
ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಉಂಟಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಾಯಿ ಸ್ವರ್ಣಲತಾ ಹೈದರಾಬಾದ್ ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಪ್ರಕಾಶ್ ರಾಜ್ ಅವರು ದೇವತೆಯಂತೆ ನೋಡುತ್ತಾರೆ.
ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಗದಗದವರು. ಅವರ ಬಗ್ಗೆ ಈ ಮೊದಲು ಪ್ರಕಾಶ್ ರಾಜ್ ಮಾತನಾಡಿದ್ದರು. ‘ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ ಅನಾಥಾಶ್ರಮದಲ್ಲಿ ಬೆಳೆದರು. ನರ್ಸಿಂಗ್ ಟ್ರೇನಿಂಗ್ ಮಾಡಿ ಬೆಂಗಳೂರಿಗೆ ಬಂದರು’ ಎಂದಿದ್ದರು ಪ್ರಕಾಶ್ ರಾಜ್.
‘ನಮ್ಮ ಅಪ್ಪ ಮಂಗಳೂರು. ಅವರು ಬೆಂಗಳೂರಿಗೆ ಬಂದರು. ಇಬ್ಬರಿಗೂ ಮದುವೆ ಆದರು. ನಮ್ಮ ಅಪ್ಪನಿಗೆ ಅವರದ್ದೇ ಆದ ನಂಬಿಕೆ ಇದೆ, ತಾಯಿಗೆ ಅವರದ್ದೇ ಆದ ದೇವರ ನಂಬಿಕೆ ಇದೆ. ನನ್ನ ನಂಬಿಕೆ ಬೇರೆಯದೇ ಇದೆ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.
ತಾಯಿಯನ್ನು ದೇವತೆ ರೀತಿಯಲ್ಲಿ ಪ್ರಕಾಶ್ ರಾಜ್ ನೋಡಿಕೊಳ್ಳುತ್ತಾರೆ. ‘ಎಲ್ಲರನ್ನೂ ಓದಿಸಿದ್ದಳು ನನ್ನ ಅಮ್ಮ. ಅವಳ ತ್ಯಾಗ ಅಮೂಲ್ಯವಾದುದು. ನನ್ನ ತಂದೆ ದುಡಿಯುತ್ತಾ ಇರಲಿಲ್ಲ. ತಂಗಿಯನ್ನು ಮದುವೆ ಮಾಡಿದ್ದು ಅವಳೇ. ದೇವರ ಮುಂದೆ ನಿಂತು ಜಗಳ ಆಡುತ್ತಿದ್ದಳು, ಪ್ರಾರ್ಥನೆ ಮಾಡುತ್ತಿದ್ದಳು’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಸ್ವರ್ಣಲತಾ ಮಾಡಿದ ತ್ಯಾಗ ನೋಡಿ ತಾಯಿ ದೇವತೆ ಹೇಗೆ ಕಾಣುತ್ತಿದ್ದಳು.
ಇದನ್ನೂ ಓದಿ: ಜಗಳ ಆಡಿ ಖ್ಯಾತ ನಿರ್ದೇಶಕನ ಸಿನಿಮಾದಿಂದ ಹೊರ ನಡೆದ ಪ್ರಕಾಶ್ ರಾಜ್?
ಪ್ರಕಾಶ್ ರಾಜ್ 1965 ಮಾರ್ಚ್ 26 ರಂದು ಜನಿಸಿದರು. ಅವರ ತಂದೆ ಹೆಸರು ಮಂಜುನಾಥ್. 2000 ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ ಪ್ರಕಾಶ್ ರಾಜ್. ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.