Headlines

ಜಗಳ ಆಡಿ ಖ್ಯಾತ ನಿರ್ದೇಶಕನ ಸಿನಿಮಾದಿಂದ ಹೊರ ನಡೆದ ಪ್ರಕಾಶ್ ರಾಜ್?

ಜಗಳ ಆಡಿ ಖ್ಯಾತ ನಿರ್ದೇಶಕನ ಸಿನಿಮಾದಿಂದ ಹೊರ ನಡೆದ ಪ್ರಕಾಶ್ ರಾಜ್?


ಕನ್ನಡದ ಪ್ರಕಾಶ್ ರಾಜ್ (ಪ್ರಕಾಶ್ ರಾಜ್) ಬಹುಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ. ಅವರು ಈಗಾಗಲೇ ಸಿನಿಮಾಗಳಲ್ಲಿ ವಿಲನ್ ಪಾತ್ರದ ಮೂಲಕವೇ ಮಿಂಚಿದ್ದಾರೆ. ಈಗ ಪ್ರಕಾಶ್ ರಾಜ್ ಅವರು ಒಂದು ದೊಡ್ಡ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ವಿಷಯದ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಸಂದೀಪ್ ರೆಡ್ಡಿ ವಂಗ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ತಂಡ ಕೂಡ ಮಾಹಿತಿ ನೀಡಿತ್ತು. ಆದರೆ, ಅಲ್ಲಾಗಿದ್ದೇ ಬೇರೆ ಎನ್ನುವ ಮಾತು ಕೇಳಿ ಬಂದಿದೆ. ಪ್ರಕಾಶ್ ರಾಜ್ ಹಾಗೂ ಸಂದೀಪ್ ರೆಡ್ಡಿ ವಂಗ ಮಧ್ಯೆ ದೊಡ್ಡ ಜಗಳವೇ ಏರ್ಪಟ್ಟಿದೆಯಂತೆ. ಈ ಕಾರಣದಿಂದ ಪ್ರಕಾಶ್ ರಾಜ್ ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ ಎಂಬ ಗುಲ್ಲು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ.

ನಿರ್ದೇಶಕರು ಹಾಗೂ ಪ್ರಕಾಶ್ ರಾಜ್ ಮಧ್ಯೆ ಕಥೆಯ ವಿಷಯವಾಗಿ ಕಿರಿಕ್ ಆಗಿದೆ. ಈ ಕಿರಿಕ್ನ ಬಗ್ಗೆ ಯಾರೂ ಓಪನ್ ಆಗಿ ಮಾತನಾಡಿಲ್ಲ. ಆದರೆ, ಚಿತ್ರರಂಗದಲ್ಲಿ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಸೈದ್ಧಾಂತಿಕವಾಗಿ ಪ್ರಕಾಶ್ ರಾಜ್ ಅವರನ್ನು ಒಪ್ಪಿಕೊಳ್ಳದೆ ಇರಬಹುದು. ಆದರೆ, ನಟನಾಗಿ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅವರ ‘ಸ್ಪಿರಿಟ್’ ಚಿತ್ರದ ಹೊರ ನಡೆದಿದ್ದು ಅಭಿಮಾನಿಗಳಿಗೆ ಬಹಳ ಬೇಸರ ಮೂಡಿಸಿದೆ.

ಪ್ರಕಾಶ್ ರಾಜ್ ಹೆಸರು ಇತ್ತೀಚೆಗೆ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಜಗ್ಗೇಶ್ ಮಾಡಿದ ಟ್ವೀಟ್. ಜಗ್ಗೇಶ್ ಅವರು ಇತ್ತೀಚೆಗೆ ಸಂಘದ ಶಾಖೆಗೆ ಭೇಟಿ ನೀಡಿ, ಅದರ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಿಕೊಳ್ಳಲು ಕರೆ ನೀಡಿದ್ದರು.

ಇದನ್ನೂ ಓದಿ: ‘ಸಂಘಕ್ಕೆ ಭೇಟಿ ಕೊಡಿ’; ಪ್ರಕಾಶ್ ರಾಜ್ ಗೆ ಜಗ್ಗೇಶ್ ಆಹ್ವಾನ

ಪ್ರಕಾಶ್ ರಾಜ್ ಅವರು ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ನ ಹಲವು ಸೂಪರ್ ಸ್ಟಾರ್ ಗಳ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಸಾಕಷ್ಟು ಆದ ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದು ಹೊಸಬರಿಗೆ ಬೆಂಬಲ ಕೊಡ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *