ಪ್ರಮೋದ್ ಶೆಟ್ಟಿ (ಪ್ರಮೋದ್ ಶೆಟ್ಟಿ) ಅವರಿಗೆ ಪೊಲೀಸ್ ಪಾತ್ರಗಳು ಹೆಚ್ಚಾಗಿ ಇರುತ್ತವೆ. ‘ಶೇಷ 2016’ (ಶೇಷ 2016) ಸಿನಿಮಾದಲ್ಲಿ ಕೂಡ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಒಟಿಟಿ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ (ಅಮೆಜಾನ್ ಪ್ರೈಮ್ ವಿಡಿಯೋ) ಸೇರಿಸಿವೆ. ಈ ಖುಷಿಯ ವಿಷಯ ತಿಳಿಸಲು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ.
‘ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್’ ಮೂಲಕ ಉಮೇಶ್ ಗೌಡ , ಮಂಜುವಾಣಿ ವಿ.ಎಸ್. ಮತ್ತು ವೀಣಾ ಎಸ್. ಅವರು ‘ಶೇಷ 2016’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರದೀಪ್ ಅರಸೀಕೆರೆ ಅವರು ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಜಾನ್ ಕೈಪ್ಪಲ್ಲಿ, ಸಿದ್ಲಿಂಗು ಶ್ರೀಧರ್, ದೇವರಾಜ್, ಸಾಯಿ ಭೈರವ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರ್.ಎಸ್. ಆನಂದ್ ಕುಮಾರ್ ಅವರ ಛಾಯಾಗ್ರಹಣವಿದೆ.
ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕಥೆ ಆದ್ದರಿಂದ ‘ಶೇಷ 2016’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಎಸ್ಸಿಪಿ ಗಣೇಶ್ ಮತ್ತು ಮೋಹನ್ ಕುಮಾರ್ ದಾನಪ್ಪ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ‘ಜನರಲ್ಲಿ ಜಾಗೃತಿ ಮೂಡಿಸುವ ಸಮಾಜಕ್ಕೆ ಉತ್ತಮ ಚಿತ್ರಗಳನ್ನು ಕೊಡುವ ಕೆಲಸ ಆಗಬೇಕು’ ಎಂದು ಎಸ್ಸಿಪಿ ಗಣೇಶ್ ಹೇಳಿದರು. ‘ಕನ್ನಡದ ಉತ್ತಮ , ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾ ನೋಡಿ ಪ್ರೋತ್ಸಾಹಿಸಿ’ ಎಂದು ಮೋಹನ್ ಕುಮಾರ್ ದಾನಪ್ಪ ಅವರು ಹೇಳಿದರು.
ಒಟಿಟಿ ರೈಟ್ಸ್ ಮಾರಾಟ ಆಗಿದ್ದಕ್ಕೆ ಪ್ರಮೋದ್ ಶೆಟ್ಟಿ ಸಂತಸ. ‘ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಮಲಯಾಳಂ ಡಬ್ ಕೂಡ ನಾನೇ ಮಾಡಿದ್ದೇನೆ. ಇದು ಸ್ಟೇಷನ್ ಸುತ್ತ ನಡೆಯುವ ಘಟನೆ. ಒಂದು ರೀತಿ ಬೆಲ್ ಬಾಟಮ್ ಸಿನಿಮಾ ರೀತಿಯ ಫೀಲ್ ಕೊಡುತ್ತದೆ’ ಎಂದು ಪ್ರಮೋದ್ ಶೆಟ್ಟಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ಹೀಗೆ ಇರೋದು ಏಕೆ? ವಿವರಿಸಿದ ಪ್ರಮೋದ್ ಶೆಟ್ಟಿ
ನಿರ್ದೇಶಕ ಪ್ರದೀಪ್ ಅರಸೀಕೆರೆ ಅವರು ಮಾತನಾಡಿ, ‘2016ರ ಕಾಲದ ಘಟ್ಟದಲ್ಲಿ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ನಡೆಯುತ್ತಿರುವ ಕಾಲ್ಪನಿಕ ಘಟನೆಗಳ ಸುತ್ತ ಹೆಣೆದ ಕಥೆ ಈ ಸಿನಿಮಾದಲ್ಲಿದೆ. ಹಗಲು ರಾತ್ರಿ ಎನ್ನದೆ ಸುಮಾರು 35 ದಿನ ಶೂಟಿಂಗ್ ಮಾಡಿದ್ದೇವೆ. ಮಾರ್ಚ್ 6ರಂದು ನಮ್ಮ ಸಿನಿಮಾ ಬಿಡುಗಡೆಯಾಗಲಿದೆ’ ಎಂದು ಹೇಳಿದರು. ಇದು ಅವರ ಮೊದಲ ಸಿನಿಮಾ. ಕರ್ನಾಟಕ ಮತ್ತು ಕೇರಳದ ಹಲವು ಭಾಗಗಳಲ್ಲಿ ಪ್ರಚಾರ ಮಾಡಿದ ನಿರ್ಮಾಪಕ ಉಮೇಶ್ ಗೌಡ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.