ಹಂಚಿಕೆಗೆ ಸಿದ್ಧವಾಗಿರುವ ಮನೆಗಳು.
ಹುಬ್ಬಳ್ಳಿ, ನವೆಂಬರ್ 24: ಇತ್ತೀಚೆಗೆ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಮಹಾಘಟಬಂಧನಕ್ಕೆ ಉಂಟಾದ ಸೋಲು, ಮತ್ತೊಂದೆಡೆ ಇತ್ತ ಕರ್ನಾಟಕದಲ್ಲಿ ಸಿಎಂ ಕುರ್ಚಿಗಾಗಿ ನಾಯಕರ ನಡೆಯುತ್ತಿರೋ ಫೈಟ್ ನಿಂದ ರಾಜ್ಯದ ಬಡವರಿಗೆ ಸಮಸ್ಯೆಯಾಗಿದೆ. ಕೇಳೋಕೆ ನಿಮಗೆ ಅಚ್ಚರಿ ಅನಿಸಿದರೂ ಇದು ಸತ್ಯ. ಕಾಂಗ್ರೆಸ್‌ನಲ್ಲಿ ಸದ್ಯದ ಬೆಳವಣಿಗೆಗಳಿಂದ ಬಡವರಿಗಾಗಿ ನಿರ್ಮಿಸಲಾಗಿದೆ ಮನೆಗಳ ಹಂಚಿಕೆಗೆ ಮುಹೂರ್ತವೇ ಬರುತ್ತಿಲ್ಲ. ನಿಗದಿತ ಕಾರ್ಯಕ್ರಮವೂ ಮುಂದೂಡಿಕೆಯಾಗಿರೋದುಗಳ ನಿರಾಸೆಗೆ ಕಾರಣ.
ವಸತಿ ಇಲಾಖೆ, ಬಡವರಿಗಾಗಿ ಬರೋಬ್ಬರಿ 42 ಸಾವಿರ ಮನೆಗಳ ಹಂಚಿಕೆಗೆ ಸಿದ್ಧವಾಗಿದ್ದರೂ ಅವುಗಳ ಹಂಚಿಕೆ ಇನ್ನೂ ನಡೆದಿಲ್ಲ. ಅಂತಿಮವಾಗಿ ನವೆಂಬರ್ 29ಕ್ಕೆ ಹುಬ್ಬಳ್ಳಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಿ ಇವುಗಳ ಹಂಚಿಕೆಗೆ ಸಿದ್ಧತೆ ನಡೆದಿದೆ. ಮಂಟೂರು ರಸ್ತೆಯಲ್ಲಿ ರಾಜ್ಯ ಮಟ್ಟದ ಬೃಹತ್ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳೂ ಭರದಿಂದ ಸಾಗಿದ್ದವು. ಆದರೆ ಈ ಕಾರ್ಯಕ್ರಮವೀಗ ದಿಢೀರನೆ ಮುಂದೂಡಿಕೆಯಾಗಿದೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ, ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮಯ ನೀಡದೇ ಇರೋದು.
ಇದನ್ನೂ ಓದಿ: ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ, ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ವೈರಲ್ ಆಡಿಯೋ
ರಾಜ್ಯದಲ್ಲಿ ನಿರ್ಮಾಣವಾಗಿರೋ 42 ಸಾವಿರ ಮನೆಗಳ ಎತ್ತರ, ಹುಬ್ಬಳ್ಳಿ ನಗರದ ಮಂಟೂರು ರಸ್ತೆಯಲ್ಲಿ ಸಾವಿರದ ಐನೂರಕ್ಕೂ ಹೆಚ್ಚು ಮನೆಗಳು ತಲೆ ಎತ್ತಿವೆ. ಸ್ಲಾಂ ಬೋರ್ಡ್ ಅಧ್ಯಕ್ಷ, ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಮುತುವರ್ಜಿಯಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿಯೇ ಈ ಮನೆಗಳು ಮಂಜೂರಾಗಿದ್ದವು. ಆದರೆ, ಆಮೆಗತಿಯಲ್ಲಿ ಕಾಮಗಾರಿ ನಡೆದ ಮನೆಗಳ ನಿರ್ಮಾಣ ಕಾರ್ಯ ಮುಗಿದಿರಲಿಲ್ಲ.ಈದೀಗ ಮನೆಗಳ ನಿರ್ಮಾಣ ವರ್ಷವಾಗುತ್ತ ಬಂದರೂ ಅವುಗಳ ಹಂಚಿಕೆಗೆ ಸಮಯ ಕೂಡಿ ಬರ್ತಿಲ್ಲ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಹುಬ್ಬಳ್ಳಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡಲು ವಸತಿ ಸಚಿವ ಜಮೀರ್ ಅಹ್ಮದ್ ಮುಂದಾಗಿದ್ದರು. ಆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮತ್ತು ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ಕರೆಸಬೇಕೆಂಬುದು ಅವರ ಆಸೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಏಪ್ರಿಲ್ 27 ರಂದು ಸಿದ್ದರಾಮಯ್ಯ ಸಿಎಂ ಸಮಯ ಕೂಡ ನೀಡಿದ್ದರು. ಆದರೆ ಐಸಿಸಿ ಅಧ್ಯಕ್ಷರ ಸಮಯ ಸಿಗದ ಕಾರಣ ಅದು ಮುಂದಕ್ಕೆ ಹೋಗಿತ್ತು. ಹೀಗಾಗಿ ಮೇ ತಿಂಗಳ ಮೊದಲ ವಾರದಲ್ಲಿಯಾದ್ರು ಕಾರ್ಯಕ್ರಮ ಮಾಡಬೇಕೆಂದು ಎಲ್ಲಾ ಸಚಿವರು ಸಿದ್ಧತೆ ನಡೆಸಿದ್ದರು. ಆಗಲೂ ನಾಯಕರ ಸಮಯ ಹೊಂದಾಣಿಕೆ ಆಗಲಿಲ್ಲ. ಬಳಿಕ ಮಳೆಗಾಲ ಆರಂಭವಾದ ಕಾರಣ ಮನೆಗಳ ಹಂಚಿಕೆ ಬಾಕಿ ಉಳಿದಿತ್ತು. ನವೆಂಬರ್ 29ಕ್ಕೆ ಫಿಕ್ಸ್ ಆಗಿದ್ದ ಕಾರ್ಯಕ್ರಮವೂ ನಾಯಕರ ಅಲಭ್ಯತೆ ಕಾರಣಕ್ಕೆ ಮುಂದೆ ಹೋಗಿದೆ ಎನ್ನುತ್ತಿದ್ದಾರೆ. ಆದರೆ ಚಳಿಗಾಲದ ವಿಧಾನಸಭೆ ಅಧಿವೇಶನದ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಹಾಗೂ ಸ್ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.