ನಮ್ಮಲ್ಲಿ ಕೆಲವರಿಗೆ ಈ ಪ್ರಾಣಿ (ಪ್ರಾಣಿ), ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವುಗಳಿಗೆ ಆಹಾರ ಹಾಕುವುದು, ನೀರು ಕುಡಿಯಲು ಇಡುವುದು ಹೀಗೆ ಹಸಿವು ನೀಗಿಸುವಂತಹ ಪ್ರಯತ್ನ ಮಾಡ್ತಾರೆ. ಈ ಮೂಕ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿದೆ ಎಂದರೆ ತಮ್ಮ ಪ್ರಾಣ ಒತ್ತೆ ಇಟ್ಟು ರಕ್ಷಿಸುತ್ತಾರೆ. ಈ ವಿಡಿಯೋ ನೋಡಿದರೆ ಪೊಲೀಸಪ್ಪನ ಒಳ್ಳೆಯ ಮನಸ್ಸಿಗೆ ನೀವು ಕರಗಿ ಹೋಗ್ತೀರಾ. ಬಿಸಿಲಿನ ಝಳಕ್ಕೆ ರಸ್ತೆಯಲ್ಲಿ ಬಿದ್ದಿದ್ದ ಗುಬ್ಬಚ್ಚಿಗೆ ನೀರು ಕೊಟ್ಟು ಪೊಲೀಸರೊಬ್ಬರು ಬಾಯಾರಿಕೆ ನೀಗಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಕಾಶ್ ಗಾಡಿವಡ್ಡರ್ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕರ್ತವ್ಯ ನಿರತರಾಗಿ ವಾಹನದಲ್ಲಿ ಹೋಗುತ್ತಿದ್ದ ವೇಳೆ ಗುಬ್ಬಚ್ಚಿಯೊಂದು ವಾಹನದೊಳಗೆ ಬಂದು ಏನೋ ಸೂಚನೆ ನೀಡಿದೆ. ಇದನ್ನು ಗಮನಿಸಿದ ವಾಹನ ನಿಲ್ಲಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ಗುಬ್ಬಚ್ಚಿ ಮರಿಯೊಂದು ಬಿಸಿಲಿನ ಜಳಕ್ಕೆ ರಸ್ತೆಗೆ ಬಿದ್ದಿದೆ. ಕೊನೆಗೆ ಗುಬ್ಬಚ್ಚಿಯನ್ನು ಮೆಲ್ಲನೆ ಮೇಲಕ್ಕೆತ್ತಿ ಅದಕ್ಕೆ ನೀರು ಕುಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಕಾಡುಕೋಣ ಹೇಗೆ ಘೀಳಿಡುತ್ತಿದೆ ಗೊತ್ತಾ? ಈ ವಿಡಿಯೋ ನೋಡಿ
ಈ ವಿಡಿಯೋವನ್ನು ಅಧಿಕವಾಗಿ ವೀಕ್ಷಿಸಿದ್ದು, ಒಬ್ಬ ವ್ಯಕ್ತಿ ನಿಮ್ಮ ಒಳ್ಳೆಯ ಮನಸ್ಸು ಕಂಡು ಖುಷಿಯಾಯ್ತು. ಇತರರು, ಮಾಡರ್ನ್ ಪಕ್ಷಿ ಪ್ರೇಮಿ ಸಲಿಂಅಲಿ ಸರ್ ನೀವು. ವೃತ್ತಿ ಜೀವನದ ಜೊತೆಯಲ್ಲಿಯೇ ಪ್ರಾಣಿ ಪಕ್ಷಗಳನ್ನು ಸಂರಕ್ಷಿಸುವಲ್ಲಿ ನಿಮ್ಮ ಪಾತ್ರ ಅಪಾರ ಸರ್.. ಸಾಮಾಜಿಕ ಜಾಲತಾಣದಲ್ಲಿ ನೋಡ್ತಿರ್ತೀವಿ ಸರ್ ಆ ದೇವರು ನಿಮಗೆ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ಸರ್ ಜೀ ಹೇಳಿದ್ದಾರೆ. ಮತ್ತೊಬ್ಬರು, ಮೂಕ ಪಕ್ಷಿಗಳ ಹಿತೈಷಿಗಳಿಗೆ ನಮನಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ