Headlines

ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು

ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು

ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು

ರಂಗಭೂಮಿ ಹಿನ್ನೆಲೆಯ ನಟ ಪ್ರಮೋದ್ ಶೆಟ್ಟಿ ಅವರು, ಸೀರಿಯಲ್ ಒಂದರ ಶೂಟಿಂಗ್ ವೇಳೆ ನಿರ್ದೇಶಕರಿಂದ ‘ನಟನೆ ಬರುವುದಿಲ್ಲ’ ಎಂದು ನೂರಾರು ಮಹಿಳೆಯರ ಮುಂದೆ ಅವಮಾನಕ್ಕೊಳಗಾಗಿದ್ದರು.  ಪ್ರೇಯಸಿ ಸುಪ್ರೀತಾಳಿಗಾಗಿ ಗಟ್ಟಿ ಮನಸ್ಸು ಮಾಡಿ, ಅದೇ ನಿರ್ದೇಶಕರಿಂದ ಶಹಬ್ಬಾಸ್ ಗಿರಿ ಪಡೆದ ಅನುಭವ ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ ನಟ ಪ್ರಮೋದ್​ ಶೆಟ್ಟಿ (Pramod Shetty) ಅವರ ನಟನೆಗೆ ಮನಸೋಲದವರು ಇಲ್ಲವೇ ಇಲ್ಲ. ರಂಗಭೂಮಿ ನಟನಾಗಿದ್ದ ಪ್ರಮೋದ್​ ಶೆಟ್ಟಿ ಅವರಿಗೆ ಅಲ್ಲಿದ್ದ ಗೌರವವೇ ಬೇರೆ. ಪ್ರಮೋದ್ ಶತವಿ, ಮಾತ್ರುಕ, ಸಾವು ಬಂತು ಸಾವು, ಮಾದರಿ ಮಾದಯ್ಯ ಮತ್ತು ಕಾಕನಕೋಟೆಯಂತಹ ಹಲವಾರು ನಾಟಕಗಳಲ್ಲಿ ನಟಿಸಿದರು , ಇದಕ್ಕಾಗಿ ಪ್ರಮೋದ್ ಕಾಕಾ ಪಾತ್ರಕ್ಕಾಗಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.

ಪ್ರಮೋದ್​ ಅವರು ಹಲವಾರು ಕನ್ನಡ ಸೀರಿಯಲ್​ನಲ್ಲಿ ನಟಿಸಿದ್ದು, 2010 ರಲ್ಲಿ ಜುಗಾರಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಉಳಿಯವರು ಕಂಡಂತೆ (2014) ಮತ್ತು ಕಿರಿಕ್ ಪಾರ್ಟಿ (2016) ಚಿತ್ರಗಳಲ್ಲಿನ ಪಾತ್ರಗಳಿಗೆ ಅವರು ಮನ್ನಣೆ ಪಡೆದರು. ಆದರೆ ಇದೀಗ ನಟನೆ ಬರುವುದಿಲ್ಲ ಎಂದು ನಿರ್ದೇಶಕರೊಬ್ಬರು ಮಹಿಳೆಯರ ಎದುರು ಮಾಡಿರುವ ಅವಮಾನದ ಬಗ್ಗೆ ಮಾತನಾಡಿದ್ದಾರೆ ನಟ.

ದೂರದರ್ಶನ ಚಂದನ ವಾಹಿನಿಯಲ್ಲಿ, ಅತಿಥಿಯಾಗಿ ಹೋಗಿದ್ದ ಪ್ರಮೋದ್​ ಶೆಟ್ಟಿ ಅವರು ತಮ್ಮ ಬದುಕಿನ ಹಲವು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ರಂಗಭೂಮಿ ನಟನಾಗಿದ್ದ ವೇಳೆಯೇ ಅವರು, ಸುಪ್ರೀತಾ ಶೆಟ್ಟಿ ಅವರನ್ನು ಲವ್​ ಮಾಡಿದರು. ಆದರೆ ರಂಗಭೂಮಿ ಕಲಾವಿದನಿಗೆ ಆದಾಯ ಇರುವುದಿಲ್ಲವಲ್ಲ. ಅದಕ್ಕಾಗಿಯೇ ಸುಪ್ರೀತಾ ಮನೆಯವರು ಮದುವೆಗೆ ಒಪ್ಪುವುದಿಲ್ಲ ಎನ್ನುವ ಕಾರಣಕ್ಕೆ ಕೊನೇ ಪಕ್ಷ ಸೀರಿಯಲ್​ನಲ್ಲಿ ಆದರೂ ಆ್ಯಕ್ಟ್​ ಮಾಡು, ನಾನು ಏನೋ ಒಂದು ಮನೆಯಲ್ಲಿ ಹೇಳಬಹುದು ಎಂದು ಸುಪ್ರೀತಾ ಹೇಳಿದ್ದರಂತೆ.

ಇದೇ ಕಾರಣಕ್ಕೆ ಸೀರಿಯಲ್​ ಒಂದರ ನಿರ್ದೇಶಕರನ್ನು ಭೇಟಿಯಾಗಿದ್ದರು ಪ್ರಮೋದ್​, ಅಲ್ಲಿ ಡೈಲಾಗ್​ಗಳನ್ನೆಲ್ಲಾ ಹೇಳಿಸಿ ಸೆಲೆಕ್ಟ್​ ಮಾಡಲಾಗಿತ್ತು. ಆರಂಭದಲ್ಲಿಯೇ ಗಾರ್ಮೆಂಟ್ಸ್​ನಲ್ಲಿ ಶೂಟಿಂಗ್​. ಅಲ್ಲಿರುವ ಒಬ್ಬಾಕೆಯನ್ನು ಪ್ರಪೋಸ್​ ಮಾಡುವ ಸೀನ್​ ಅದಾಗಿತ್ತು. ಅಲ್ಲಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುವ ನೂರಾರು ಮಂದಿ ಇದ್ದರು. ಆ್ಯಕ್ಷನ್​ ಹೇಳಿದಾಗ ಪ್ರಮೋದ್​ ಅವರು ಪ್ರಪೋಸ್​ ಮಾಡಲು ಹೇಳಿಕೊಟ್ಟ ಡೈಲಾಗ್​ ಹೇಳಿದರಂತೆ. ಆದರೆ ಇದು ನಾಟಕದ ಸ್ಟೈಲ್ ಎನ್ನುವ ಕಾರಣಕ್ಕೆ ನಿರ್ದೇಶಕರು ಸಿಕ್ಕಾಪಟ್ಟೆ ಅವಮಾನ ಮಾಡಿದರು ಎಂದು ಪ್ರಮೋದ್​ ಹೇಳಿದ್ದಾರೆ.

ಯಾರ್ಯಾರನ್ನೋ ನಾಟಕದವರನ್ನು ಕರ್ಕೊಂಡು ಬರ್ತಾರೆ. ಕಳಿಸಿ ಅವನನ್ನು ಆಚೆ ಎಂದುಬಿಟ್ಟರು. ಅಳು ತಡೆದುಕೊಳ್ಳಲು ಆಗಲಿಲ್ಲ. ಅಲ್ಲಿ ಎಲ್ಲ ಹೆಂಗಸರ ಎದುರು ಮರ್ಯಾದೆ ಹೋಗಿದ್ದು ಬೇರೆ, ಅವರ ಮುಂದೆ ಅಳಲು ಆಗುತ್ತಿರಲಿಲ್ಲ. ಕೊನೆಗೆ ವಾಷ್​ರೂಮ್​ಗೆ ಹೋಗಿ ಸಿಕ್ಕಾಪಟ್ಟೆ ಅತ್ತುಬಿಟ್ಟೆ. ನಿನಗೆ ಇದೆಲ್ಲಾ ಅಲ್ಲ, ವಾಪಸ್​ ಹೋಗು ಎಂದು ನನ್ನ ಮನಸ್ಸು ಹೇಳಿತು ಎಂದು ಅಂದು ನಡೆದ ಘಟನೆ ನೆನಪಿಸಿಕೊಂಡಿದ್ದಾರೆ ಶೆಟ್ರು.

ಕೊನೆಗೆ, ಕಣ್ಣೆದುರು ಸುಪ್ರೀತಾ ಬಂದಳು. ಮದುವೆಯಾಗಬೇಕಿತ್ತಲ್ಲ, ಆದ್ದರಿಂದ ಇದನ್ನು ಸಹಿಸಿಕೊಳ್ಳಬೇಕಿತ್ತು. ಗಟ್ಟಿ ಮನಸ್ಸು ಮಾಡಿದೆ. ಯಾಕೆ ಆ್ಯಕ್ಟಿಂಗ್​ ಬರಲ್ಲ, ಬಂದೇ ಬರುತ್ತದೆ ಎಂದು ಹೇಳಿ ಅದೇ ಧೈರ್ಯದಿಂದ ಹೋಗಿ ಕೆಲವು ಟೇಕ್​ಗಳನ್ನು ಪಡೆದು ನಿರ್ದೇಶಕರೂ ಬೆರಗಾಗುವ ಹಾಗೆ ಆ್ಯಕ್ಟಿಂಗ್​ ಮಾಡಿದೆ. ಕೊನೆಗೆ ನಿರ್ದೇಶಕರಿಗೆ ಖುಷಿಯಾಯಿತು. ಭೇಷ್​ ಎಂದರು. ಅವರ ಬಾಯಿಯಿಂದ ಅಷ್ಟು ಕೇಳುತ್ತಲೇ ಆ ಸೀರಿಯಲ್​ಗೆ ಗುಡ್​ಬೈ ಹೇಳಿ ಬಂದೆ ಎಂದಿದ್ದಾರೆ ಪ್ರಮೋದ್​ ಶೆಟ್ಟಿ. ಅಂದಹಾಗೆ ಸುಪ್ರೀತಾ ಜೊತೆ 2010ರಲ್ಲಿ ಪ್ರಮೋದ್​ ಅವರ ಮದುವೆಯಾಗಿದ್ದು, ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

Source link

Leave a Reply

Your email address will not be published. Required fields are marked *