
ಪ್ರಭಾಸ್ (ಪ್ರಭಾಸ್), ಭಾರತದ ಟಾಪ್ ಪ್ಯಾನ್ ಇಂಡಿಯಾ ನಟ. ಆದರೆ ಇದೆ ಅವರಿಗೆ ಒಂದು ರೀತಿ ಶಾಪವೂ ಆದಂತಿದೆ. ಪ್ರಭಾಸ್ ರೊಮ್ಯಾಂಟಿಕ್, ಭಾವುಕ, ಸ್ಲೋ ಸಿನಿಮಾಗಳನ್ನು ಇಷ್ಟಪಡುವ ನಟ. ಆದರೆ ಸ್ಟಾರ್ ಆಗಿರುವ ಕಾರಣ ಅಭಿಮಾನಿಗಳಿಗೆ ಬೇಕಾದ ಮಾಸ್ ಮಸಾಲ ಸಿನಿಮಾಗಳಲ್ಲಿ ಅವರು ನಟಿಸಲೇಬೇಕು. ಫೈಟ್ಸ್, ಡೈಲಾಗ್, ಹಾಡುಗಳು, ರೊಮ್ಯಾನ್ಸ್ ಇಲ್ಲದ ಪ್ರಭಾಸ್ ಸಿನಿಮಾಗಳು ಚೆನ್ನಾಗಿದ್ದರೂ ನೋಡಲು ಒಪ್ಪುವ ಸ್ಥಿತಿಯಲ್ಲಿಲ್ಲ. ‘ರಾಧೆ-ಶ್ಯಾಮ್’ ಇದಕ್ಕೆ ಉದಾಹರಣೆ. ಆದರೆ ಇದೀಗ ಪ್ರಭಾಸ್ ಮತ್ತೊಮ್ಮೆ ಧೈರ್ಯ ಮಾಡಿದ್ದು, ತಮ್ಮಿಷ್ಟದ ಕತೆಯುಳ್ಳ ಸಿನಿಮಾದಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ. ಇದರ ಹಿಂದಿರುವುದು ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್.
ಪ್ರಭಾಸ್ ಇತ್ತೀಚೆಗೆ ಮಲಯಾಳಂ ಸಿನಿಮಾ ನಿರ್ದೇಶಕರೊಬ್ಬರನ್ನು ಭೇಟಿ ಆಗಿದ್ದಾರೆ. ಇವರು ನಿರ್ದೇಶಿಸಿರುವುದು ಮೂರೇ ಸಿನಿಮಾ ಆದರೂ ಅದರಲ್ಲಿ ಎರಡು ಸಿನಿಮಾಗಳು ಇಡೀ ದೇಶದ ಸಿನಿಮಾ ಪ್ರೇಮಿಗಳ ಗಮನ ಸೆಳೆದಿವೆ. ಅದುವೇ ‘ಕಿಷ್ಕಿಂದ ಕಾಂಡಂ’ ಮತ್ತು ಕೆಲವು ತಿಂಗಳ ಹಿಂದೆ ಬಿಡುಗಡೆ ಆದ ‘ಇಕೊ’. ಈ ಎರಡೂ ಅದ್ಭುತ ಸಿನಿಮಾಗಳ ನಿರ್ದೇಶಕರಾದ ದಿಂಜಿತ್ ಅಯ್ಯತಾನ್ ಅವರನ್ನು ಪ್ರಭಾಸ್ ಭೇಟಿ ಆಗಿದ್ದು, ಸಿನಿಮಾ ಕತೆಯೊಂದರ ಬಗ್ಗೆ ಇಬ್ಬರ ನಿರ್ದೇಶಕರು ಚರ್ಚೆ.
ದಿಂಜಿತ್ ಅಯ್ಯತಾನ್ ಹಾಗೂ ಪ್ರಭಾಸ್ ಭೇಟಿಯ ಹಿಂದಿರುವುದು ಹೊಂಬಾಳೆ ಫಿಲಂಸ್. ಪ್ರಭಾಸ್ ಜೊತೆಗೆ ಮೂರು ಸಿನಿಮಾಗಳ ಒಪ್ಪಂದ ಮಾಡಿಕೊಂಡಿರುವ ಹೊಂಬಾಳೆ ಫಿಲಮ್ಸ್, ದಿಂಜಿತ್ ಅಯ್ಯತಾನ್ ಅವರ ಬಳಿ ಇರುವ ಕತೆ ಪ್ರಭಾಸ್ ಗೆ ಒಪ್ಪಬಹುದು ಎಂಬ ಯೋಜನೆಯಲ್ಲಿ ಇಬ್ಬರ ನಡುವೆ ಮೀಟಿಂಗ್ ಆಯೋಜನೆ ಮಾಡಿದೆ. ಈ ಮೂಲಕ ಧನಾತ್ಮಕ ಫಲಿತಾಂಶ ಹೊರಬಿದ್ದಿದೆ ಎನ್ನಲಾಗುತ್ತಿದ್ದು, ಇದೇ ವರ್ಷದ ಅಧಿಕೃತವಾಗಿ ಸಿನಿಮಾ ಘೋಷಣೆಯೂ ಆಗುವ ಸಾಧ್ಯತೆ ಇದೆ. ‘ಕಿಷ್ಕಿಂದ ಕಾಂಡಂ’, ‘ಇಕೊ’ ಅಂಥಾ ಮಾಸ್ಟರ್ ಕ್ಲಾಸ್ ಥ್ರಿಲ್ಲರ್ ಸಿನಿಮಾಗಳನ್ನು ನೀಡಿರುವ ದಿಂಜಿತ್ ಅಯ್ಯತಾನ್, ಪ್ರಭಾಸ್ ಅವರಿಗಾಗಿ ಅದೇ ಮಾದರಿಯ ಕತೆ ಹೆಣೆದಿದ್ದಾರೆ.
ಇದನ್ನೂ ಓದಿ:ನೆಚ್ಚಿನ ನಿರ್ದೇಶಕನ ಬಗ್ಗೆ ಪ್ರಭಾಸ್ ಭರಪೂರ ಮೆಚ್ಚುಗೆ: ಯಾರು ನಿರ್ದೇಶಕ?
ಪ್ರಭಾಸ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ರಘು ಹನುಪುಡಿ ನಿರ್ದೇಶನದ ‘ಫೌಜಿ’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇತ್ತೀಚೆಗಷ್ಟೇ ಸಂದೀಪ್ ರೆಡ್ಡಿ ವಂಗಾ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಅತ್ತ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವೂ ಪ್ರಾರಂಭವಾಗಿದೆ. ಇವುಗಳ ಬಳಿಕ ‘ಸಲಾರ್ 2’ ಶುರುವಾಗಿದೆ. ಅದಾದ ಬಳಿಕವಷ್ಟೆ ದಿಂಜಿತ್ ಅಯ್ಯತಾನ್ ಅವರೊಟ್ಟಿಗೆ ಸಿನಿಮಾ ಶುರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ