Headlines

ಟ್ರೇಲರ್ ಮೂಲಕ ಗಮನ ಸೆಳೆದ ಪ್ರಣವ್ ಮೋಹನ್​ಲಾಲ್​ ನಟನೆಯ ಹಾರರ್ ಚಿತ್ರ ‘ಡೀಯಸ್ ಈರೇ’

ಟ್ರೇಲರ್ ಮೂಲಕ ಗಮನ ಸೆಳೆದ ಪ್ರಣವ್ ಮೋಹನ್​ಲಾಲ್​ ನಟನೆಯ ಹಾರರ್ ಚಿತ್ರ ‘ಡೀಯಸ್ ಈರೇ’


ಮಲಯಾಳಂ ಸೂಪರ್ ಸ್ಟಾರ್ ಮೊಹಲ್ಲಾಲ್ ಅವರ ಪುತ್ರ ಪ್ರಣವ್ (ಪ್ರಣವ್ ಮೋಹನ್ ಲಾಲ್) ಅವರಿಗೆ ಚಿತ್ರರಂಗದಲ್ಲಿ ಸಕ್ಸಸ್ ಸಿಕ್ಕಿದೆ. ಹಾಗಿದ್ದರೂ ಕೂಡ ಅವರ ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರುತ್ತಿಲ್ಲ. ‘ಹೃದಯಂ’ ಚಿತ್ರದ ಬಳಿಕ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚಾಯಿತು. ಈಗ ಅವರು ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ‘ಡೀಯಸ್ ಈರೇ’ (ಡೈಸ್ ಐರೇ) ಸಿನಿಮಾದಲ್ಲಿ ಪ್ರಣವ್ ಮೋಹನ್ ಲಾಲ್ ಅವರು ಡಿಫರೆಂಟ್ ಪಾತ್ರ ಮಾಡಿದ್ದಾರೆ. ಅಂದಹಾಗೆ, ಇದೊಂದು ಹಾರರ್ ಸಿನಿಮಾ. ಈಗ ಟ್ರೇಲರ್ (ಡೈಸ್ ಐರೇ ಟ್ರೈಲರ್) ಬಿಡುಗಡೆ ಆಗಿ ಗಮನ ಸೆಳೆದಿದೆ.

‘ಡೀಯಸ್ ಈರೇ’ ಸಿನಿಮಾಗೆ ರಾಹುಲ್ ಸದಾಶಿವನ್ ಅವರು ನಿರ್ದೇಶನ ಮಾಡಿದ್ದಾರೆ. ಎಸ್. ಶಶಿಕಾಂತ್ ಹಾಗೂ ಚಕ್ರವರ್ತಿ ರಾಮಚಂದ್ರ ಅವರ ‘ನೈಟ್ ಶಿಫ್ಟ್ ಸ್ಟುಡಿಯೋ’ ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. 2 ನಿಮಿಷ ಅವಧಿಯ ಟ್ರೇಲರ್ ನೋಡಿ ವೀಕ್ಷಿಸು ಇಷ್ಟಪಟ್ಟಿದ್ದಾರೆ. ಪ್ರಣವ್ ಮೋಹನ್ ಲಾಲ್ ಅಭಿಮಾನಿಗಳಿಗೆ ಈ ಟ್ರೇಲರ್ ಇಷ್ಟವಾಗಿದೆ.

ಈ ಸಿನಿಮಾದ ಶೀರ್ಷಿಕೆಗೆ The Day Of Wrath ಎಂಬ ಟ್ಯಾಗ್ ಲೈನ್ ಇದೆ. ಆ ಮೂಲಕ ವೀಕ್ಷಿಸುವ ಕೌತುಕವನ್ನು ಹೆಚ್ಚಿಸಲಾಗಿದೆ. ಈ ಚಿತ್ರದಲ್ಲಿ ಪ್ರಣವ್ ಮೋಹನ್ ಲಾಲ್ ಜೊತೆ ಜಿಬಿನ್ ಗೋಪಿನಾಥ್, ಅರುಣ್ ಅಜಿಕುಮಾರ್, ಮನೋಹರಿ ಜಾಯ್ ಮುಂತಾದವರು ನಟಿಸಿದ್ದಾರೆ. ಅಕ್ಟೋಬರ್ 31 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

‘ಡೀಯಸ್ ಈರೇ’ ಸಿನಿಮಾ ಟ್ರೇಲರ್:

ಕ್ರಿಸ್ಟೋ ಕ್ಸೇವಿಯರ್ ಅವರ ಸಂಗೀತ ನಿರ್ದೇಶನ, ಶೆಹನಾದ್ ಜಲಾಲ್ ಅವರ ಛಾಯಾಗ್ರಹಣ, ಶಫಿಕ್ಯೂ ಮೊಹಮ್ಮದ್ ಅಲಿ ಅವರ ಸಂಕಲನ ಈ ಸಿನಿಮಾದಲ್ಲಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಯಾವುದಕ್ಕೂ ಸಿಕ್ಕಾಪಟ್ಟೆ ಹಾರರ್ ಇರಲಿದೆ ಎಂಬುದು ಸಿನಿಪ್ರಿಯರ ನಿರೀಕ್ಷೆ.

ಇದನ್ನೂ ಓದಿ: ವಿದೇಶದಲ್ಲಿ ಊಟ, ವಸತಿಗಾಗಿ ಕುರಿ ಮೇಯಿಸಿ, ಕೃಷಿ ಮಾಡುತ್ತಿರುವ ಮೋಹನ್‌ಲಾಲ್ ಪುತ್ರ ಪ್ರಣವ್

ಇಡೀ ಸಿನಿಮಾದಲ್ಲಿ ಪ್ರಣವ್ ಮೋಹನ್ ಲಾಲ್ ಅವರ ಪಾತ್ರವೇ ಹೈಲೈಟ್ ಆಗಲಿದೆ. ಟ್ರೇಲರ್ ನಲ್ಲಿ ಆ ಬಗ್ಗೆ ಸುಳಿವು ಸಿಕ್ಕಿದೆ. ನಿರ್ದೇಶಕ ರಾಹುಲ್ ಸದಾಶಿವನ್ ಅವರು ಹಾರರ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ‘ರೆಡ್ ರೇನ್’, ‘ಭೂತಕಾಲ’, ‘ಭ್ರಮಾಯುಗ’ ಸಿನಿಮಾಗಳ ನಂತರ ಅವರು ‘ಡೀಸ್ ಈರೇ’ ಚಿತ್ರವನ್ನು ಮಾಡಿದ್ದಾರೆ. ಆ ಕಾರಣದಿಂದಲೂ ಹೈಪ್ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *