Headlines

ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ

ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ

ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ

ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, ಮಂದಿರದ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಉರುಳಿದೆ. ಸತತ ದಾಳಿಗೆ ಎದೆಯೊಡ್ಡಿ ನಿಂತ ಸೋಮನಾಥ ಮಂದಿರ ಭಾರತದ ಇತಿಹಾಸ ಹೇಳುತ್ತಿದೆ. ಈ ಸ್ವಾಭಿಮಾನ ಪರ್ವದಲ್ಲಿ ಮೋದಿ ಪಾಲ್ಗೊಂಡಿದ್ದಾರೆ.

ಗುಜರಾತ್‌ನಲ್ಲಿರುವ ಸೋಮನಾಥ ಮಂದಿರದ ಮೇಲಿನ ದಾಳಿ ಬಗ್ಗೆ ಹಲವರಿಗೆ ತಿಳಿದಿದೆ. ಆದರೆ ಕ್ರೂರತೆ ಬಗ್ಗೆ ಸ್ಪಷ್ಟ ಅರಿವಿಲ್ಲ. ಸೋಮನಾಥ ಮಂದಿರದ ಮೇಲೆ ಮೊದಲ ದಾಳಿಯಾಗಿ 2026ನೇ ಇಸವಿಗೆ ಬರೋಬ್ಬರಿ 1000 ವರ್ಷಗಳು ಸಂದಿದೆ. ಮೊಹಮ್ಮದ್ ಘಜ್ನಿ, ಘೋರಿ ಸತತ ದಾಳಿಯಲ್ಲಿ ಸೋಮನಾಥ ಮಂದಿರ ಧ್ವಂಸಗೊಂಡಿದೆ. ಆದರೆ ಪ್ರತಿ ಬಾರಿ ಹಿಂದೂ ರಾಜ ಮಹಾರಾಜರು, ಜನಸಾಮಾನ್ಯರು ಹೋರಾಟ ಮಾಡಿ ಮತ್ತೆ ಮಂದಿ ಕಟ್ಟಿದ್ದಾರೆ. ಇದೀಗ ಸೋಮನಾಥ ಮಂದಿರ ಸ್ವಾಭಿಮಾನ ಪರ್ವ ಆಚರಿಸುತ್ತಿದೆ. ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ.

ಸೋಮನಾಥ ಮಂದಿರದ ಮೇಲೆ ಆಕ್ರಮಣಕಾರರು ದಾಳಿ ನಡೆಸಿದಾಗ, ದೇವಸ್ಥಾನ ಉಳಿಸಲು ಹಲವರು ಹೋರಾಡಿ ವೀರ ಮರಣ ಅಪ್ಪಿದ್ದಾರೆ. ಹೀಗೆ ತ್ಯಾಗ ಬಲಿದಾನ ಮಾಡಿದ ವೀರರ ಪುತ್ಥಳಿಗೆ ಪ್ರಧಾನಿ ಮೋದಿಹೂವು ಅರ್ಪಿಸಿ ಶೌರ್ಯ ನೆನೆದಿದ್ದಾರೆ. ಈ ಶೌರ್ಯ ಯಾತ್ರೆಯಲ್ಲಿ ಸೋಮನಾಥ ಮಂದಿರಕ್ಕೆ ಹೋರಾಡಿದ ಪ್ರತಿಯೊಬ್ಬರ ನೆನೆದಿದ್ದಾರೆ.

ಸೋಮನಾಥ ಮಂದಿರದ ಮೇಲೆ ಮೊಹಮ್ಮದ್ ಘಜ್ನಿ 1026 AD ಮೊದಲು ದಾಳಿ ಮಾಡಿದ್ದ. ಈ ವೇಳೆ ವೀರ್ ಹಮೀರ್ಜಿ ಗೋಹಿಲ್ ಹಾಗೂ ವೇಗದಾಜಿ ಬಿಲ್ ಕುದರೆ ಮೇಲೆ ಭಾರಿ ಹೋರಾಟ ನಡೆಸಿದ್ದರು. ದೇವಸ್ಥಾನ ಉಳಿಸಲು ಉಗ್ರ ಯುದ್ಧವೇ ನಡೆದಿತ್ತು. ಇದರ ನೆನಪಿಗಾಗಿ ಪ್ರಧಾನಿ ಮೋದಿ ಶೌರ್ಯ ಯಾತ್ರೆಯಲ್ಲಿ 108 ಕುದುರೆಯ ಯಾತ್ರೆ ನಡೆಸಲಾಗಿದೆ.

ಸೋಮನಾಥ ಮಂದಿರದಲ್ಲಿ ಪ್ರಧಾನಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಪ್ರಧಾನಿ ಮೋದಿ ಮಹತ್ವದ ಸಂದೇಶ ಸಾರಿದ್ದಾರೆ.ಭಾರತದ ಬಹುತೇಕ ಮಂದಿರಗಳ ಮೇಲೆ ಸತತ ದಾಳಿಯಾಗಿದೆ. ಹಲವು ಮಸೀದಿಗಳಾಗಿ ಪರಿವರ್ತನೆಯಾಗಿದೆ. ಆದರೆ ಕೆಲ ಮಂದಿಗಳು ಎದೆಯೊಡ್ಡಿ ನಿಂತು ಹೋರಾಟ ಎದುರಿಸಿದೆ. ಈ ಪೈಕಿ ಸೋಮನಾಥ ಮಂದಿರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೋಮನಾಥ ಮಂದಿರಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ನಾಯಕರು ಭಕ್ತರತ್ತ ಕೈಬೀಸಿ ಶುಭಕೋರಿದ್ದಾರೆ.

ಜನವರಿ 10 ರಂದು ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಓಂಕಾರ ಮಂತ್ರ ಫಟಿಸಿದ್ದಾರೆ. ಸೋಮನಾಥನ ದರ್ಶನ ಪಡೆದ ಮೋದಿ, ರಾತ್ರಿ ವೇಳೆ ಡ್ರೋನ್ ಶೋ ಕಾರ್ಯಕ್ರಮ ವೀಕ್ಷಿಸಿದರು.

ಸೋಮನಾಥ ಮಂದಿರಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ಸೋಮನಾಥನ ದರ್ಶನ ಪಡೆದಿದ್ದರೆ. ಇದೇ ವೇಳೆ ಪ್ರಧಾನಿ ಮೋದಿ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ದೇಶದ ಮೂಲೆ ಮೂಲೆಗಳಿಂದ ಭಕ್ತರ ಆಗಮನ

ಶೌರ್ಯ ಯಾತ್ರೆಯಲ್ಲಿ ಮೋದಿ ಡಮರುಗ, ತ್ರಿಶೂಲ ಹಿಡಿದು ಗಮನಸೆಳೆದಿದ್ದರು. ಭಕ್ತರು ಸೋಮನಾಥನಿಗೆ ಜೈಕಾರ ಹಾಕುವ ಜೊತೆಗೆ ಮೋದಿ ಮೋದಿ ಎಂದು ಘೋಷಣೆ ಮೊಳಗಿಸಿದ್ದಾರೆ.

ಡಮರುಗ ಹಿಡಿದ ಮೋದಿ

Source link

Leave a Reply

Your email address will not be published. Required fields are marked *