ಕಾಬೂಲ್, ನವೆಂಬರ್ 03: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ಕುಸಿದಿವೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಖುಲ್ಮ್‌ನಿಂದ ಪಶ್ಚಿಮ-ನೈಋತ್ಯಕ್ಕೆ 22 ಕಿ.ಮೀ ದೂರದಲ್ಲಿದೆ ಮತ್ತು 28 ಕಿ.ಮೀ ಆಳದಲ್ಲಿದೆ ಎಂದು ಯುಎಸ್‌ಡಿ ಜಿಎಸ್ ಇದೆ. ಮಧ್ಯರಾತ್ರಿ 12.59ಆರ್ ಸುಮಾರಿಗೆ ಭೂಕಂಪ ಸಂಭವಿಸಿದೆ. ಕಳೆದ ವಾರವಷ್ಟೇ, ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು. ಆಗಸ್ಟ್ 31 ರಂದು ಪಾಕಿಸ್ತಾನ ಗಡಿಯ ಬಳಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.0 ತೀವ್ರತೆಯ ಭೂಕಂಪವು 2,200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ