ಕಿಚ್ಚ ಸುದೀಪ್ ಅವರ ಆಪ್ತರಾದ ಚಕ್ರವರ್ತಿ ಚಂದ್ರಚೂಡ್ (ಚಕ್ರವರ್ತಿ ಚಂದ್ರಚೂಡ್) ಅವರು ಸಿನಿಮಾ ನಿರ್ಮಾಪಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಅನೇಕ ನಿರ್ಮಾಪಕರು ಖಂಡಿಸುತ್ತಿದ್ದಾರೆ. ನಟಿ, ನಿರ್ಮಾಪಕಿ ಪ್ರಿಯಾ ಹಾಸನ್ ಸಹ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಿವಿ9 ಜತೆ ಅವರು ಮಾತನಾಡಿದ್ದಾರೆ. ‘ಚಂದ್ರಚೂಡ್ ಅವರ ವಿಡಿಯೋ ನೋಡಿದಾಗ ನನಗೆ ಅಸಹ್ಯ ಅನಿಸಿತು. ಅಷ್ಟು ಅಸಭ್ಯವಾದ ಪದವನ್ನು ಅವರು ಬಳಸಿದ್ದಾರೆ. ಹೆಣ್ಮಕ್ಕಳು ಕೇಳಲು ಹಿಂಜರಿಯುವಂತಹ ಪದಗಳನ್ನು ಬಳಸಲಾಗಿದೆ. ಡಾ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಎಂದಿದ್ದರು. ಆದರೆ ಈಗ ಚಂದ್ರಚೂಡ್ ಇಷ್ಟು ಹೀನಾಯವಾಗಿ ಮಾತನಾಡಿರುವುದು ಎಲ್ಲ ನಿರ್ಮಾಪಕರ ಮನಸ್ಸಿಗೆ ನೋವು ತಂದಿದೆ’ ಎಂದು ಹೇಳಿದರು ಪ್ರಿಯಾ ಹಾಸನ್ (ಪ್ರಿಯಾ ಹಾಸನ್) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.