Headlines

ಇಂಧನ ಪರಿಸ್ಥಿತಿ ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ ಪಿಎಂ ಮೋದಿ

ಇಂಧನ ಪರಿಸ್ಥಿತಿ ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ ಪಿಎಂ ಮೋದಿ


ಇಂಧನ ಪರಿಸ್ಥಿತಿ ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ ಪಿಎಂ ಮೋದಿ

ಜನವರಿ 22: ಜಾಗತಿಕ ತೈಲ ಬಿಕ್ಕಟ್ಟು (ತೈಲ ಬಿಕ್ಕಟ್ಟು) ತೀವ್ರಗೊಳ್ಳುತ್ತಿದೆ. ಭಾರತದಲ್ಲಿ ಸರ್ಕಾರವು ಇಂಧನ ಪೂರೈಕೆಗೆ ಹರಸಾಹಸ ಮಾಡುತ್ತಿದೆ. ಈ ಮುಂದುವರಿದ ಸಂಕಷ್ಟ ಎದುರಿಸಲು ನಡೆದಿರುವ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಧಾನಿಗಳ ಉನ್ನತ ಮಟ್ಟದ ಸಭೆ ನಡೆದಿದೆ. ಪೆಟ್ರೋಲಿಯಂ, ಕಚ್ಚಾ ತೈಲ, ನೈಸರ್ಗಿಕ ಅನಿಲ್, ವಿದ್ಯುತ್, ರಸಗೊಬ್ಬರ ಸೆಕ್ಟರ್‌ಗಳಲ್ಲಿ ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಭೆ ನಡೆಸಿದರು.

ಅತಿರೇಕದ ಸ್ಥಿತಿ ಬಂದರೆ ದೇಶದಲ್ಲಿ ಈ ವಿವಿಧ ಇಂಧನ ಸರಕುಗಳ ದಾಸ್ತಾನು ಎಷ್ಟಿದೆ, ಆಮದು ಬೇಕು, ಸಿದ್ಧತೆಯ ಯೋಜನೆಗಳು ಏನೇನು ಎಂಬಿತ್ಯಾದಿ ಸರ್ಕಾರದ ಈ ಸಂಬಂಧಿತ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ನಿವೇದಿಸಿದರು. ವಿವಿಧ ಸಚಿವರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಹೋಟೆಲ್, ಮುಂಗಟ್ಟುಗಳಿಗೆ ನಿರಾಳ ಸುದ್ದಿ; ರಾಜ್ಯಗಳಿಗೆ ಕಮರ್ಷಿಯಲ್ ಎಲ್ ಪಿಜಿ ಪೂರೈಕೆ ಶೇ. 50ಕ್ಕೆ ಏರಿಕೆ

ಕಚ್ಚಾ ತೈಲ ಬೆಲೆ ಎಷ್ಟಿದ್ದರೂ ಭಾರತ ರಷ್ಯಾದಿಂದ ಅದರ ಪೂರೈಕೆಯಾಗಿದೆ. ಭಾರತದಲ್ಲೂ ಪೆಟ್ರೋಲಿಯಂ ದಾಸ್ತಾನು ತಕ್ಕಮಟ್ಟಿಗೆ ಇದೆ. ಹೀಗಾಗಿ, ತೈಲ ಬೆಲೆ ಏರಿಕೆಯ ಶಾಕ್ ಅನ್ನು ಭಾರತ ತಡೆದುಕೊಂಡು, ಸಾಮಾನ್ಯ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯಾಗದಂತೆ ನೋಡಿಕೊಂಡಿದೆ. ಪ್ರೀಮಿಯಂ ಪೆಟ್ರೋಲ್ ಬೆಲೆ ಮಾತ್ರ ಏರಿಕೆಯಾಗಿರುವುದು.

ಭಾರತಕ್ಕೆ ನೈಸರ್ಗಿಕ ಅನಿಲದ ಅಭಾವವೂ ಹೆಚ್ಚೇನೂ ಕಾಡುತ್ತಿಲ್ಲ. ಪೈಪ್ಡ್ ಗ್ಯಾಸ್ ಪೂರೈಕೆ ನಿರಂತರವಾಗಿದೆ. ಅರ್ಧಕ್ಕಿಂತ ಹೆಚ್ಚಿನ ನೈಸರ್ಗಿಕ ಅನಿಲವು ಭಾರತದಲ್ಲೇ ಸಿದ್ಧವಾಗುತ್ತಿರುವುದರಿಂದ ಅದರ ಪೂರೈಕೆಯಲ್ಲಿ ಅಷ್ಟೇನೂ ವ್ಯತ್ಯಯ ಆಗಿಲ್ಲ. ಆಸ್ಟ್ರೇಲಿಯಾ, ಕೆನಡಾ ಇತ್ಯಾದಿ ಮೂಲಗಳಿಂದ ನ್ಯಾಚುರಲ್ ಗ್ಯಾಸ್ ಪೂರೈಕೆಯನ್ನು ಭಾರತ ಪಡೆಯುತ್ತಿದೆ.

ಆದರೆ, ದೇಶಕ್ಕೆ ಹೆಚ್ಚಿನ ಸಮಸ್ಯೆಯಾಗಿರುವುದು ಎಲ್ ಪಿಜಿಯದ್ದು. ಈ ಪೆಟ್ರೋಲಿಯಂ ಗ್ಯಾಸ್ ಅಭಾವ ಹೆಚ್ಚು ಕಾಡುತ್ತಿದೆ. ಕಮರ್ಷಿಯಲ್ ಗ್ಯಾಸ್ ಬಳಕೆಗೆ ನಿರ್ಬಂಧಗಳನ್ನು ಹಾಕಿದೆ. ಗೃಹಬಳಕೆ ಎಲ್ಪಿಜಿ ಪೂರೈಕೆಗೆ ಸರ್ಕಾರ ಮೊದಲ ಆದ್ಯತೆ ಕೊಟ್ಟಿದೆ. ಕಮರ್ಷಿಯಲ್ ಗ್ಯಾಸ್ ವಿಚಾರದಲ್ಲಿ ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಸಾಮಾನ್ಯ ಜನರಿಗೆ ಸೇವೆಗಳಿಗೆ ಆದ್ಯತೆ ಕೊಡಲಾಗುತ್ತಿದೆ.

ಇದನ್ನೂ ಓದಿ: ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?

ವಾಹನಗಳಿಗೆ ಹಾಕಲಾಗುವ ಸಿಎನ್‌ಜಿ ಗ್ಯಾಸ್ ಪೂರೈಕೆಯಾಗಿದೆ ಎಂದು ಸರ್ಕಾರ ಹೇಳಿದ್ದರೂ ಹಲವು ನಗರಗಳಲ್ಲಿ ಸಿಎನ್‌ಜಿ ಸ್ಟೇಷನ್‌ಗಳಲ್ಲಿ ಉದ್ದದ ಕ್ಯೂಗಳಿದೆ ಎಂದು ವರದಿಗಳು ಬಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *