ಪ್ರಧಾನಿ ಮೋದಿ ವಿಮಾನ ಹೆದ್ದಾರಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಸ್ಸಾಂ

ಪ್ರಧಾನಿ ಮೋದಿ ವಿಮಾನ ಹೆದ್ದಾರಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಸ್ಸಾಂ


ಪ್ರಧಾನಿ ಮೋದಿ ವಿಮಾನ ರಸ್ತೆಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್

ಗುವಾಹಟಿ, ಫೆ.14: ಅಸ್ಸಾಂ ರಾಜ್ಯದ ಅಭಿವೃದ್ಧಿ ಮತ್ತು ರಕ್ಷಣಾ ಸನ್ನದ್ಧತೆಯ ದೃಷ್ಟಿಯಿಂದ ಇಂದು ಒಂದು ಅಭೂತಪೂರ್ವ ಘಟನೆ ನಡೆದಿದೆ. ಅಸ್ಸಾನ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾದ ‘ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿ’ (ELF) ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಮಾನಗಳು ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸವನ್ನು ನಿರ್ಮಿಸಲಾಗಿದೆ.

ಸಾಮಾನ್ಯವಾಗಿ ವಿಮಾನಗಳು ಇಳಿಯಲು ಸುಸಜ್ಜಿತ ವಿಮಾನ ನಿಲ್ದಾಣಗಳ ಅವಶ್ಯಕತೆ ಇರುತ್ತದೆ. ಆದರೆ, ಯುದ್ಧ ಅಥವಾ ತುರ್ತು ಪರಿಸ್ಥಿತಿಯ ವಾಯುಪಡೆಯ ವಿಮಾನಗಳು ಸುಲಭವಾಗಿ ಇಳಿಯಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಗಳನ್ನೇ ರನ್‌ವೇಗಳಾಗಿ ಪರಿವರ್ತಿಸಿ. ಅಸ್ಸಾಂನಲ್ಲಿ ಇಂತಹ ವ್ಯವಸ್ಥೆಯನ್ನು ಪ್ರಧಾನಿ ಮೋದಿಯವರು ಇಂದು ಉದ್ಘಾಟಿಸಿದರು, ತಾವೇ ಅದರಲ್ಲಿ ಇಳಿಯುವ ಅದರ ದಕ್ಷತೆಯನ್ನು ಜಗತ್ತಿಗೆ ಸಾರಿದ್ದಾರೆ.

ಈ ಹೆದ್ದಾರಿ ರನ್‌ವೇ ಈಶಾನ್ಯ ಭಾರತದ ಗಡಿ ಭಾಗಗಳಲ್ಲಿ ಭಾರತೀಯ ವಾಯುಪಡೆಯ (IAF) ಕಾರ್ಯಾಚರಣೆಯನ್ನು ಮತ್ತಷ್ಟು ವೇಗಗೊಳಿಸಲಾಗಿದೆ. ಫೈಟರ್ ಜೆಟ್‌ಗಳು ಸೇರಿದಂತೆ ದೊಡ್ಡ ಸರಕು ಸಾಗಣೆ ವಿಮಾನಗಳು ಕೂಡ ಇಲ್ಲಿ ಸುಲಭವಾಗಿ ಇಳಿಯುವಂತೆ ರಸ್ತೆಯನ್ನು ವಿನ್ಯಾಸಗೊಳಿಸಲಾಗಿದೆ. ಅಸ್ಸಾನ್ನ ಸಂಪರ್ಕ ವ್ಯವಸ್ಥೆಯು ಕೇವಲ ಪ್ರಯಾಣಕ್ಕಷ್ಟೇ ಸೀಮಿತವಾಗದೆ, ದೇಶದ ಭದ್ರತೆಗೂ ಪೂರಕವಾಗಿದೆ ಎಂಬುದಕ್ಕೆ ಸಾಕ್ಷಿ.

ಈ ಐತಿಹಾಸಿಕ ಲ್ಯಾಂಡಿಂಗ್ ನಂತರ ಮಾತನಾಡಿದ ಪ್ರಧಾನಿ, “ಈ ಯೋಜನೆಯು ಈಶಾನ್ಯ ಭಾರತ ಬದಲಾಗುತ್ತಿರುವ ಚಿತ್ರಣಕ್ಕೆ ಮತ್ತು ಭಾರತದ ಬಲಿಷ್ಠ ಮೂಲಸೌಕರ್ಯಕ್ಕೆ ದ್ಯೋತಕವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು. ನಂತರ ಪ್ರಧಾನಿಯವರು ವೀಕ್ಷಣಾ ಗ್ಯಾಲರಿಯಿಂದ ಸುಮಾರು 40 ನಿಮಿಷಗಳ ಕಾಲ ನಡೆದ ರೋಚಕ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿದರು. ಭಾರತದ ಅತ್ಯಾಧುನಿಕ ರಫೇಲ್ ಮತ್ತು ಸುಖೋಯ್-30 MKI ಯುದ್ಧ ವಿಮಾನಗಳು ಹೆದ್ದಾರಿಯಲ್ಲಿ ಹಾರಾಟ ನಡೆಸುವ ಮೂಲಕ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದವು.

ಇಲ್ಲಿದೆ ನೋಡಿ ವಿಡಿಯೋ:

ಇನ್ನು ವಾಯುಪಡೆಯ ‘ಕಾರ್ಯಕುದುರೆ’ ಎಂದು ಖ್ಯಾತಿಯಾದ An-3 ಸಾರಿಗೆಯೂ ಈ ಪ್ರದರ್ಶನದಲ್ಲಿ ಗಮನ ಸೆಳೆಯಿತು. ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಮೂಲಕ ಮಾನವೀಯ ನೆರವು, ವಿಪತ್ತು ಪರಿಹಾರ (HADR) ಮತ್ತು ಶೋಧ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು.

ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ

100 ಕೋಟಿ ವೆಚ್ಚದ ಹೈಟೆಕ್ ಯೋಜನೆ:

ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ವಾಯುಪಡೆಯ ಸಮನ್ವಯದೊಂದಿಗೆ ನಿರ್ಮಿಸಲಾಗಿದೆ. ಯುದ್ಧದ ಸಮಯ ಅಥವಾ ಪ್ರಕೃತಿ ವಿಕೋಪದಂತಹ ತುರ್ತು ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಸುರಕ್ಷಿತವಾಗಿ ಇಳಿಯಲು ಇದು ಸಹಕಾರಿಯಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *