ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಕ್ಷಣಗಣನೆ: ಸಿದ್ಧತೆ ಹೇಗಿದೆ?

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಕ್ಷಣಗಣನೆ: ಸಿದ್ಧತೆ ಹೇಗಿದೆ?


ಕಲಬುರಗಿ, ನವೆಂಬರ್ 16: ಚಿತ್ತಾಪುರದಲ್ಲಿ ಬಹು ನಿರೀಕ್ಷಿತ ಆರ್ ಎಸ್ ಎಸ್ ಪಥಸಂಚಲನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುಮಾರು ಒಂದು ತಿಂಗಳ ಕಾಲ ನಡೆದ ಕಾನೂನು ಸಮರದ ಬಳಿಕ ಇಂದು ಪಥಸಂಚಲನ ಉತ್ತಮ. ಈ ಹಿನ್ನಲೆ ಆರ್ ಎಸ್ ಎಸ್ ಸಂಘಟನೆಯಿಂದ ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆದಿವೆ. ಮಾಹಿತಿಯನ್ನು0 ಮಾಹಿತಿ ಪ್ರಕಾರ, 30 ಗಣವೇಷಧಾರಿಗಳು ಮತ್ತು 50 ಬ್ಯಾಂಡ್ ವಾದಕರು ಈ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬಜಾಜ್ ಕಲ್ಯಾಣ ಮಂಟಪದಿಂದ ಪಥಸಂಚಲನ ನಡೆಯಲಿದೆ, ಇದು ಅಂಬೇಡ್ಕರ್ ಸರ್ಕಲ್, ಬಸವೇಶ್ವರ ಸರ್ಕಲ್, ಕೆನರಾ ಬ್ಯಾಂಕ್ ಸರ್ಕಲ್ ಮತ್ತು ಎಪಿಎಂಸಿ ಮಾರ್ಗವಾಗಿ ಸಾಗಿ, ಮತ್ತೆ ಬಜಾಜ್ ಕಲ್ಯಾಣ ಮಂಟಪದಲ್ಲೇ ಕೊನೆಗೊಳ್ಳಲಿದೆ. ಸಂಜೆ 5:15 ರವರೆಗೆ ನಡೆಯಲಿರುವ ಈ ಪಥಸಂಚಲನದ ನಂತರ ವೇದಿಕೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *