Headlines

Rishab Shetty ಏಕಾಏಕಿ ಎಲ್ರನ್ನೂ ಅನ್​ಫಾಲೋ ಮಾಡಿದ್ಯಾಕೆ? ಪ್ರಮೋದ್​ ಶೆಟ್ರಿಂದ ಬಂತು ಸ್ಪಷ್ಟನೆ

Rishab Shetty ಏಕಾಏಕಿ ಎಲ್ರನ್ನೂ ಅನ್​ಫಾಲೋ ಮಾಡಿದ್ಯಾಕೆ? ಪ್ರಮೋದ್​ ಶೆಟ್ರಿಂದ ಬಂತು ಸ್ಪಷ್ಟನೆ

Rishab Shetty ಏಕಾಏಕಿ ಎಲ್ರನ್ನೂ ಅನ್​ಫಾಲೋ ಮಾಡಿದ್ಯಾಕೆ? ಪ್ರಮೋದ್​ ಶೆಟ್ರಿಂದ ಬಂತು ಸ್ಪಷ್ಟನೆ

ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿ, ಫಿಲ್ಮ್ಸ್ ಮತ್ತು ಫೌಂಡೇಷನ್ ಖಾತೆಗಳನ್ನು ಹೊರತುಪಡಿಸಿ ಎಲ್ಲರನ್ನೂ ಅನ್‌ಫಾಲೋ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅವರ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸ ಆಗ್ತಿರೋ ಸುದ್ದಿ ಎಂದರೆ, ರಿಷಬ್​ ಶೆಟ್ಟಿ ಅವರು, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮೂವರನ್ನು ಬಿಟ್ಟು ಎಲ್ಲರನ್ನೂ ಅನ್​ಫಾಲೋ ಮಾಡಿರುವುದು. ಕಾಂತಾರ ಚಿತ್ರದ ಬಳಿಕ ರಿಷಬ್ ಶೆಟ್ಟಿ ಮೊದಲಿಗೆ ಕೆಲವರನ್ನು ಅನ್​ಫಾಲೋ ಮಾಡಿರುವುದಾಗಿ ಸುದ್ದಿ ಸದ್ದು ಮಾಡಿತ್ತು. ಆ ಬಳಿಕ ಒಬ್ಬೊಬ್ಬನ್ನೇ ಅನ್​ಫಾಲೋ ಮಾಡುತ್ತಾ ಕೊನೆಗೆ ಮೂವರನ್ನು ಬಿಟ್ಟು ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ.

ಪತ್ನಿ ಪ್ರಗತಿ ಶೆಟ್ಟಿ, ರಿಷಬ್​ ಶೆಟ್ಟಿ ಫಿಲ್ಮ್ಸ್​ ಮತ್ತು ರಿಷಬ್​ ಶೆಟ್ಟಿ ಫೌಂಡೇಷನ್​ ಇಷ್ಟನ್ನು ಬಿಟ್ಟು ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಸೂಚನೆ ನೀಡದೇ ಏಕಾಏಕಿ ಅನ್​ಫಾಲೋ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದೀಗ ಈ ಬಗ್ಗೆ ಅವರ ಆಪ್ತ ಪ್ರಮೋದ್ ಶೆಟ್ಟಿ ಮಾಧ್ಯಮವೊಂದರಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗೆ ಕುಳಿತಿದ್ದಾಗ ​ ಸಿಬ್ಬಂದಿಯೊಬ್ಬರು ಬಂದು ಏನ್​ ಸರ್​, ರಿಷಬ್​ ಶೆಟ್ಟಿ ಹೀಗೆ ಮಾಡಿಬಿಟ್ಟಿದ್ದಾರೆ ಎಂದ. ಇನ್​ಸ್ಟಾಗ್ರಾಮ್​ ನೋಡಿದಾಗ, ಮೂವರನ್ನು ಬಿಟ್ಟು ಎಲ್ಲರನ್ನೂ ಅನ್​ಫಾಲೋ ಮಾಡಿದ್ದರಿಂದ ಇದೊಳ್ಳೆ ಕಥೆಯಾಯ್ತಲ್ಲಪ್ಪ, ನನ್ನನ್ನಷ್ಟೇ ಅಲ್ಲ, ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾನಲ್ಲ. ಏನೋ ಕಾರಣ ಇರುತ್ತೆ ಬಿಡು ಅಂದೆ ಎಂದು ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ ನಟ.

ಅವನು ಯಾಕೆ ಅನ್​ಫಾಲೋ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಪ್ರತಿಯೊಬ್ಬರಿಗೂ ಬೆಳವಣಿಗೆಯ ಹಂತವಿರುತ್ತದೆ. ನಾನೀಗ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ ಮಾಡುತ್ತಿದ್ದೇನೆ. ನನ್ನ ಇನ್ನೊಂದಿಷ್ಟ ಸಿನಿಮಾ ಆದ ಮೇಲೆ ಅದಕ್ಕೊಂದು ಟೀಮ್​ ಅಂತ ಬರುತ್ತದೆ. ಆಮೇಲೆ ಏಜೆನ್ಸಿ ಬರುತ್ತದೆ. ಆ ಸಮಯದಲ್ಲಿ ಇವೆಲ್ಲಾ ಮಾಮೂಲು ಎಂದಿದ್ದಾರೆ ಪ್ರಮೋದ್​ ಶೆಟ್ಟಿ.

ಏಜೆನ್ಸಿ ಬಂದ ಮೇಲೆ ಅವರ ಐಡಿಯಾ ಬೇರೆ ಇರುತ್ತದೆ, ಸ್ಟ್ಯಾಟಜಿ ಬೇರೆ ಇರುತ್ತದೆ. ಇಷ್ಟೊಂದು ಫ್ಯಾನ್ಸ್​ ಅನ್ನು ಫಾಲೋ ಮಾಡುವುದು ಸರಿಯಲ್ಲ ಎನ್ನಬಹುದು. ಲಿಮಿಡೆಟ್​ ಇರಬೇಕು ಎಂದಿರಬಹುದು. ಹೀಗೆಲ್ಲಾ ಆಗಿರೋದಕ್ಕೆ ರಿಷಬ್​ ಈ ರೀತಿ ಮಾಡಿರಬಹುದು ಎಂದಿದ್ದಾರೆ ನಟ.

ಫ್ರೆಂಡ್​ಷಿಪ್​ನಲ್ಲಿ ಎದುರು ಬದುರು ಕುಳಿತಾಗ ಯಾಕೋ ಹೀಗೆ ಮಾಡ್ದೆ ಅಂತ ಕೇಳಬಹುದು. ಆದರೆ ಇದಕ್ಕಾಗಿಯೇ ಕಾಲ್​ ಮಾಡಿ ಕೇಳೋದು ಸರಿ ಇರಲ್ಲ ಅಂತ ಕೇಳಲಿಲ್ಲ. ಏನೋ ಒಂದು ಕಾರಣ ಇರುತ್ತೆ ಬಿಡಿ ಎಂದಿದ್ದಾರೆ ಪ್ರಮೋದ್​ ಶೆಟ್ಟಿ

Source link

Leave a Reply

Your email address will not be published. Required fields are marked *