ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?

ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?


ಪ್ರಕಾಶ್ ರೈ (ಪ್ರಕಾಶ್ ರಾಜ್) ಭಾರತದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ಭಾಷೆಯ ಹಂಗಿಲ್ಲದೆ ಹಲವಾರು ಭಾಷೆಗಳಲ್ಲಿ ಪೋಷಕ ನಟ, ವಿಲನ್ ಹೀಗೆ ಹಲವಾರು ಪಾತ್ರಗಳಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದಾರೆ. ಆದರೆ ಪ್ರಕಾಶ್ ರೈ ಇದೀಗ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಅದುವೇ ಪ್ರಭಾಸ್ ನಟನೆಯ ‘ಸ್ಪಿರಿಟ್’. ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಭಿನ್ನಾಭಿಪ್ರಾಯವೇ ಈ ನಿರ್ಧಾರಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಸಲಿಗೆ ಪ್ರಕಾಶ್ ರೈ ‘ಸ್ಪಿರಿಟ್’ ಸಿನಿಮಾದಿಂದ ಹೊರ ಬಂದಿದ್ದು ಮೂರು ವಾರಗಳ ಹಿಂದೆಯೇ ಸುದ್ದಿ ಹರಡಿತ್ತು, ಆದರೆ ಆಗ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ಸುಳ್ಳು ಸುದ್ದಿ ಹಬ್ಬಿಸಬೇಡಿ, ನನ್ನ ಪಾತ್ರದ ಶೂಟಿಂಗ್ ಇನ್ನೂ ಶುರುವೇ ಆಗಿಲ್ಲ’ ಎಂದಿದ್ದರು. ಆ ಮೂಲಕ ತಾವಿನ್ನೂ ಸಿನಿಮಾ ತಂಡದ ಜೊತೆಗೆ ಇದ್ದೀವಿ ಎಂದಿದ್ದರು. ಆದರೆ ಇದೀಗ ಬಂದಿರುವ ಸುದ್ದಿಯಂತೆ ಪ್ರಕಾಶ್ ರೈ ‘ಸ್ಪಿರಿಟ್’ ಸಿನಿಮಾದಿಂದ ಹೊರಬಂದಿರುವುದು ಖಾತ್ರಿ ಅವರು.

‘ಸ್ಪಿರಿಟ್’ ಸಿನಿಮಾ ತಂಡವು ಇತ್ತೀಚೆಗಷ್ಟೇ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಪೋಸ್ಟರ್ ಜೊತೆಗೆ ಸಿನಿಮಾದ ಮುಖ್ಯ ನಟರು, ತಂತ್ರಜ್ಞರ ಇನ್ಸ್ಟಾಗ್ರಾಮ್ ಹ್ಯಾಂಡಲ್ ಸಹ ಹಾಕಲಾಗಿದೆ. ಆದರೆ ಅದರಲ್ಲಿ ಪ್ರಕಾಶ್ ರೈ ಹೆಸರನ್ನು ಕೈಬಿಡಲಾಗಿದೆ. ಇದು ಪ್ರಕಾಶ್ ರೈ ಅವರು ಸಿನಿಮಾದಿಂದ ಹೊರಬಂದಿರುವ ಅನುಮಾನಗಳನ್ನು ಮೂಡಿಸಿದೆ. ಜೊತೆಗೆ ಪ್ರಕಾಶ್ ರೈ ಅವರು ‘ಸ್ಪಿರಿಟ್’ ತಂಡದಲ್ಲಿಲ್ಲವೆಂದು ಚಿತ್ರತಂಡದಿಂದ ಮಾಹಿತಿ ಬಂದಿರುವ ಕೆಲ ಮಾಧ್ಯಮಗಳ ವರದಿ ಸಹ ಮಾಡಿದೆ.

ಇದನ್ನೂ ಓದಿ:ಸಚಿವ ಎಂಬಿ ಪಾಟೀಲ್ ಗೆ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಟಾಂಗ್

‘ಸ್ಪಿರಿಟ್’ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಟ್ಟಿಗಿನ ಭಿನ್ನಾಭಿಪ್ರಾಯವೇ ಪ್ರಕಾಶ್ ರೈ ಅವರ ನಿರ್ಗಮನಕ್ಕೆ ಕಾರಣ. ತಮಗೆ ನೀಡಲಾಗಿದ್ದ ಸೀನ ಬಗ್ಗೆ ಪ್ರಕಾಶ್ ರೈ ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಬಳಿಕ ಪ್ರಕಾಶ್ ರೈ ಅವರು ಸಿನಿಮಾದಿಂದ ನಿರ್ಗಮಿಸಿದ್ದಾರೆ.

ಈ ಹಿಂದೆ ದೀಪಿಕಾ ಪಡುಕೋಣೆ ಸಹ ‘ಸ್ಪಿರಿಟ್’ ಸಿನಿಮಾದಿಂದ ಹೊರಬಂದಿದ್ದರು. ಅವರು ‘ಸ್ಪಿರಿಟ್’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರು, ಅವರ ಸಂಭಾವನೆ ಮತ್ತು ಶಿಸ್ತಿನ ನಿಯಮಗಳ ಕಾರಣದಿಂದ ಅವರು ಸಿನಿಮಾದಿಂದ ಕೈಬಿಡಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *