ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ

ನಟಿಯ ಅನುಮಾನಾಸ್ಪದ ಸಾವು: 23 ವರ್ಷಗಳ ಆರೋಪಿಗೆ ಶಿಕ್ಷೆ


‘ಸ್ನೇಹಮಂಟೆ ಇದೆರ’, ‘ರಾಯುಡು’, ‘ಕಲಸುಕೋವಾಲನಿ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ (ಸಿನಿಮಾ) ಆಗಿನ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ನಟಿಸಿದ್ದ ನಟಿ ಪ್ರತ್ಯೂಷ, ನಟಿ ಸ್ಟಾರ್ ಆಗಿ ಬೆಳೆಯುತ್ತಿರುವ ಹೊತ್ತಿನಲ್ಲಿ 2002ರ ಫೆಬ್ರವರಿ 22 ರಂದು ಅನುಮಾನಾಸ್ಪದವಾಗಿ ನಿಧನರಾದರು. ಅವರ ಸಾವು ಆಗ ಅವಿಭಜಿತ ಆಂಧ್ರ ಪ್ರದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ 24 ವರ್ಷಗಳ ಬಳಿಕ ನಟಿಯ ಸಾವಿನ ಬಗ್ಗೆ ತೀರ್ಪು ಪ್ರಕಟಿಸಿದೆ. ಪ್ರತ್ಯೂಷ ಸಾವಿನ ಪ್ರಕರಣದಲ್ಲಿ ನಟಿಯ ಗೆಳೆಯನಾಗಿದ್ದ ಸಿದ್ಧಾರ್ಥ್ ರೆಡ್ಡಿ ದೋಷಿ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ಸಾವಿಗೀಡಾಗಿರುವ ನಟಿ ಪ್ರತ್ಯುಷಾ ಹಾಗೂ ಈಗ ಶಿಕ್ಷೆಗೆ ಗುರಿಯಾಗಿರುವ ಸಿದ್ಧಾರ್ಥ್ ಪರಸ್ಪರ ಪ್ರೀತಿಸುತ್ತಿದ್ದರು, ಇಬ್ಬರ ಮದುವೆಗೆ ಸಿದ್ಧಾರ್ಥ್ ರೆಡ್ಡಿ ಕುಟುಂಬದವರು ಒಪ್ಪಲಿಲ್ಲ ಎಂದು ಇಬ್ಬರೂ ಸಹ ಕೂಲ್ ಡ್ರಿಂಕ್ಸ್ ನಲ್ಲಿ ವಿಷ ಕುಡಿದಿದ್ದು, ಪ್ರತ್ಯುಷ ಸಾವಿಗೀಡಾದರೆ, ಸಿದ್ಧಾರ್ಥ್ ರೆಡ್ಡಿ ಬದುಕಿ ಉಳಿದಿದ್ದಾರೆ. ಆದರೆ ಇದನ್ನು ಒಪ್ಪದ ಪ್ರತ್ಯುಷಾ ತಾಯಿ ಸರೋಜಿನಿ ನ್ಯಾಯಾಲಯಗಳ ಮೂಲಕ ಸತತ ಹೋರಾಟ ಮಾಡಿ ಇದೀಗ ಕೊನೆಗೂ ಸಿದ್ಧಾರ್ಥ್‌ಗೆ ಶಿಕ್ಷೆ ಆಗುವಂತೆ ಮಾಡಿದ್ದಾರೆ.

ಪ್ರತ್ಯುಷ ತಾಯಿ ಹೇಳಿದ್ದಂತೆ, ಪ್ರತ್ಯೂಷಗೆ ‘ಜಯಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತಂತೆ. ಆ ಖುಷಿಯಲ್ಲಿದ್ದ ಪ್ರತ್ಯುಷ ಗೆಳತಿಯ ಜೊತೆಗೆ ಪಾರ್ಲರ್ ಗೆ ಹೋಗಿದ್ದರಂತೆ. ಅಲ್ಲಿಗೆ ಬಂದ ಸಿದ್ಧಾರ್ಥ್ ರೆಡ್ಡಿ ಪ್ರತ್ಯುಷರನ್ನು ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ಗೆಳತಿ, ಪ್ರತ್ಯುಷಗೆ ಕರೆ ಮಾಡಿದ್ದಾಳೆ, ಆಗಲೂ ಸಹ ಪ್ರತ್ಯುಷ ಕೆಲವೇ ನಿಮಿಷಗಳಲ್ಲಿ ಬರುವುದಾಗಿ ಹೇಳಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ಪ್ರತ್ಯುಷಳನ್ನು ಸಿದ್ಧಾರ್ಥ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಒಟ್ಟೊಟ್ಟಿಗೆ ಐದು ಸಿನಿಮಾ ಹಿಡಿದು ಬಂದ ರಕ್ಷಿತ್ ಶೆಟ್ಟಿ

ಸಿದ್ಧಾರ್ಥ್ ನೀಡಿರುವ ಹೇಳಿಕೆಯಂತೆ ಸಹ ಕೂಲ್ ಡ್ರಿಂಕ್ಸ್ ನಲ್ಲಿ ವಿಷ ಬೆರೆಸಿ ಕುಡಿದಿದ್ದರು. ಆದರೆ ಪ್ರತ್ಯುಷ ಅಲ್ಲಿಯೇ ನಿಧನ ಹೊಂದಿದರು. ಸಿದ್ಧಾರ್ಥ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬದುಕುಳಿದಿದ್ದರು. ಈ ಹಿಂದೆಯೇ ಮೆಟ್ರೊಪಾಲಿಟಿನ್ ಕೋರ್ಟ್, ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಸಿದ್ಧಾರ್ಥ್‌ಗೆ ಐದು ವರ್ಷಗಳ ಕಾಲ ಸಜೆ ನೀಡಿತ್ತು. ಅದಾದ ಬಳಿಕ ಸಿದ್ಧಾರ್ಥ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅಲ್ಲಿ ಆತನಿಗೆ ಎರಡು ವರ್ಷಗಳ ಸಾದಾ ಸಜೆ ವಿಧಿಸಲಾಯ್ತು. ಬಳಿಕ ಪ್ರತ್ಯೂಷ ತಾಯಿಗೆ ಅರ್ಜಿ ಸಲ್ಲಿಸಿದ್ದರು. ಹಲವು ವರ್ಷಗಳ ವಿಚಾರಣೆ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ.

ಪ್ರಕರಣದಲ್ಲಿ ಸಿದ್ಧಾರ್ಥ್ ಆತ್ಮಹತ್ಯೆಗೆ ಪ್ರಚೋದನೆ, ಆತ್ಮಹತ್ಯೆಗೆ ಸಹಾಯ ಮಾಡಿದ ಆರೋಪಿಗಳಿಗೆ ದೋಷಿ ಎಂದು ಪರಿಗಣಿಸಲಾಗಿದೆ, ಸಿದ್ಧಾರ್ಥ್ ರೆಡ್ಡಿ ಈ ನಾಲ್ಕು ವಾರಗಳಲ್ಲಿ ಪೊಲೀಸರಿಗೆ ಶರಣಾಗಬೇಕು. ಆದರೆ ಶಿಕ್ಷೆಯ ತೀರ್ಪು ಇನ್ನೂ ಪ್ರಕಟಿಸಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:12 pm, ಮಂಗಳವಾರ, 17 ಫೆಬ್ರವರಿ 26



Source link

Leave a Reply

Your email address will not be published. Required fields are marked *