ಪ್ರಭಾಸ್(Prabhas), ನಿರ್ದೇಶಕರ ನೆಚ್ಚಿನ ನಟ. ಹಲವು ಟಾಪ್ ನಿರ್ದೇಶಕರು ಸಹ ಪ್ರಭಾಸ್ ಜೊತೆಗೆ ಭಾರತದ ಕೆಲಸ ಮಾಡಲು ಕಾತರರಾಗಿ ಕಾಯುತ್ತಿದ್ದಾರೆ. ರಾಜಮೌಳಿ ಅಂಥಾ ಟಾಪ್ ನಿರ್ದೇಶಕರಿಗೂ ಪ್ರಭಾಸ್ ಮೇಲೆ ವಿಪರೀತ ಪ್ರೀತಿ, ಪ್ರಭಾಸ್ ಜೊತೆಗೆ ಮೂರು-ಮೂರು ಸಿನಿಮಾಗಳನ್ನು ರಾಜಮೌಳಿ ಮಾತನಾಡಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುವ ರಾಜಮೌಳಿ, ಇದೀಗ ತಮ್ಮ ನೆಚ್ಚಿನ ನಿರ್ದೇಶಕನ ಬಗ್ಗೆ ಮಾತನಾಡಿದ್ದಾರೆ. ತಮಗೆ ಯಾವ ರೀತಿಯ ಸಿನಿಮಾಗಳು ಹೆಚ್ಚು ಇಷ್ಟ ಎಂದು ಅವರು ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಪ್ರಭಾಸ್, ಆಕ್ಷನ್ ಮತ್ತು ಮಾಸ್ ಸಿನಿಮಾಗಳ ಸಂಕೇತವೇ ಆಗಿಬಿಟ್ಟಿದ್ದಾರೆ. ‘ಬಾಹುಬಲಿ’ಯಿಂದ ಹಿಡಿದು ಇತ್ತೀಚಿನ ‘ಸಲಾರ್’, ‘ರಾಜಾಸಾಬ್’ ವರೆಗೆ ಪ್ರಭಾಸ್ ಬೆಳ್ಳಿತೆರೆಯ ಮೇಲೆ ಅಬ್ಬರಿಸಿದೆ. ಆಕ್ಷನ್ ಹೀರೋಗೆ ಕಾಣಿಸಿಕೊಂಡಿರುವ ಪ್ರಭಾಸ್ ವೈಯಕ್ತಿಕವಾಗಿ ಯಾವ ರೀತಿಯ ಸಿನಿಮಾಗಳು ಇಷ್ಟ? ಅವರ ಫೇವರೆಟ್ ನಿರ್ದೇಶಕರು ಯಾರು? ಈ ಬಗ್ಗೆ ಪ್ರಭಾಸ್ ಇತ್ತೀಚೆಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೆಲುಗಿನ ‘ಕಪಲ್ ಫ್ರೆಂಡ್ಲಿ’ ಹೆಸರಿನ ಸಿನಿಮಾದ ಪ್ರಚಾರಕ್ಕಾಗಿ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಷಯಗಳನ್ನು ಪ್ರಭಾಸ್ ಹಂಚಿಕೊಂಡಿದ್ದಾರೆ.
ಪ್ರಭಾಸ್ ಸದ್ಯ ಸರಣಿ ಆಕ್ಷನ್ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದರೂ, ಅವರ ಮನಸ್ಸಿಗೆ ಹತ್ತಿರವಾದದ್ದು ಮಾತ್ರ ಪ್ರೇಮಕಥೆಗಳಂತೆ. ‘ನನಗೆ ರೊಮ್ಯಾಂಟಿಕ್ ಲವ್ ಸ್ಟೋರಿಗಳೆಂದರೆ ಬಹಳ ಇಷ್ಟ’ ಎಂದು ಪ್ರಭಾಸ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಲೆಜೆಂಡರಿ ನಿರ್ದೇಶಕ ಮಣಿರತ್ನಂ ಅವರ ‘ಗೀತಾಂಜಲಿ’ ಸಿನಿಮಾ ತಮ್ಮ ಆಲ್ಫೇವರೆಟ್ ಅನ್ನು ಅವರು ಬಹಿರಂಗಪಡಿಸಿದ್ದಾರೆ. ತೆರೆಯ ಮೇಲೆ ಮಚ್ಚು, ಗನ್ನು ಹಿಡಿದು ಎದುರಾಳಿಗಳ ರುಂಡ ಕತ್ತರಿಸುವ ಪ್ರಭಾಸ್ ಒಳಗೊಬ್ಬ ಮೃದು ಸ್ವಭಾವದ ರೊಮ್ಯಾಂಟಿಕ್ ಹೀರೋ ಇದ್ದಾನೆ ಎಂಬುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ:ರಿಷಬ್ ಶೆಟ್ಟಿಗಾಗಿ ಪ್ರಭಾಸ್ ಸಿನಿಮಾ ಕೈಬಿಟ್ಟರೆ ಯುವ ನಿರ್ದೇಶಕ
ಇನ್ನು ಪ್ರಭಾಸ್ ತಮ್ಮ ಇಷ್ಟದ ನಿರ್ದೇಶಕರಲ್ಲಿ ಒಬ್ಬ ನಿರ್ದೇಶಕರ ಬಗ್ಗೆ ವಿಶೇಷವಾಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ ಅದುವೇ ನಿರ್ದೇಶಕ ಪುರಿ ಜಗನ್ನಾಥ್. ಅವರ ಬಗ್ಗೆ ಪ್ರಭಾಸ್ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಪುರಿ ಜಗನ್ನಾಥ್ ಅವರಂತೆ ಹೀರೋ ಪಾತ್ರವನ್ನು ಕಲ್ಪಿಸಿಕೊಳ್ಳುವ ಮತ್ತು ಬರೆಯುವ ನಿರ್ದೇಶಕರು ಭಾರತೀಯ ಚಿತ್ರರಂಗದಲ್ಲೇ ವಿರಳ. ನನ್ನ ವೃತ್ತಿಜೀವನದಲ್ಲಿ ‘ಬುಜ್ಜಿಗಾಡು’ ಮತ್ತು ‘ಏಕ್ ನಿರಂಜನ್’ ಚಿತ್ರದ ಪಾತ್ರಗಳು ನನಗೆ ಬಹಳ ಇಷ್ಟ, ‘ಬುಜ್ಜಿಗಾಡು’ ನಾಯಕನ ಪಾತ್ರಗಳನ್ನು ಕೇಳಲಂತೂ ನಾನು ಥ್ರಿಲ್ ಆಗಿಬಿಟ್ಟಿದ್ದೆ. ಪುರಿ ಜಗನ್ನಾಥ್ ಅವರಂತೆ ಹೀರೋಗಳ ಪಾತ್ರವನ್ನು ಬರೆಯುವವರು ಯಾರೂ ಇಲ್ಲ, ಅದು ಅವರಿಗೆ ವಿಶೇಷವಾಗಿ ಒಲಿದಿರುವ ಕಲೆ ಎಂದು ಅವರು ಹೇಳಿದ್ದಾರೆ. ಪುರಿ ಅವರ ‘ಬುಜ್ಜಿಗಾಡು’ ಪಾತ್ರವನ್ನು ಪ್ರಾರಂಭಿಸಿದಾಗ ಅವರಿಗೆ ಭಯವಾಯಿತು, ಆದರೆ ಆ ಪಾತ್ರದ ಮ್ಯಾನರಿಸಂಗಳು ಅದ್ಭುತವಾದವು ಎಂದು ಪ್ರಭಾಸ್ ನೆನಪಿಸಿಕೊಂಡಿದ್ದಾರೆ.
ಸದ್ಯ ಪ್ರಭಾಸ್ ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಯುದ್ಧದ ಹಿನ್ನೆಲೆಯುಳ್ಳ ಒಂದು ಸುಂದರ ಪ್ರೇಮಕಥೆ ಹೊಂದಿದ್ದು, ಪ್ರಭಾಸ್ ಇದರಲ್ಲಿ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರದ ಮೇಲೆಯೂ ದೊಡ್ಡ ನಿರೀಕ್ಷೆಯಿದೆ. ಅದಾದ ಬಳಿಕ ‘ಕಲ್ಕಿ 2’, ‘ಸಲಾರ್ 2’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ