ನವವಿವಾಹಿತೆ ಸಂಸಾರ ಹಾಳು ಮಾಡಿದ ಆ ವಿಡಿಯೋ: ಮಾಜಿ ಲವರ್​​ ಮನೆ ಬಂದು ಕುಳಿತ ಮಹಿಳೆ

ನವವಿವಾಹಿತೆ ಸಂಸಾರ ಹಾಳು ಮಾಡಿದ ಆ ವಿಡಿಯೋ: ಮಾಜಿ ಲವರ್​​ ಮನೆ ಬಂದು ಕುಳಿತ ಮಹಿಳೆ


ಚಿಕ್ಕಬಳ್ಳಾಪುರ, ಡಿಸೆಂಬರ್ 15: ಪ್ರೀತಿ ಹೆಸರಲ್ಲಿ ವಂಚಿಸಿ ಬೇರೆಯವರ ಜೊತೆ ಪ್ರಿಯತಮ ಮದುವೆ ಆಗುವ ವೇಳೆ ಕಲ್ಯಾಣ ಮಂಟಪಕ್ಕೆ ಸಂತ್ರಸ್ತೆಯರು ನುಗ್ಗಿ ರಾದ್ಧಾಂತ ನಡೆಸಿದ ಪ್ರಕರಣಗಳು ಕಳೆದೊಂದು ವಾರದಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿವೆ. ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಇದಕ್ಕೆ ವಿರುದ್ಧವಾದಂತಹ ಪ್ರಸಂಗವೊಂದು ನಡೆದಿದೆ. ಮದುವೆಯಾದ್ರೂ ಮಾಜಿ ಪ್ರಿಯತಮನ ಕಾಟ ತಪ್ಪದ ಹಿನ್ನೆಲೆ ರೊಚ್ಚಿಗೆದ್ದ ಯುವತಿಯೊಬ್ಬಳು ಆತನ ಮನೆ ಮುಂದೆಯೇ ಧರಣಿ ನಡೆಸಿದ್ದಾಳೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಪಲಿಚರ್ಚು ಗ್ರಾಮದ ಅಂಬರೀಶ್ ಎಂಬಾತನ ಮನೆ ಎದುರು ಯುವತಿ ಧರಣಿ ನಡೆಸುತ್ತಿದ್ದಾಗ ಬೇರೊಬ್ಬನ ಜೊತೆ ಆಕೆಯ ಮದುವೆಯಾದ್ರೂ ಬಿಡದೆ ಸಂಚಕಾರ ಆರೋಪ ಕೇಳಿಬಂದಿದೆ. ಅಂಬರೀಶ ಹಾಗೂ ಈಕೆ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಇನ್ನೇನು ಇಬ್ಬರು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಅಂಬರೀಶ ಜಾತಿಯ ಹೆಸರು ಹೇಳಿ ಬೇರೆಯಾಗೋಣ ಎಂದಿದ್ದಾನೆ. ಇದಕ್ಕೆ ಈಕೆಯೂ ಒಪ್ಪಿದ್ದು, ಆ ಬಳಿಕ ಬೇರೆ ಯುವಕನನ್ನು ಮದುವೆ ಮಾಡಿಕೊಂಡಿದ್ದಳು. ಆದರೆ ಮಾಜಿ ಪ್ರಿಯಕರ ಮಾಡಿದ ಕಿತಾಪತಿಗೆ ಈಕೆಯಸಂಸಾರ 20 ದಿನಗಳಲ್ಲೇ ಹಾಳಾಗಿದೆ.

ಇದನ್ನೂ ಓದಿ: ಇನ್ನೇನು ತಾಳಿ ಕಟ್ಟುವ ವೇಳೆಯಲ್ಲೇ ಮಂಟಪಕ್ಕೆ ಪ್ರೇಯಸಿ ಎಂಟ್ರಿ; ಕಕ್ಕಾಬಿಕ್ಕಿಯಾದ ಪ್ರಿಯಕರ

ಇನ್ನು ಮಾಜಿ ಪ್ರಿಯಕರ ಅಂಬರೀಶ್ ಈಕೆಯ ಜೊತೆಗಿದ್ದಾಗ ತೆಗೆದುಕೊಂಡ ಖಾಸಗಿ ವಿಡಿಯೋ ಮತ್ತು ಪೋಟೊಗಳನ್ನ ಅವಳ ಗೆಳೆಯ ಸುನಿಲ್ ಎನ್ನುವವರಿಗೆ ರವಾನೆ ಮಾಡಿದ್ದನಂತೆ. ಆ ಸುನೀಲ ಈಕೆಯ ಮೇಲಿನ ವೈಯಕ್ತಿಕ ದ್ವೇಷದ ಕಾರಣಕ್ಕೆ ಅವನನ್ನು ಯುವತಿಯ ಗಂಡನಿಗೆ ಕಳುಹಿಸಿದ್ದ. ಅದನ್ನು ನೋಡಿದ್ದೇ ತಡ ನಿನ್ನ ಸಹವಾಸವೇ ಬೇಡ ಎಂದು ಕಟ್ಟಿದ್ದ ಮಾಂಗಲ್ಯವನ್ನೂ ಕಿತ್ತುಕೊಂಡು ಗಂಡ ಈಕೆಯನ್ನು ತವರಿಗೆ ವಾಪಸ್ ಕಳುಹಿಸಿದ್ದಾನೆ. ಹೀಗಾಗಿ ನ್ಯಾಯಕ್ಕೆ ಉಡುಪಿ ಯುವತಿ ಮಾಜಿ ಪ್ರಿಯಕರ ಅಂಬರೀಶ್ ಮನೆಯ ಎದುರು ಪ್ರತಿಭಟನೆ ನಡೆಸಿದ್ದಾಳೆ. ಮನೆಗೆ ಮನೆಗೆ ಬೀಗ ಜಡಿದು ಅಂಬರೀಶ ನಾಪತ್ತೆಯಾಗಿದ್ದು, ಆತನ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ದೂರು ಕೂಡ ನೀಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *