ರಿಷಬ್ ಶೆಟ್ಟಿಗಾಗಿ ಪ್ರಭಾಸ್ ಸಿನಿಮಾ ಕೈಬಿಟ್ಟರೆ ಯುವ ನಿರ್ದೇಶಕ

ರಿಷಬ್ ಶೆಟ್ಟಿಗಾಗಿ ಪ್ರಭಾಸ್ ಸಿನಿಮಾ ಕೈಬಿಟ್ಟರೆ ಯುವ ನಿರ್ದೇಶಕ


ಪ್ರಭಾಸ್ (ಪ್ರಭಾಸ್) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು ಫ್ಲಾಪ್ ಕೂಡ ಆಗಿದೆ. ಇದಾದ ಬಳಿಕ ಪ್ರಭಾಸ್ ಎದುರು ಒಳ್ಳೆಯ ಸಿನಿಮಾಗಳ ಲೈನ್ ಅಪ್ ಇದೆ. ‘ಫೌಜಿ’, ‘ಸ್ಪಿರಿಟ್’ ‘ಕಲ್ಕಿ 2’ ಮತ್ತು ‘ಸಲಾರ್ 2’ ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಇವುಗಳ ಜೊತೆಗೆ ಪೌರಾಣಿಕ ಕತೆ ಆಧರಿತ ಸೂಪರ್ ಹೀರೋ ಸಿನಿಮಾದಲ್ಲಿ ಪ್ರಭಾಸ್ ನಟಿಸಬೇಕಿತ್ತು. ಆದರೆ ಆ ಸಿನಿಮಾ ನಿಂತು ಹೋಗಿದೆ. ಅದಕ್ಕೆ ಪರೋಕ್ಷ ಕಾರಣ ರಿಷಬ್ ಶೆಟ್ಟಿ ಎನ್ನುತ್ತಿದ್ದಾರೆ. ಅದು ಹೇಗೆ?

‘ಹನು ಮ್ಯಾನ್’ ಸಿನಿಮಾ ಮೂಲಕ ದೊಡ್ಡ ಹಿಟ್ ಕೊಟ್ಟಿರುವ ಪ್ರಭಾಸ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ದೇಶಿಸಬೇಕಿತ್ತು. ಆ ಸಿನಿಮಾಕ್ಕೆ ‘ಬಕ’ ಎಂದು ಹೆಸರು ಸಹ ಇಡಲಾಗಿದೆ. ಆದರೆ ಈಗ ಸಿನಿಮಾ ಸ್ಥಗಿತಗೊಂಡಿದೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ಪ್ರಸ್ತುತ ಟಾಲಿವುಡ್ ನ ಹಾಟ್ ನಿರ್ದೇಶಕರಲ್ಲಿ ಒಬ್ಬರಾಗಿದ್ದರೆ, ಅವರು ಪ್ರಭಾಸ್ ಅಂಥಾ ಸೂಪರ್ ಸ್ಟಾರ್ ಜೊತೆಗೆ ಸೂಪರ್ ಹೀರೋ ಮಾದರಿಯ ಸಿನಿಮಾ ಮಾಡುವುದನ್ನು ನೋಡಲು ಅಭಿಮಾನಿಗಳು ಕಾತರ ಆದರೆ ಸಿನಿಮಾ ನಿಂತು ಹೋಗಿರುವುದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ತಂದಿದೆ.

‘ಬಕ’ ಸಿನಿಮಾ ನಿಂತು ಹೋದ ಬಗ್ಗೆ ಕೆಲವು ಭಿನ್ನ-ಭಿನ್ನ ರೀತಿಯ ಸುದ್ದಿಗಳು ಟಾಲಿವುಡ್‌ನಲ್ಲಿ ಹರಿದಾಡುತ್ತಿವೆ. ‘ಬಕ’ ಚಿತ್ರದ ಟೆಸ್ಟ್ ಶೂಟ್ ಇತ್ತೀಚೆಗೆ ನಡೆದಿದ್ದು, ಆದರೆ, ಸಿನಿಮಾದಲ್ಲಿನ ತಮ್ಮ ಲುಕ್ ಮತ್ತು ಒಟ್ಟಾರೆ ಸಿನಿಮಾದ ಲುಕ್ ಆಂಡ್ ಫೀಲ್ ಪ್ರಭಾಸ್ ಅವರಿಗೆ ಅತೃಪ್ತಿ ಉಂಟಾಗಿದೆ. ಈ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ. ಮತ್ತೊಂದು ಕಾರಣವೆಂದರೆ ಪ್ರಶಾಂತ್ ವರ್ಮಾ ಇದೀಗ ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾ ಶುರುವಾಗಿದ್ದು, ಆ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಬೇಕಾದ ಕಾರಣ ಅವರೇ ‘ಬಕ’ ಸಿನಿಮಾ ಪ್ರಾಜೆಕ್ಟ್ ಅಂತ ಕೈಬಿಟ್ಟಿದ್ದಾರೆ.

ಇದನ್ನೂ ಓದಿ:ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಯಲ್ಲಿ ಸೂಪರ್ ಹಿಟ್

ಪ್ರಶಾಂತ್ ವರ್ಮ ಅವರು ಪೌರಾಣಿಕ ಪಾತ್ರಗಳನ್ನು ಕೆಲವು ಕತೆಗಳನ್ನು ರೆಡಿ ಮಾಡಿಕೊಂಡಿದ್ದು ಅವರ ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಅವರ ಈ ಯೋಜನೆಗೆ ಒಂದರ ಮೇಲೊಂದು ಪೆಟ್ಟು ಬೀಳುತ್ತಲೇ ಇದೆ. ಈ ಹಿಂದೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಂದಿಗೆ ಮಾಡಬೇಕಿದ್ದ ‘ರಾಕ್ಷಸ’ ಚಿತ್ರವು ಭಿನ್ನಾಭಿಪ್ರಾಯಗಳಿಂದ ರದ್ದಾಗಿತ್ತು. ಇದಾದ ನಂತರ ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷ ಅವರ ಪದಾರ್ಪಣೆ ಚಿತ್ರದ ಬಗ್ಗೆಯೂ ಗೊಂದಲಗಳು ಏರ್ಪಟ್ಟಿದ್ದವು. ಈಗ ಪ್ರಭಾಸ್ ಅವರಂತಹ ಪ್ಯಾನ್-ಇಂಡಿಯಾ ಸ್ಟಾರ್ ಚಿತ್ರದಿಂದ ಹೊರಬಂದಿರುವುದು ಪ್ರಶಾಂತ್ ವರ್ಮ ಅವರ ವೃತ್ತಿಜೀವನಕ್ಕೆ ಸವಾಲಾಗಿ ಪರಿಣಮಿಸಿದೆ.

‘ಬಕ’ ಸಿನಿಮಾದಲ್ಲಿ ಪ್ರಭಾಸ್ ಅವರು ‘ಬಕಾಸುರ’ನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇತ್ತು. ಪ್ರಶಾಂತ್ ವರ್ಮ ಅವರ ಕಲ್ಪನೆಯ ಪೌರಾಣಿಕ ಮತ್ತು ಆಧುನಿಕ ಸ್ಪರ್ಶದ ಈ ಕಥೆಯ ಮೇಲೆ ಅಭಿಮಾನಿಗಳು ಬಹಳ ನಂಬಿಕೆ ಇಟ್ಟಿದ್ದರು. ಆದರೆ ‘ಹನು-ಮಾನ್’ ನಿರ್ಮಾಪಕರ ಜೊತೆಗಿನ ಬಜೆಟ್ ಕಿರಿಕ್ ಮತ್ತು ಸರಣಿ ಪ್ರಾಜೆಕ್ಟ್‌ಗಳು ಕೈತಪ್ಪುತ್ತಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *