ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ

ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ

ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ

ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ ಮಾಡಲಿದ್ದಾರೆ. ಮೂರು ಅಮೃತ ಭಾರತ್ ರೈಲು ಹಾಗೂ ಮತ್ತೊಂದು ನೂತನ ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ. ಯಾವ ಮಾರ್ಗದಲ್ಲಿ ಸಂಚಾರ?

ಭಾರತೀಯ ರೈಲು ಸೇವೆಯಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಮೂಲಭೂತ ಸೌಕರ್ಯಗಳು, ರೈಲು ನಿಲ್ದಾಣಗಳ ನವೀಕರಣ, ಸಂಪೂರ್ಣ ಎಲೆಕ್ಟ್ರಿಫಿಕೇಶನ್ ಸೇರಿದಂತೆ ಹಲವು ಸುಧಾರಣಗಳು ಆಗಿದೆ. ಇದರ ಜೊತೆಗೆ ವಂದೇ ಭಾರತ್ ರೈಲು, ನಮೋ ಭಾರತ್ ರೈಲು, ಅಮೃತ ಭಾರತ್ ರೈಲುಗಳು ಸೇರ್ಪಡೆಗೊಂಡಿದೆ. ಇದೀಗ ಮಂಗಳೂರಿಗೆ ಅಮೃತ್ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಇಂದು ಮೂರು ಅಮೃತ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಕೇರಳದಲ್ಲಿಂದು ಮೂರು ಅಮೃತ ಭಾರತ್ ಹಾಗೂ ಮತ್ತೊಂದು ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ. ವಿಶೇಷ ಈ ಪೈಕಿ ಒಂದು ರೈಲು ಮಂಗಳೂರಿಗೆ ಸೇವೆ ನೀಡಲಿದೆ

ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿರುವ ಮೂರು ಅಮೃತ ಭಾರತ್ ಹಾಗೂ ಸಾಮಾನ್ಯ ರೈಲುಗಳ ವಿವರ ಇಲ್ಲಿದೆ. ಮಂಗಳೂರು ನಾಗರಕೊಯಿಲ್ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ತಿರುವನಂತಪುರಂ ತಂಬರಂ ಅಮೃತ್ ಭಾರತ ರೈಲು, ತಿರುವನಂತಪುರಂ ಚಾರ್ಲಪಲ್ಲಿ ಅಮೃತ ಭಾರತ್ ಎಕ್ಸ್‌ಪ್ರೆಸ್ ಹಾಗೂ ತ್ರಿಶೂರ್ ಗುರುವಾಯೂರ್ ಪ್ಯಾಸೆಂಜರ್ ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳ ಸ್ಲೀಪರ್ ರೈಲು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಭಾರತದ ರೈಲು ಸಂಪರ್ಕ ಸೇವೆಯನ್ನು ಪರಿಣಾಮಕಾರಿಯಾಗಿ ನೀಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ.

ದೇಶದ ಮೂಲೆ ಮೂಲೆಯಿಂದ ವಂದೇ ಭಾರತ್ ರೈಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಆರಾಮದಾಯಕ ಪ್ರಯಾಣ ಹಾಗೂ ಅತ್ಯುತ್ತಮ ದರ್ಜೆಯ ಪ್ರಯಾಣಕ್ಕೆ ಜನರು ಬೇಡಿಕೆ ಇಡುತ್ತಾರೆ. ವಂದೇ ಭಾರತ್ ರೈಲಿನಲ್ಲಿ ಪ್ರಯಾಣದ ಅವಧಿಯೂ ಕಡಿಮೆ. ಜೊತೆಗೆ ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯವಾಗಲಿದೆ.

ದೇಶಾದ್ಯಂತ ವಂದೇ ಭಾರತ್ ರೈಲಿಗೆ ಬೇಡಿಕೆ

Source link

Leave a Reply

Your email address will not be published. Required fields are marked *