ಟಾಲಿವುಡ್ ನಟ ಪ್ರಭಾಸ್ ಅವರು ‘ದಿ ರಾಜಾ ಸಾಬ್’ (ರಾಜಾ ಸಾಬ್) ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದಿಂದ 2ನೇ ಟ್ರೇಲರ್ ಬಿಡುಗಡೆಯಾಗಿದೆ. ಇದು ಹಾರರ್ ಸಿನಿಮಾ ಎಂಬ ಕಾರಣಕ್ಕೆ ಪ್ರಭಾಸ್ (ಪ್ರಭಾಸ್) ಅವರ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಮನೆ ಮಾಡಿದೆ. 2026ರ ಜನವರಿ 9ರಂದು ಸಂಕ್ರಾಂತಿ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಲಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ‘ದಿ ರಾಜಾ ಸಾಬ್’ ಸಿನಿಮಾ ಎರಡನೇ ಟ್ರೇಲರ್ (ದಿ ರಾಜಾ ಸಾಬ್ ಟ್ರೈಲರ್ 2.0) ಅನಾವರಣ ಮಾಡಿದರು. ಬಹುತೇಕ ಸಿನಿಮಾದ ಕಥೆ ಬಹಿರಂಗ ಆದಂತೆ ಆಗಿದೆ.
ಮಾರುತಿ ಅವರು ‘ದಿ ರಾಜಾ ಸಾಬ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಜೊತೆ ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್, ಸಂಜಯ್ ದತ್, ಬೋಮನ್ ಇರಾನಿ, ರಿಧಿ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಅವರು ಮಾಡಿರುವ ಮೊದಲ ಹಾರರ್ ಸಿನಿಮಾ ಇದು. ಈ ಚಿತ್ರದಲ್ಲಿ ಸಂಜಯ್ ದತ್ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ದಿ ರಾಜಾ ಸಾಬ್’ ಸಿನಿಮಾದ ಎರಡನೇ ಟ್ರೇಲರ್:
‘ದಿ ರಾಜಾ ಸಾಬ್’ ಸಿನಿಮಾದ ಕಥೆ:
ಅಜ್ಜ (ಸಂಜಯ್ ದತ್) ನಿಧನ ಹೊಂದಿದ ಬಳಿಕ ದೆವ್ವ ಆಗುತ್ತಾನೆ. ದೊಡ್ಡ ಬಂಗಲೆಯಲ್ಲಿ ಆತನ ಆತ್ಮ ಇರುತ್ತದೆ. ಆ ಬಂಗಲೆಗೆ ಮೊಮ್ಮಗ (ಪ್ರಭಾಸ್) ತನ್ನ ಸ್ನೇಹಿತರ ಜೊತೆ ಎಂಟ್ರಿ ನೀಡುತ್ತಾನೆ. ಬಂಗಲೆ ಒಳಗೆ ಇರುವ ಅಪಾಯದ ಬಗ್ಗೆ ಮೊಮ್ಮಗನಿಗೆ ಸರಿಯಾಗಿ ತಿಳಿದಿಲ್ಲ. ಆ ಬಂಗಲೆ ಒಳಗೆ ಬಂದವರೆಲ್ಲ ದೆವ್ವದ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ. ಅಲ್ಲಿ ವಿಚಿತ್ರಗಳೇ ತುಂಬಿಕೊಂಡಿವೆ. ಮೊಮ್ಮಗ ಮತ್ತು ಆತನ ಸ್ನೇಹಿತರು ಆ ಬಂಗಲೆ ಒಳಗೆ ಸಿಕ್ಕಿಕೊಳ್ಳುತ್ತಾರೆ. ಹಾಗಾದರೆ ಆ ಬಂಗಲೆಯ ಒಳಗಿನ ರಹಸ್ಯಗಳು ಏನು? ಹೀರೋಗೆ ಏನೆಲ್ಲ ಸವಾಲುಗಳು ಎದುರಾಗುತ್ತವೆ? ಅವನನ್ನು ಅವನು ಹೇಗೆ ಪರಿಹರಿಸುತ್ತಾನೆ ಎಂಬುದೇ ‘ದಿ ರಾಜಾ ಸಾಬ್’ ಸಿನಿಮಾದ ಕಹಾನಿ. ಟ್ರೇಲರ್‌ನಲ್ಲಿ ಸಂಜಯ್ ದತ್ ಅವರ ದೆವ್ವದ ಪಾತ್ರದಲ್ಲಿ ನೋಡಿದ ನಂತರ ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ.
ಇದನ್ನೂ ಓದಿ: ಪ್ರಭಾಸ್ ‘ಮಿಡ್ ರೇಂಜ್ ಹೀರೋ: ನಿರ್ದೇಶಕನ ಮಾತಿಗೆ ರೊಚ್ಚಿಗೆದ್ದ ಫ್ಯಾನ್ಸ್
‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ಟಿಜಿ ವಿಶ್ವ ಪ್ರಸಾದ್ ಅವರು ‘ದಿ ರಾಜಾ ಸಾಬ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಟ್ರೇಲರ್‌ನಲ್ಲಿ ವಿಎಫ್‌ಎಕ್ಸ್ ದೃಶ್ಯಗಳು ಹೈಲೈಟ್ ಆಗಿವೆ. ಥಮನ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
‘ದಿ ರಾಜಾ ಸಾಬ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲೂ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಪ್ರಭಾಸ್ ಅವರು ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಕೊನೆಯಲ್ಲಿ ಜೋಕರ್ ಗೆಟಪ್ ಗಮನ ಸೆಳೆದಿದೆ. ಸಿನಿಮಾ ನೋಡಲು ಪ್ರಭಾಸ್ ಅಭಿಮಾನಿಗಳು ಕಾತುರರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.