ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ-ಅಣ್ಣಾಮಲೈ, ಕನ್ನಡದಲ್ಲಿ ಮೋದಿ ಅಭಿನಂದನೆ

ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ-ಅಣ್ಣಾಮಲೈ, ಕನ್ನಡದಲ್ಲಿ ಮೋದಿ ಅಭಿನಂದನೆ

ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ-ಅಣ್ಣಾಮಲೈ, ಕನ್ನಡದಲ್ಲಿ ಮೋದಿ ಅಭಿನಂದನೆ

ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ-ಅಣ್ಣಾಮಲೈ, ಕನ್ನಡದಲ್ಲಿ ಮೋದಿ ಅಭಿನಂದನೆ, ಅತೀ ಕಠಿಣ ಹಾಗೂ ಸವಾಲಿನ ಈಜು, ಓಟ ಹಾಗೂ ಸೈಕ್ಲಿಂಗ್ ಮೂಲಕ ಟ್ರಯಥ್ಲಾನ್ ಪೂರ್ಣಗೊಳಿಸಿದ್ದಾರೆ.

ಗೋವಾದಲ್ಲಿ ಪ್ರತಿ ವರ್ಷ ನಡೆಯುವ ಐರನ್ ಮ್ಯಾನ್ ಟ್ರಯಥ್ಲಾನ್ ಈ ಬಾರಿಯೂ ವಿಶ್ವದ ಗಮನಸೆಳೆದಿದೆ. ಕಳೆದ ಕೆಲ ವರ್ಷಗಳಿಂದ ಸಂಸದ ತೇಜಸ್ವಿ ಸೂರ್ಯ ಗೋವಾ ಐರನ್ ಮ್ಯಾನ್ ಟ್ರಯಥ್ಲಾನ್ ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದಾರೆ. ಈ ಬಾರಿ ತೇಜಸಿ ಸೂರ್ಯ ಜೊತೆಗೆ ಬಿಜೆಪಿಯ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ಅಣ್ಣಾಮಲೈ ಸೇರಿಕೊಂಡಿದ್ದಾರೆ.

ಗೋವಾ ಐರನ್ ಮ್ಯಾನ್ 70.3 ಟ್ರಯಥ್ಲಾನ್ ರೇಸ್‌ನ್ನು ತೇಜಸ್ವಿ ಸೂರ್ಯ ಹಾಗೂ ಅಣ್ಣಾಮಲೈ ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಟ್ರಯಥ್ಲಾನ್ ಯಶಸ್ವಿಯಾಗಿ ಪೂರ್ಣಗೊಳಿಸಲು ಭಾಗವಹಿಸುವರು 21.1 ಕಿಲೋಮೀಟರ್ ಓಟ, 90 ಕಿಲೋಮೀಟರ್ ಸೈಕ್ಲಿಂಗ್ ಹಾಗೂ 1900 ಮೀಟರ್ ಈಜು ಪೂರ್ಣಗೊಳಿಸಬೇಕು.

ಗೋವಾ ಐರನ್ ಮ್ಯಾನ್ ಟ್ರಯಥ್ಲಾನ್‌ನಲ್ಲಿ ಬಿಜೆಪಿ ಇಬ್ಬರು ನಾಯಕರಾದ ತೇಜಸ್ವಿ ಸೂರ್ಯ ಹಾಗೂ ಅಣ್ಣಾಮಲೈ ಯಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ವಿಶೇಷ ಎಂದರೆ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡದಲ್ಲಿ ಮೋದಿ ಅಭಿನಂದನೆ

ಗೋವಾದಲ್ಲಿ ಇಂದು ನಡೆದ ಐರನ್ ಮ್ಯಾನ್ 70.3 ನಂತಹ ಕಾರ್ಯಕ್ರಮಗಳಲ್ಲಿ ನಮ್ಮ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದನ್ನು ನೋಡಿ ಸಂತೋಷವಾಯಿತು. ಇಂತಹ ಕಾರ್ಯಕ್ರಮಗಳು #FitIndia ಆಂದೋಲನಕ್ಕೆ ಕೊಡುಗೆ ನೀಡುತ್ತವೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಐರನ್ ಮ್ಯಾನ್ ಟ್ರಯಥ್ಲಾನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಲ್ಲಿ ನಮ್ಮ ಪಕ್ಷದ ಇಬ್ಬರು ಯುವ ಸಹೋದ್ಯೋಗಿಗಳಾದ ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ ಸೇರಿದ್ದಾರೆ ಎಂದು ತಿಳಿದು ಸಂತೋಷವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಕನ್ನಡದಲ್ಲಿ ಮಾಡಿದ ಟ್ವೀಟ್ ಏನು?

2024ರಲ್ಲಿ ತೇಜಸ್ವಿ ಸೂರ್ಯ ಗೋವಾ ಐರನ್ ಮ್ಯಾನ್ ಟ್ರಯಥ್ಲಾನ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಈ ಮೂಲಕ ದಾಖಲೆ ಬರೆದಿದ್ದರು. ಗೋವಾ ಟ್ರಯಥ್ಲಾನ್ ಯಶಸ್ವಿಯಾಗಿ ಪೂರೈಸಿದ ಮೊದಲ ಜನಪ್ರತಿನಿಧಿ ಎಂಬ ದಾಖಲೆ ಬರೆದಿದ್ದರು. ಹಲವು ದೇಶಗಳಿಂದ ಕ್ರೀಪಾಡಪಟುಗಳು, ಫಿಟ್ನೆಸ್ ಆಸಕ್ತರು ಈ ರೇಸ್‌ನಲ್ಲಿ ಪಾಲ್ಗೊಳ್ಳುತ್ತಾರೆ.

2024ರಲ್ಲಿ ದಾಖಲೆ ಬರೆದಿದ್ದ ತೇಜಸ್ವಿ ಸೂರ್ಯ

Source link

Leave a Reply

Your email address will not be published. Required fields are marked *