
ಪ್ರಿಯಾಂಕಾ ಚೋಪ್ರಾ (ಪ್ರಿಯಾಂಕಾ ಚೋಪ್ರಾ) ಈಗ ಹಾಲಿವುಡ್ ನಟಿ. ಬಾಲಿವುಡ್‌ನಲ್ಲಿ ಹಲವು ವರ್ಷ ಸ್ಟಾರ್ ನಟಿಯಾಗಿ ಮೆರೆದ ಬಳಿಕ 2015 ರ ಸುಮಾರಿಗೆ ಅವರು ಹಾಲಿವುಡ್‌ಗೆ ಪ್ರವೇಶ ಪಡೆದರು. ಆಗಿನಿಂದ ಅವರ ಜೊತೆಗೆ ಸಂಪರ್ಕವನ್ನೇ ಕಡಿದುಕೊಂಡರು. 2019 ರಲ್ಲಿ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದು ಬಿಟ್ಟರೆ ಅದಾದ ಬಳಿಕ ಅವರು ಯಾವೊಂದು ಹಿಂದಿ ಸಿನಿಮಾದಲ್ಲಿಯೂ ನಟಿಸಿಲ್ಲ. ಇದೀಗ ಅವರು ತೆಲುಗಿನ ‘ವಾರಣಾಸಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ದಿ ಬ್ಲಫ್’ ಹೆಸರಿನ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ. ಸಿನಿಮಾ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿರುವ ನಟಿ ಪ್ರಿಯಾಂಕಾ, ಇತ್ತೀಚೆಗಿನ ಸಂದರ್ಶನದಲ್ಲಿ ಬಾಲಿವುಡ್ ಅನ್ನು ಹೊಲಸಿಗೆ ಹೋಲಿಸಿದ್ದಾರೆ.
ಖ್ಯಾತ ಪಾಡ್ ಕಾಸ್ಟರ್ ಜೋ ರೋಗನ್ ಅವರ ಪಾಡ್ ಕಾಸ್ಟ್ ನಲ್ಲಿ ಭಾಗಿ ಆಗಿದ್ದ ಪ್ರಿಯಾಂಕಾ ಚೋಪ್ರಾ ಪಾಡ್ ಕಾಸ್ಟ್ ನಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ, ತಮ್ಮ ಕುಟುಂಬ, ಭಾರತದ ಇತಿಹಾಸ ಇನ್ನೂ ಹಲವು ವಿಷಯಗಳ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದು, ಈ ಸಂದರ್ಶನದಲ್ಲಿ ಅವರ ಹೆಸರಿನ ಬಗ್ಗೆಯೂ ಮಾತನಾಡಿದ್ದು, ಬಾಲಿವುಡ್ ನಿಂದ ಅವರು ಹೊರಗೆ ಬಂದಿದ್ದೇಕೆ ಎಂಬ ಬಗ್ಗೆಯೂ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ್ದಾರೆ.
ಬಾಲಿವುಡ್‌ನಲ್ಲಿ ಕಾರ್ನರ್ ಮಾಡಲ್ಪಟ್ಟಿದೆ ಎಂದಿರುವ ಪ್ರಿಯಾಂಕಾ ಚೋಪ್ರಾ, ‘ತಾವು “ಕೆಟ್ಟ ಪರಿಸ್ಥಿತಿಯಲ್ಲಿ ಅಥವಾ ಕೊಳಕಿನಲ್ಲಿ ಉಳಿಯಲು ಇಷ್ಟಪಡುವುದಿಲ್ಲ, ಅಲ್ಲಿಯೇ ಉಳಿದಿದ್ದರೆ ಕೆಟ್ಟ ವಾಸನೆ ನಿಮಗೆ ಅಭ್ಯಾಸವಾಗಿ ಬಿಡುತ್ತದೆ, ನಂತರ ನಾನು ಅಲ್ಲಿಂದ ಹೊರಗೆ ಬಂದೆ, ಹೊಸ ಅವಕಾಶಗಳನ್ನು ಹುಡುಕುತ್ತೇನೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.
ಇದನ್ನೂ ಓದಿ:ಪತ್ನಿ ಪ್ರಿಯಾಂಕಾ ಚೋಪ್ರಾಗಾಗಿ ಡ್ರಿಂಕ್ಸ್ ಮಾಡಿಕೊಟ್ಟ ನಿಕ್ ಜೋನಸ್: ವಿಡಿಯೋ
‘ಭಾರತದಲ್ಲಿ ಕೆಲಸ ಮಾಡುವಾಗ ತಮಗೆ ಮಿತಿಗಳಿರುವಂತೆ ಭಾಸವಾಯಿತು. ಮಿಂಡಿ ಕಾಲಿಂಗ್ ಐಶ್ವರ್ಯಾ ರೈ ಮತ್ತು ಹಾಲಿವುಡ್‌ನಲ್ಲಿ ಭಾರತೀಯ ನಟರ ಪ್ರಾತಿನಿಧ್ಯ ಕಡಿಮೆ ಇರುವುದನ್ನು ಗಮನಿಸಿ, ಅಲ್ಲಿ ಪ್ರಯತ್ನಿಸಲು ನಿರ್ಧರಿಸಲಾಗಿದೆ. ಯಾವುದೇ ಒಂದು ಸುಲಭವಲ್ಲ. ನಾವೆಲ್ಲರೂ ಎದುರಿಸಬೇಕಾದ ಹೋರಾಟಗಳು. ನಾನು ಕೆಟ್ಟ ಪರಿಸ್ಥಿತಿಯಲ್ಲಿ ಇರಲು ಬಯಸುವವಳಲ್ಲ, ಏಕೆಂದರೆ ಆಗ ನಮಗೆ ಆ ಕೆಟ್ಟ ವಾಸನೆಯೇ ಅಭ್ಯಾಸವಾಗಿಬಿಡುತ್ತದೆ. ಜೀವನ ಕಠಿಣವಾದಾಗ ನಾವು ಚೇತರಿಸಿಕೊಳ್ಳುವ ಶಕ್ತಿ ಹೊಂದಿರಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.
‘ಹಾಲಿವುಡ್ಗೆ ಬಂದಾಗ ತಮಗೆ ಯಾವುದೇ ಯೋಜನೆ ಅಥವಾ ಸ್ಪಷ್ಟ ಹಾದಿ ಇರಲಿಲ್ಲ. ಆದರೆ ತಮ್ಮ ಕಠಿಣ ಪರಿಶ್ರಮ ಮತ್ತು ವೃತ್ತಿಪರತೆಯ ಮೇಲೆ ತಮಗೆ ನಂಬಿಕೆ ಇತ್ತು ಎಂದು ಅವರು ಹೇಳಿದ್ದಾರೆ. 2015 ರಲ್ಲಿ ‘ಕ್ವಾಂಟಿಕೊ’ ಟಿವಿ ಸೀರೀಸ್‌ನಲ್ಲಿ ಪ್ರಿಯಾಂಕಾ ನಟಿಸಿದರು. ಆರಂಭದಲ್ಲಿ ಟಿವಿ ಸರಣಿ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಪ್ರಿಯಾಂಕಾ, ಈಗ ಹಾಲಿವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರು. ‘ಬೇವಾಚ್’, ‘ಮ್ಯಾಟ್ರಿಕ್ಸ್: ರೆಸಲ್ಯೂಶನ್ಸ್’, ‘ಸಿಟಾಡೆಲ್’ ಮುಂತಾದ ದೊಡ್ಡ ಯೋಜನೆಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ‘ದಿ ಬ್ಲಫ್’ ಆಕ್ಷನ್ ಸಿನಿಮಾ ಸಹ ಬಿಡುಗಡೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ