Headlines

ಜಗತ್​ಪ್ರಸಿದ್ಧರಾದ ಸಚಿವ ಪ್ರಲ್ಹಾದ್ ಜೋಶಿ; TIME 100 ಹವಾಮಾನ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ

ಜಗತ್​ಪ್ರಸಿದ್ಧರಾದ ಸಚಿವ ಪ್ರಲ್ಹಾದ್ ಜೋಶಿ; TIME 100 ಹವಾಮಾನ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ


ನವದೆಹಲಿ, ನವೆಂಬರ್ 4: ಆರ್ಥಿಕತೆ-ಅಭಿವೃದ್ಧಿ, ಪರಂಪರೆ ಮತ್ತು ದೂರದೃಷ್ಟಿ ನಾಯಕತ್ವದಲ್ಲಿ ಭಾರತ ಜಗತ್ ಪ್ರಸಿದ್ಧಿ ಪಡೆದಿದೆ. ಅದರಂತೆ ಇದೀಗ ಈ ಪ್ರಗತಿಶೀಲ ರಾಷ್ಟ್ರವಾದ ಭಾರತದ ಸಚಿವರಾದ ಪ್ರಲ್ಹಾದ್ ಜೋಶಿ (ಪ್ರಹ್ಲಾದ್ ಜೋಶಿ) ಕೂಡ ಪ್ರಭಾವಿ ನಾಯಕರಾಗಿ ವಿಶ್ವಪ್ರಸಿದ್ಧಿ ಗಳಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದ ಸದಸ್ಯರೂ ವಿಶ್ವಪ್ರಸಿದ್ಧರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾ ಜೋಶಿ ಅವರೀಗ ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಜನಪ್ರಿಯರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಲ್ಹಾದ್ ಜೋಶಿ ಇಂದು ಹವಾಮಾನ ಬದಲಾವಣೆ ತಡೆದು ಸುಸ್ಥಿರತೆ ಕಾಪಾಡುತ್ತಿರುವವರ ಕುರಿತು ಸಿದ್ಧಪಡಿಸಿದ “TIME 100 ಹವಾಮಾನ ಅತ್ಯಂತ ಶಕ್ತಿಶಾಲಿ ನಾಯಕ” ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5ನೇ ಬಾರಿ ಸಂಸದರಾಗಿ ದಾಖಲೆ ನಿರ್ಮಿಸಿದ ಪ್ರಲ್ಹಾದ್ ಜೋಶಿ ಇದೀಗ ಈ ವರ್ಷದ “TIME 100 CLIMATE” ಪಟ್ಟಿಯಲ್ಲಿ ಪ್ರಭಾವಿ ನಾಯಕನ ಸ್ಥಾನ ಪಡೆದ “ಮೊದಲ ಭಾರತೀಯ ರಾಜಕಾರಣಿ” ಎಂಬ ಹೊಸ ದಾಖಲೆ ಸಹ ಬರೆದು ವಿಶ್ವಾದ್ಯಂತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಜಾತಿಗಣತಿ ಮೂಲಕ ಆರ್ ಎಸ್ ಎಸ್ ಸದಸ್ಯರ ಗುರಿ: ಸಚಿವ ಪ್ರಲ್ಹಾದ್ ಜೋಶಿ ಬಾಂಬ್

ಪ್ರತಿಕೂಲ ಪರಿಸ್ಥಿತಿಯಲ್ಲಿ ಜಗತ್ತಿನ ಹವಾಮಾನ ಸುಸ್ಥಿರತೆಗಾಗಿ ಸಚಿವ ಪ್ರಲ್ಹಾದ್ ಜೋಶಿ ಅವರ ಸಾರಥ್ಯದಲ್ಲಿ ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ನೂರಾರು ರಾಷ್ಟ್ರಗಳೂ ಭಾರತದೊಂದಿಗೆ ಕೈ ಜೋಡಿಸಿವೆ. ದೆಹಲಿಯ ಭಾರತ್ ಮಂಟಪದಲ್ಲಿ ಮೊನ್ನೆಯಷ್ಟೇ 125ಕ್ಕೂ ಹೆಚ್ಚು ರಾಷ್ಟ್ರಗಳನ್ನು ಒಟ್ಟುಗೂಡಿಸಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನಕ್ಕೆ ಸಾಕ್ಷಿ.

TIME 100 ಹವಾಮಾನ

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ವಿಶ್ವದ ಊಹೆಗೂ ನಿಲುಕದಂತೆ ಅಭೂತಪೂರ್ವ ಪ್ರಗತಿ ಸಾಧಿಸುತ್ತಿದೆ. ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ವಲಯದ ಸಾಧನೆಯಲ್ಲಂತೂ ಜಗತ್ತೇ ನಿಬ್ಬೆರಗಾಗಿದೆ. ಸಂಘದ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಸಚಿವ ಪ್ರಲ್ಹಾದ್ ಜೋಶಿ ಅವರು ಸೌರಶಕ್ತಿ ಉತ್ಪಾದನೆಯಲ್ಲಿ ಭಾರತದ ತಾಂತ್ರಿಕ, ತಂತ್ರಜ್ಞಾನ ಹಂಚಿಕೆಗೆ ಭೇಟಿ ನೀಡಿದ್ದಾರೆ.

ಕೋಟ್ಯಂತರ ಮನೆಗಳಲ್ಲಿ ಸೌರ ಬೆಳಕು ಚೆಲ್ಲಿದ `ಸೂರ್ಯಘರ್~ ಮತ್ತು ರೈತ ಸಮುದಾಯವನ್ನು ಸಬಲೀಕರಣಗೊಳಿಸುತ್ತಿರುವ `ಪಿಎಂ ಕುಸುಮ್` ಯೋಜನೆ ಯಶಸ್ಸು ಕಂಡು ವಿಶ್ವದ 50ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮಲ್ಲೂ ಈ ಯೋಜನೆಗಳ ಅನುಷ್ಠಾನಕ್ಕೆ ಸಾಥ್ ನೀಡುವಂತೆ ಬೇಡಿಕೆ ಮುಂದಿಡುವಷ್ಟರ ಮಟ್ಟಿಗೆ ಕಾರ್ಯ ಸಾಧನೆ ತೋರಿದ್ದಾರೆ ಸಚಿವ ಪ್ರಲ್ಹಾದ್ ಜೋಶಿ.

ಇದನ್ನೂ ಓದಿ: ಯಾರಿಗೂ ಹೇಳದೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗೋದೇಕೆ?; ಪ್ರಲ್ಹಾದ್ ಜೋಶಿ ಟೀಕೆ

2024ರಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಹೊಣೆ ಹೊತ್ತ ಪ್ರಲ್ಹಾದ್ ಜೋಶಿ ಅವರು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ ಕುಸುಮ್, ಸೂರ್ಯಘರ್ ಸೇರಿದಂತೆ ಭಾರತದ ಹಸಿರು ಇಂಧನ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ತಲುಪುವ ಭಾರತದ ಗುರಿಯನ್ನು ಐತಿಹಾಸಿಕವಾಗಿ 5 ವರ್ಷ ಮೊದಲೇ ಸಾಧಿಸಿದರು. ಜೊತೆಗೆ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಮೇರಿಕವನ್ನೇ ಹಿಂದಿಕ್ಕಿ ಭಾರತವನ್ನು ಜಗತ್ತಿನ 2ನೇ ಅತಿದೊಡ್ಡ ಸೋಲಾರ್ ಮಾರುಕಟ್ಟೆಯಾಗಿ ನಿರ್ಮಿಸಿದ್ದು ಪ್ರಲ್ಹಾದ್ ಜೋಶಿ ಅವರ ಸಂಸ್ಥೆ ಮತ್ತು ದೂರದೃಷ್ಟಿ ನಾಯಕತ್ವಕ್ಕೆ ಉದಾಹರಣೆ.

ಪ್ರಹ್ಲಾದ ಜೋಶಿ

2014ರಲ್ಲಿ ಕೇವಲ 81 ಗಿಗಾವ್ಯಾಟ್ ಇದ್ದ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಇಂದು 257 ಗಿಗಾವ್ಯಾಟ್‌ಗೆ ಏರಿದೆ. ಇನ್ನು ಸೋಲಾರ್ ಸಾಮರ್ಥ್ಯ ಸಹ ಅತ್ಯದ್ಭುತ ಎಂಬಂತೆ 2.8 ಗಿಗಾವ್ಯಾಟ್ ನಿಂದ 128 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯಕ್ಕೆ ಹೆಚ್ಚಿಸುವಲ್ಲಿ ಪ್ರಲ್ಹಾದ್ ಜೋಶಿಯವರ ಕಾರ್ಯವೈಖರಿ ಅನುಕರಣೀಯ.

ಇಂದು ಹವಾಮಾನ ಬದಲಾವಣೆಯನ್ನು ತಗ್ಗಿಸಲು ಇಂಗಾಲ ಹೊರಸೂಸುವಿಕೆಯಲ್ಲಿ ತ್ವರಿತ ಕಡಿತದ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಲೇ ಬಂದಿರುವ ಪ್ರಲ್ಹಾದ್ ಜೋಶಿ, 2028ರ ವೇಳೆಗೆ ಭಾರತ ಸ್ಥಳೀಯ ಸೌರಕೋಶ ಉತ್ಪಾದನೆಯನ್ನು ಸಾಧಿಸುವ ದಿಟ್ಟ ಹೆಜ್ಜೆಯಿರಿಸಿದ್ದಲ್ಲದೆ, ಯುವ ಸಮೂಹ ಹಸಿರು ಇಂಧನ ಉತ್ಪಾದನೆಯನ್ನು ಹೊಂದಲು 2 ತಿಂಗಳ ಅವಧಿಗೆ ಸಹ ಪ್ರಾರಂಭಿಸಬಹುದಾದ ಇಂಧನ ವಲಯಕ್ಕೆ ಹೊಸ ಸ್ಪರ್ಶವನ್ನು ನೀಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *