಲಿರುವ ಹೆಸರು ಮತ್ತು ಆಧಾರ್‌ನಲ್ಲಿರುವ ಹೆಸರು ಹೊಂದಿಕೆಯಾಗದೇ ಇರುವುದಾಗಿದೆ
- ತಪ್ಪಾದ ಬ್ಯಾಂಕ್ ಅಕೌಂಟ್
- ಈಕೆವೈಸಿ ಮಾಡದೇ ಇರುವುದು
- ರಾಜ್ಯ ಆಡಳಿತದಿಂದ ಭೂ ದಾಖಲೆಗಳನ್ನು ನವೀಕರಿಸಲಾಗಿದೆ
- ಯೋಜನೆಗೆ ಅನರ್ಹರಾಗದೇ ಇರುವುದು
ಈ ಮೇಲಿನ ಕಾರಣಗಳಿಂದ ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದೇ ಇರಬಹುದು. ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಲ್ಲಾ ಮಾಹಿತಿಯನ್ನು ಅಪ್‌ಡೇಟ್ ಮಾಡಿ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ