Headlines

ಪ್ರಿಯಾಂಕಾ ಯಶಸ್ಸಿನಿಂದಾಗಿ ಮಗನಿಗೆ ಸರಿಯಾದ ಆರೈಕೆ ಸಿಗಲಿಲ್ಲ, ಒಬ್ಬಂಟಿಯಾಗೇ ಬೆಳೆದ: ತಾಯಿ ಮಧು ಚೋಪ್ರಾ ಬೇಸರ | Priyanka Chopra Mother Madhu Chopra Parenting Tips Talks Sons Sacrifice

ಕುಟುಂಬದಲ್ಲಿ ಒಬ್ಬರು ನೆಗೆಟಿವ್ ಇರಲಿ ಅಥವಾ ಪಾಸಿಟಿವ್ ಇರಲಿ ಅದರ ಪರಿಣಾಮ ಎಲ್ಲರ ಮೇಲಾಗುವುದು ಸಹಜ. ಮನೆಯಲ್ಲಿ ಮೊದಲು ಜನಿಸಿದ ಮಕ್ಕಳು ಸಾಕಷ್ಟು ಯಶಸ್ವಿಯಾದರೆ ನಂತರ ಜನಿಸಿದ ಮಕ್ಕಳು ಇದರ ಪರಿಣಾಮವನ್ನು ಸಾಕಷ್ಟು ಎದುರಿಸುತ್ತಾರೆ. ಅವರಂತೆ ಇವರು ಆಗಬೇಕು ಎಂಬ ಪೋಷಕರ ನಿರೀಕ್ಷೆ ಆ ಮಕ್ಕಳ ಮೇಲೆ ತೀವ್ರವಾಗಿರುತ್ತದೆ. ಇದರ ಪರಿಣಾಮ ಮಕ್ಕಳು ಬಳಲುತ್ತಾರೆ. ಇದು ಬರೀ ಜನಸಾಮಾನ್ಯರೆನಿಸಿದವರ ಮನೆಯ ಕತೆ ಅಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಇದೆ ಕತೆ. ಹಾಗೆಯೇ ಸಿನಿಮಾ ರಂಗದಲ್ಲೂ ಅಷ್ಟೇ ಅಪ್ಪ ಅಮ್ಮ ಸಾಕಷ್ಟು ಹೆಸರು ಮಾಡಿದ್ದರೆ ಮಕ್ಕಳ ಮೇಲೆ ಸಮಾಜದ ನಿರೀಕ್ಷೆ ತೀವ್ರವಾಗಿರುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್, ಮಗ ಅಭಿಷೇಕ್ ಬಚ್ಚನ್ ಅವರು ಕೂಡ ಒಳ್ಳೆಯ ನಟರೆ ಗೂಮರ್, ರೆಫ್ಯೂಜಿ, ಧೂಮ್, ಬಂಟಿ ಔರ್ ಬಬ್ಲಿ ಮುಂತಾದ ಸಿನಿಮಾಗಳಲ್ಲಿ ಅವರ ಅದ್ಭುತ ನಟನೆಯನ್ನು ಕಾಣಬಹುದು. ಆದರೆ ಅಮಿತಾಭ್ ಬಚ್ಚನ್ ಅವರ ಯಶಸ್ಸು ಜನಪ್ರಿಯತೆಯನ್ನು ತಲೆಯಲ್ಲಿಟ್ಟುಕೊಂಡೆ ಜನರು ಅಭಿಷೇಕ್ ಬಚ್ಚನ್ ಅವರ ಸಿನಿಮಾಗಳನ್ನು ನೋಡಿ ಅಳತೆ ಮಾಡಲು ಶುರು ಮಾಡಿದ್ದರಿಂದಾಗಿ ಅಪ್ಪನ ಖ್ಯಾತಿಯ ಪ್ರಭೆಯ ಮುಂದೆ ಮಗನ ಪ್ರತಿಭೆ ಯಾರಿಗೂ ಕಾಣಿಸಲೇ ಇಲ್ಲ, ಇದೊಂತರ ಸೂರ್ಯನ ಮುಂದೆ ನಕ್ಷತ್ರ ಮಂಕಾದಂತಹ ಸ್ಥಿತಿ. ಅದೇ ರೀತಿ ಈಗ ಪ್ರಿಯಾಂಕಾ ಚೋಪ್ರಾಗೆ ಬಾಲ್ಯದಲ್ಲೇ ಒದಗಿ ಬಂದ ಯಶಸ್ಸಿನ ಪರಿಣಾಮ ಅವರ ಸೋದರ ಸಿದ್ಧಾರ್ಥ್‌ ಚೋಪ್ರಾ ಮೇಲೆ ಹೇಗಾಯ್ತು ಎಂಬುದನ್ನು ಅವರ ತಾಯಿ ಮಧು ಚೋಪ್ರಾ ಅವರು ಹೇಳಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *