ಪೋಸ್ಟ್ ಆಫೀಸ್‌ನಲ್ಲಿ ಲಭ್ಯವಿರುವ ವಿವಿಧ ಸ್ಕೀಮ್‌ಗಳಲ್ಲಿ ಎಸ್‌ಸಿಎಸ್‌ಎಸ್ (SCSS- ಹಿರಿಯ ನಾಗರಿಕ ಉಳಿತಾಯ ಯೋಜನೆ) ಒಂದು. ಇದು ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್. ಪೋಸ್ಟ್ ಆಫೀಸ್ನ ಉಳಿತಾಯ ಯೋಜನೆಗಳ ಗರಿಷ್ಠ ರಿಟರ್ನ್ ತರುವಂತಹ ಸ್ಕೀಮ್ ಕೂಡ ಹೌದು. ಹಿರಿಯ ಈ ನಾಗರಿಕರ ಉಳಿತಾಯ ಯೋಜನೆ ಕೇವಲ ಪೋಸ್ಟ್ ಆಫೀಸ್‌ನಲ್ಲಷ್ಟೇ, ಬ್ಯಾಂಕುಗಳಿಗೆ ಲಭ್ಯವಿರುತ್ತದೆ. ರಿಟೈರ್ಮೆಂಟ್ ನಂತರ ಪಿಂಚಣಿ ಸೌಲಭ್ಯ ಇಲ್ಲದವರಿಗೆ ಈ ಎಸ್ ಎಸ್ ಎಸ್ ಎಸ್ ಹೇಳಿ ಮಾಡಿದೆ.
ಎಸ್ಸಿಎಸ್ನಿಂದ ಮೂರು ಲಾಭಗಳು
- ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಮಾಡಿದ ಹೂಡಿಕೆಯ ಹಣಕ್ಕೆ ಟ್ಯಾಕ್ಸ್ ಡಿಕ್ಷನ್ ಅವಕಾಶ ಇರುತ್ತದೆ
- ಈ ಸ್ಕೀಮ್ನಲ್ಲಿ ಸದ್ಯಕ್ಕೆ ಶೇ. 8.2 ವಾರ್ಷಿಕ ಬಡ್ಡಿಯ ಆದಾಯ ಸಿಗುತ್ತದೆ.
- ಈ ಸ್ಕೀಮ್‌ನಲ್ಲಿ ಲ್ಯಾಂಪ್‌ಸಮ್ ಆಗಿ ಹೂಡಿಕೆ ಮಾಡಿ, ಅದರಿಂದ ತ್ರೈಮಾಸಿಕ ಆದಾಯ ಪಡೆಯಬಹುದು. ಅಂದರೆ ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿ ಸಿಗುತ್ತಾ ಹೋಗುತ್ತದೆ.
ಇದನ್ನೂ ಓದಿ: ಹಣದ ರಹಸ್ಯಗಳು: ಹಣಕಾಸು ಸಂಕಷ್ಟ ಬರಬಾರದೆಂದಾದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…
ಯಾರು ಈ ಎಸ್ಸಿಎಸ್ ಸ್ಕೀಮ್ ಪಡೆಯಬಹುದು?
60 ವರ್ಷ ವಯಸ್ಸು ದಾಟಿರುವ ಹಿರಿಯ ನಾಗರಿಕರು ಎಸ್‌ಎಸ್‌ಎಸ್‌ಎಸ್ ಅಕೌಂಟ್ ತೆರೆಯಬಹುದು. ವಿಆರ್‌ಎಸ್ ಪಡೆದಿರುವವರಾದರೆ 55 ವರ್ಷ ವಯಸ್ಸು ದಾಟಿರಬೇಕು. ಸೇನೆಯಲ್ಲಿ ಕೆಲಸ ಮಾಡಿದ್ದರೆ 50 ವರ್ಷ ದಾಟಿದರೂ ಸಾಕು ಎಸ್‌ಎಸ್‌ಎಸ್ ಅಕೌಂಟ್ ತೆರೆಯಬಹುದು.
ಎಸ್ಸಿಎಸ್ನಲ್ಲಿ ಎಷ್ಟು ಹೂಡಿಕೆ ಸಾಧ್ಯ?
ಸೀನಿಯರ್ ಸಿಟಜನ್ ಸೇವಿಂಗ್ಸ್ ಅಕೌಂಟ್‌ನಲ್ಲಿ ಕನಿಷ್ಠ 1,000 ರೂ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ 30 ಲಕ್ಷ ರೂ ಇದೆ. ಕಂತುಗಳಲ್ಲಿ ಹೂಡಿಕೆಗೆ ಅವಕಾಶವಿಲ್ಲ. ಲ್ಯಾಂಪ್ಸಮ್ ಆಗಿ ಹಣ ತೊಡಗಿಸಬೇಕು.
ಒಂದು ವೇಳೆ ನೀವು ಎಸ್‌ಎಸ್‌ಎಸ್ ಅಕೌಂಟ್‌ನಲ್ಲಿ 30 ಲಕ್ಷ ರೂ ಹಣವನ್ನು ಠೇವಣಿ ಇಟ್ಟಿದ್ದೇ ಆದಲ್ಲಿ, ಮತ್ತು ಈಗಿರುವ ಶೇ. 8.2 ಬಡ್ಡಿದರವೇ ಮುಂದುವರಿದಿದ್ದರೆ ವರ್ಷಕ್ಕೆ 2.46 ಲಕ್ಷ ರೂ ಬಡ್ಡಿ ಶೇಖರಣೆಯಾಗುತ್ತದೆ. ಈ 12 ತಿಂಗಳ ಬಡ್ಡಿ ಆದಾಯವನ್ನು ವಿಭಜಿಸಿದರೆ ತಿಂಗಳಿಗೆ 20,500 ರೂ.
ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್‌ಗಳ ನಡುವೆ ಏನು ವ್ಯತ್ಯಾಸ?
ಇದರ ಜೊತೆಗೆ, ವರ್ಷಕ್ಕೆ 1.50 ಲಕ್ಷ ರೂವರೆಗೆ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಲು ಅವಕಾಶವಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ