ನವಂಬರ್, ಜನವರಿ 25: ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಭಾನುವಾರ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರಿಗೆ ಗೌರವಾರ್ಪಣೆ ಸಲ್ಲಿಸಿದರು. ‘ನಾವು ಭಾರತೀಯರು ಬಹಳ ಉತ್ಸಾಹದಿಂದ ಗಣರಾಜ್ಯೋತ್ಸವ ದಿನವನ್ನು ಆಚರಿಸುವಂತಾಗಿದೆ. ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯದ ಸ್ಥಿತಿಯನ್ನು ಅವಲೋಕಿಸಲು ಇದು ಸುದಿನವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು.
ನಮ್ಮ ರಾಷ್ಟ್ರೀಯ ಭವಿಷ್ಯಕ್ಕೆ ನಾವೇ ನಿರ್ಮಾತೃಗಳು
‘1950ರ ಜನವರಿ 26ರಿಂದಲೂ ನಮ್ಮ ಗಣತಂತ್ರವನ್ನು ಸಾಂವಿಧಾನಿಕ ಗುರಿಗಳತ್ತ ಮುನ್ನಡೆಸಿದೆ. ಸಂವಿಧಾನ ಪೂರ್ಣವಾಗಿ ಜಾರಿಯಾದ ದಿನವದು. ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಗಣತಂತ್ರ ದೇಶಕ್ಕೆ ಸಂವಿಧಾನವೇ ಆಧಾರ ದಾಖಲೆಯಾಗಿದೆ. ಸಂವಿಧಾನವನ್ನು ರಚಿಸಿದವರು ರಾಷ್ಟ್ರೀಯತೆ ಮತ್ತು ಏಕತೆಗೆ ಭದ್ರ ಬುನಾದಿ ಹಾಕಿದ್ದಾರೆ’ ಎಂದು ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಭಾಷಣ ಮಾಡಿದರು.
ವಂದೇ ಮಾತರಂ ಗೀತೆಯಿಂದ ದೇಶಭಕ್ತಿ…
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ