Headlines

ಧರುಂಧರ್ 2 ಸಿನಿಮಾ ತೆರೆ ಮೇಲೆ ಮೋದಿ ಮೋಡಿ, ಬಾಲಿವುಡ್‌ನಲ್ಲಿ ಪ್ರಧಾನಿ ಸಂಚಲನ

ಧರುಂಧರ್  2 ಸಿನಿಮಾ ತೆರೆ ಮೇಲೆ ಮೋದಿ ಮೋಡಿ, ಬಾಲಿವುಡ್‌ನಲ್ಲಿ ಪ್ರಧಾನಿ ಸಂಚಲನ

ಧರುಂಧರ್  2 ಸಿನಿಮಾ ತೆರೆ ಮೇಲೆ ಮೋದಿ ಮೋಡಿ, ಬಾಲಿವುಡ್‌ನಲ್ಲಿ ಪ್ರಧಾನಿ ಸಂಚಲನ

ಧರುಂಧರ್ 2 ಸಿನಿಮಾ ತೆರೆ ಮೇಲೆ ಮೋದಿ ಮೋಡಿ, ಬಾಲಿವುಡ್‌ನಲ್ಲಿ ಪ್ರಧಾನಿ ಸಂಚಲನ ಮೂಡಿಸಿದ್ದಾರೆ. ಧುರಂಧರ್ 2 ಸಿನಿಮಾದಲ್ಲಿ ಮೋದಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ಸಂಭ್ರಮ ಜೋರಾಗಿದೆ.

ಧುರಂಧರ್ 2 ಸಿನಿಮಾಗೆ ಭರ್ಜರಿ ಪ್ರತ್ರಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹಲವು ದಾಖಲೆ ಮುರಿದಿದೆ. ಅದಿತ್ಯ ಧಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ನಟನೆಗೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಧುರಂಧರ್ ಸಿನಿಮಾಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದರೆ ಧುರಂಧರ್ 2 ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ನ ಧುರಂಧರ್ ಸಿನಿಮಾದ ಎರಡು ಸೀನ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಧುರಂಧರ್ 2 ಸಿನಿಮಾ ತೆರೆ ಮೇಲೆ ಮೋದಿ ಕಾಣಿಸಿಕೊಂಡಿದ್ದೇ ತಡ ಅಭಿಮಾನಿಗಳಲ್ಲಿ ಸಂಚಲನ ಮೂಡಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ ಹಾಗೂ 2016ರ ನೋಟು ಅಮಾನ್ಯೀಕರಣ ಸಂದರ್ಭದ ಎರಡು ಭಾಷಣದ ತುಣುಕುಗಳನ್ನು ಧುರಂಧರ್ 2 ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯ ಭಾಷಣದ ಎರಡು ತುಣುಕುಗಳನ್ನು ಯಥವಾತ್ತಾಗಿ ಧುರಂಧರ್ 2 ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ಈ ಸೀನ್ ಬಂದಾಗ ಥಿಯೇಟರ್‌ನಲ್ಲಿ ಜನರು ಶಿಳ್ಳೆ, ಚಪ್ಪಾಳೆ ಮೂಲಕ ಕುಣಿದು ಕುಪ್ಪಳಿಸಿದ್ದಾರೆ. ಪ್ರಧಾನಿ ಮೋದಿ ಸೀನ್ ಇದೀಗ ಭಾರಿ ಚರ್ಚೆಯಾಗುತ್ತಿದೆ.

ಧುರಂಧರ್ ಸಿನಿಮಾ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧುರಂಧರ್ 1 ಸಿನಿಮಾದಲ್ಲಿ ಅಕ್ಷಯ್ ಖನ್ನ ಎಲ್ಲರ ಗಮನಸೆಳೆದಿದ್ದರು, ಧುರಂಧರ್ 2 ಸಿನಿಮಾದಲ್ಲಿ ಪ್ರಧಾನಿ ಮೋದಿ ಎಲ್ಲರ ಗಮನಸೆಳೆದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.

ಧುರಧರ್ 2 ಸಿನಿಮಾ ಕುರಿತು ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಎಐಎಂಐಎಂ ನಾಯಕ ವಾರಿಸ್ ಪಠಾಣ್ ಸೇರಿದಂತೆ ಹಲವು ನಾಯಕರು ಇದು ಪ್ರಪೋಗಾಂಡ ಸಿನಿಮಾ ಎಂದು ದೂರಿದ್ದಾರೆ. ಧುರಂಧರ್ 2 ಸಿನಿಮಾ ಕಟ್ಟು ಕತೆ, ಸುಳ್ಳುಗಳನ್ನೇ ಹೇಳಿದ್ದಾರೆ ಎಂದು ಕೆಲ ಅಲ್ಪಸಂಖ್ಯಾತ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

CBFC ಸರ್ಟಿಫಿಕೇಟ್ ವೇಳೆ ಮಂಡಳಿ ಸಿನಿಮಾಗೆ ಹಲವು ಕತ್ತರಿ ಹಾಕಿದೆ. ಹಲವು ಸೀನ್‌ಗಳನ್ನು ಕತ್ತರಿಸುವಂತೆ ಸೂಚಿಸಿತ್ತು. ಈ ಸೀನ್ ಕತ್ತರಿ ಹಾಕಿದ ಬಳಿಕ ಎ ಸರ್ಟಿಫಿಕೇಟ್ ನೀಡಿದೆ. ಆದರೆ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಧುರಂಧರ್ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇದೀಗ ಧುರಂಧರ್ ಹಲವು ಬಾಲಿವುಡ್ ಸಿನಿಮಾ ದಾಖಲೆ ಮುರಿಯುವ ಸಾಧ್ಯತೆ ಇದೆ.

ಸಿನಿಮಾಗೆ ಕತ್ತರಿ ಹಾಕಿದ್ದ CBFC

Source link

Leave a Reply

Your email address will not be published. Required fields are marked *