ಬೆಂಗಳೂರು, ಡಿಸೆಂಬರ್ 01: ಸಿದ್ದಾಪುರ ಠಾಣಾ ನಿರ್ಮಾಣ 7.1 ಕೋಟಿ ರೂ. ದರೋಡೆ ಕೇಸ್ (ದರೋಡೆ ಪ್ರಕರಣ) ಬೆನ್ನಲ್ಲೇ ಪೊಲೀಸ್ ಇಲಾಖೆಯೂ ಅಲರ್ಟ್ ಆಗಿದೆ. ಸಿಎಂಎಸ್ ಸೆಕ್ಯೂರಿಟಿಯಿಂದ ಪದೇ ಪದೇ ಭದ್ರತಾ ಲೋಪ ಆಗುತ್ತಿರುವುದರಿಂದ ಹೊಸ ಮಾರ್ಗಸೂಚಿಗೆ ಸಿದ್ದತೆ ನಡೆಯುತ್ತಿದೆ. ಇದಕ್ಕಾಗಿ ಆರ್ಬಿಐ (RBI) ಮೂಲಕವೇ ಬ್ಯಾಂಕ್ ಅಧಿಕಾರಿಗಳ ಜೊತೆ ಮಹತ್ವದ ಸಭೆ.
ರಾಬರಿ ಬೆನ್ನಲ್ಲೇ ಪೊಲೀಸ್ ಇಲಾಖೆ ಮತ್ತಷ್ಟು ಎಚ್ಚರಿಕೆ
ರಾಜ್ಯವನ್ನೇ ಬೆಚ್ಚಿಬೀಳಸಿದ್ದ ಎಟಿಎಂ ವಾಹನದ ರಾಬರಿ ಕೇಸ್ ತಾರ್ಕಿಕ ಅಂತ್ಯಕ್ಕೆ ಬಂದಿದೆ. 9 ಆರೋಪಿಗಳನ್ನು ಹೆಡೆಮುರಿ ಕಟ್ಟಿರುವ ಖಾಕಿ ಪಡೆ 98% ಹಣವನ್ನು ವಶಕ್ಕೆ ಪಡೆದಿದೆ. ಎಟಿಎಂ ವಾಹನಗಳ ಭದ್ರತಾ ಲೋಪ, ರಾಬರಿಗಳಲ್ಲಿ ಸಿಬ್ಬಂದಿಯಾಗಿದ್ದರೂ ಪೊಲೀಸ್ ಇಲಾಖೆಯು ಮತ್ತಷ್ಟು ಅಲರ್ಟ್ ಆಗಿದೆ.
ಇದನ್ನೂ ಓದಿ: ಬೆಂಗಳೂರು ದರೋಡೆ ಕೇಸ್: 2 ಕೋಟಿ ಕಡಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್
CMS ಸೆಕ್ಯೂರಿಟಿ ಸಂಸ್ಥೆಯ ಭದ್ರತಾ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಸಂಸ್ಥೆಯ ವಿರುದ್ದ ಕ್ರಮಕ್ಕೆ ಕೋರಿ ಪತ್ರ ಪತ್ರ ಬರೆದಿದ್ದಾರೆ. ಅದೇ ರೀತಿ ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೆ ಹೊಸ ಮಾರ್ಗಸೂಚಿಗೂ ನಿರ್ಧರಿಸಲಾಗಿದೆ. ಇದಕ್ಕಾಗಿ ಆರ್ಬಿಐ ಮೂಲಕ ಎಟಿಎಂಗೆ ತುಂಬುವ ಬ್ಯಾಂಕ್ಗಳು, ಸೆಕ್ಯೂರಿಟಿ ಸಂಸ್ಥೆಗಳ ಜೊತೆಗೆ ನಗರ ಪೊಲೀಸ್ ಆಯುಕ್ತರು ಸಭೆ ನಡೆಸಲು ತಯಾರಿ.
ಅದಕ್ಕಾಗಿ ಕಮಿಷನರೇಟ್ ಆಯಾ ವಿಭಾಗಗಳ ಡಿಸಿಪಿಗಳು ಬ್ಯಾಂಕ್‌ಗಳ ಪಟ್ಟಿ ಕಲೆಕ್ಟ್ ಮಾಡ್ತಿದ್ದಾರೆ. ಲಿಸ್ಟ್ ರೆಡಿಯಾದ ಬಳಿಕ ಆರ್ ಬಿಐಗೆ ಮಾರ್ಗಸೂಚಿಗಳ ಬಗ್ಗೆ ಪತ್ರ ಬರೆಯಲಿದ್ದಾರೆ. ಈ ಕುರಿತಾಗಿ ಸೇರ್ಪಡೆ ಆರ್ ಬಿಐ ಅಧಿಕಾರಿಗಳ ಜೊತೆಯೂ ಕಮಿಷನರ್ ಚರ್ಚೆ
ಇದನ್ನೂ ಓದಿ: ಬೆಂಗಳೂರು: 7 ಕೋಟಿ ರೂ. ಹೊತ್ತೊಯ್ದರೂ ಸಿಎಂಎಸ್ ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ
ಇನ್ನು ಬ್ಯಾಂಕ್ ಅಧಿಕಾರಿಗಳು, ಸೆಕ್ಯೂರಿಟಿ ಏಜೆನ್ಸಿಗಳ ಜೊತೆ ಈ ವಾರ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಯಿತು. ಈ ವೇಳೆ ಸಿಬ್ಬಂದಿ ನೇಮಕದಲ್ಲಿ ಎನ್ ಒಸಿ ಪಡೆಯದಿರೋದು, ದಾಖಲೆ ಪಡೆಯಲು ಸಿಬ್ಬಂದಿ ನೇಮಕದ ಬಗ್ಗೆ ತಿಳುವಳಿಕೆ ನೀಡಲಿರುವ ಹೊಸ ಮಾರ್ಗಸೂಚಿ ಬಗ್ಗೆ ತಿಳಿಸಲಾಗುವುದು. ಈ ಬಗ್ಗೆ ಆರ್ ಬಿಐ ಜೊತೆಯೋ ಚರ್ಚೆ ನಡೆಸಿ ಮಾರ್ಗಸೂಚಿ ಪಾಲನೆಗೆ ಬ್ಯಾಂಕ್ ಗಳಿಗೆ ಸೂಚನೆ ಕೊಡಿಸುವ ಕೆಲಸ ಮಾಡಲಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.