ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 2 ದಿನಗಳ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್ ಪ್ರಾರಂಭವಾಯಿತು, ನಿನ್ನೆ ಮೊದಲ ದಿನ ಯುವಕ, ಯವತಿಯರು ಮಳೆ ನಡುವೆಯೂ ಮ್ಯೂಸಿಕ್ಗೆ ಕುಣಿದು ಕುಪ್ಪಳಿಸಿದ್ದಾರೆ.
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಅದ್ಧೂರಿ ವೇದಿಕೆಯ ಮೂಲಕ 2 ದಿನಗಳ ಕಾಲ ಮ್ಯೂಸಿಕ್ ಫೆಸ್ಟ್ ಆಯೋಜನೆ ಮಾಡಿದ್ದು, ನಿನ್ನೆ ಬಾಲಿವುಡ್ನ ಪ್ರಸಿದ್ಧ ಗಾಯಕ ಜಾವಿದ್ ಆಲಿ ತಮ್ಮ ಗಾಯನದ ಮೂಲಕ ರಂಜಿಸಿದರು.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಕಾರ್ಯಕ್ರಮದಲ್ಲಿ ವಿವಿಯ ನೂರಾರು ಯುವಕ, ಯುವತಿಯರು ಭಾಗವಹಿಸಿದ್ದರು. ರಾತ್ರಿ 10 ಗಂಟೆಯವರೆಗೆ ವಿದ್ಯಾರ್ಥಿಗಳು ಜಾವಿದ್ ಆಲಿ ಗಾಯನಕ್ಕೆ ಕುಣಿದು ಕುಪ್ಪಳಿಸುವ ಮೂಲಕ ಎಂಜಾಯ್ ಮಾಡಿದರು.
ಇನ್ನು ಇಂದು ಸಂಜೆ ಬಹುಭಾಷಾ ನಟಿ ಶ್ರೀಲೀಲಾ ಸೇರಿದಂತೆ ಸ್ಟಾರ್ ಪರ್ಫಾರ್ಮರ್ ರೆಬಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಯುವ ಜನರನ್ನು ಮತ್ತಷ್ಟು ರಂಜಿಸಿದರು. ಇನ್ನು ಇದೇ ವೇಳೆ ಆರ್ಸಿಬಿ, ಆರ್ಸಿಬಿ ಅಂತ ಯುವ ಜನತೆ ಕುಣಿದು ಕುಪ್ಪಳಿಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜಾನುಕುಂಟೆ ಪೊಲೀಸರಿಂದ ವಿವಿಯ ಹೊರ ಹಾಗೂ ಒಳ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಸೇರಿಸಿ ಉಳಿದವರಿಗೆ ನಿರ್ಬಂಧಿಸಲಾಗಿದೆ.
ಒಟ್ಟಿನಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ಎರಡು ದಿನದ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್ ಅದ್ಧೂರಿಯಾಗಿ ನಡೆದಿದ್ದು, ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಫುಲ್ ಎಂಜಾಯ್ ಮಾಡಿದ್ದಾರೆ.





