
ನಟಿ ಪ್ರಿಯಾಂಕಾ ಚೋಪ್ರಾ (ಪ್ರಿಯಾಂಕಾ ಚೋಪ್ರಾ) ಪ್ರಸ್ತುತ ಹಾಲಿವುಡ್ನಲ್ಲಿ ಬ್ಯೂಸಿಯಾಗಿದ್ದಾರೆ. ಬಾಲಿವುಡ್ನೊಂದಿಗೆ ಸಂಬಂಧ ಕಡಿದುಕೊಂಡು ಹಲವು ವರ್ಷಗಳಿಂದ ‘ವಾರಣಾಸಿ’ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಜೀವನ ಶೈಲಿಯೂ ಸ್ಟಾರ್ ಮಾದರಿಯಲ್ಲಿದೆ. ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕದ ಪ್ರತಿಷ್ಠಿತ ಬೆವರ್ಲಿ ಹಿಲ್ಸ್ ನ ಐಶಾರಾಮಿ ಮನೆಯಲ್ಲಿ ವಾಸಿಸುತ್ತಾರೆ. ಆದರೆ ಇದೀಗ ಪ್ರಿಯಾಂಕಾ ಚೋಪ್ರಾ, ಸಾಮಾನ್ಯರಂತೆ, ಸಾಮಾನ್ಯ ಜನ ತಿಂದು ಬಿಟ್ಟು ಹೋದ ತಟ್ಟೆ-ಲೋಟಗಳನ್ನು ತೊಳೆದಿದ್ದು, ಆ ವಿಡಿಯೋ ವೈರಲ್ ಆಗಿದೆ.
ಪ್ರಿಯಾಂಕಾ ಚೋಪ್ರಾ, ಹಾಲಿವುಡ್ನಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಮರೆತಿಲ್ಲ. ಹಾಲಿವುಡ್ನಲ್ಲಿ ನೆಲೆಸಿದ್ದರೂ ಸಹ ತಪ್ಪದೇ ಭಾರತೀಯ ಸಂಪ್ರದಾಯದ ಹಬ್ಬಗಳ ಆಚರಣೆಗಳನ್ನು ಸಹ ಮಾಡುತ್ತಲೇ ಇರುತ್ತಾರೆ. ಒಂದೊಮ್ಮೆ ಭಾರತಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಭಾರತಕ್ಕೆ ಬಂದಾಗೆಲ್ಲ ಕೆಲವು ದೇವಾಲಯಗಳಿಗೆ ಸಹ ಭೇಟಿ ಇದೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದರು. ಈ ಭೇಟಿಯ ಸಂದರ್ಭದಲ್ಲಿ ಅವರು ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದರು.
ದರ್ಬಾರ್ ಸಾಹೀಬ್ ಎಂದು ಕರೆಯಲಾಗುವ ಸಿಖ್ಖರ ಈ ಪವಿತ್ರ ದೇವಾಲಯದಲ್ಲಿ ಭಕ್ತರು ಸೇವೆ ಮಾಡುತ್ತಾರೆ. ಕಸ ಗುಡಿಸುವುದು, ಪಾತ್ರೆಗಳನ್ನು ತೊಳೆಯುವುದು, ಅಡುಗೆ ಮಾಡುವುದು, ಬಡಿಸುವುದು ಹೀಗೆ ನಾನಾ ರೀತಿಯ ಸೇವೆಗಳನ್ನು ಭಕ್ತರು ಮಾಡುತ್ತಾರೆ. ದೇವಾಲಯಕ್ಕೆ ಭೇಟಿ ನೀಡಿದ್ದ ನಟಿ ಪ್ರಿಯಾಂಕಾ ಚೋಪ್ರಾ ಸಹ ಸೇವೆ ಸಲ್ಲಿಸಿದ್ದು, ದೇವಾಲಯಕ್ಕೆ ಬಂದ ಭಕ್ತರು ಊಟದಿಂದ ತಟ್ಟೆಗಳು, ಲೋಟಗಳನ್ನು ತೊಳೆದಿದ್ದಾರೆ. ನಟಿ ಪ್ರಿಯಾಂಕಾ ಅವರು ಈ ‘ಬರ್ತನ್ ಸೇವಾ’ (ಪಾತ್ರೆಗಳನ್ನು ತೊಳೆಯುವ ಸೇವೆ) ಮಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ನಟಿ ಪ್ರಿಯಾಂಕಾ ಚೋಪ್ರಾ ಪಂಜಾಬ್ನ ಶ್ರೀ ದರ್ಬಾರ್ ಸಾಹಿಬ್ (ಗೋಲ್ಡನ್ ಟೆಂಪಲ್) ಅಮೃತಸರದಲ್ಲಿ ಸೇವೆ ಮಾಡುತ್ತಿದ್ದಾರೆ. @ಪ್ರಿಯಾಂಕಚೋಪ್ರಾ pic.twitter.com/EftRV2MRNe
— ಆಕಾಶದೀಪ್ ಥಿಂಡ್ (@thind_akashdeep) ಮಾರ್ಚ್ 31, 2026
ಪ್ರಿಯಾಂಕಾ ಚೋಪ್ರಾ ಅವರ ಈ ಸೇವೆಯ ವಿಡಿಯೋಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಆಹಾರ ಪ್ರಿಯಾಂಕಾರ ಸೇವೆಯನ್ನು ಮೆಚ್ಚಿ ಕಮೆಂಟ್ ಮಾಡಿದ್ದು, ‘ಗ್ಲೋಬಲ್ ಸ್ಟಾರ್ ಆದರೂ ಸಹ ತಮ್ಮ ಮೂಲವನ್ನು ಪ್ರಿಯಾಂಕಾ ಮರೆತಿಲ್ಲ’. ಇನ್ನು ಕೆಲವರು, ‘ವಿದೇಶಿಗನ ಮದುವೆಯಾಗಿ, ವಿದೇಶದಲ್ಲಿ ನೆಲೆಸಿದ್ದರೂ ಸಹ ಭಾರತೀಯ ಸಂಸ್ಕೃತಿಗೆ ಗೌರವ ಕೊಡುವುದು ಪ್ರಶಂಸನಾರ್ಹ ಸಂಸ್ಥೆ’. ಆದರೆ ಇದರಲ್ಲೂ ಕೊಂಕು ಹುಡುಕುವ ಕೆಲಸವನ್ನೂ ಸಹ ಮಾಡಿದ್ದಾರೆ. ‘ತಮ್ಮ ಮುಂದಿನ ಸಿನಿಮಾದ ಪ್ರಚಾರಕ್ಕಾಗಿ ಹೀಗೆ ಪೂರ್ವ ಸಿದ್ಧತೆ ಮಾಡುತ್ತಿದ್ದಾರೆ’ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಇತ್ತೀಚೆಗಷ್ಟೇ ಬಿಡುಗಡೆ ಆಯ್ತು. ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಇದೀಗ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಹಾಲಿವುಡ್ ಆಕ್ಷನ್ ಸಿನಿಮಾ ‘ಜಡ್ಜ್ಮೆಂಟ್ ಡೇ’ ಚಿತ್ರಗಳು ಚಾಲ್ತಿಯಲ್ಲಿದ್ದು, ಆ ಸಿನಿಮಾ ಸಹ ಇದೇ ವರ್ಷ ಬಿಡುಗಡೆಯಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ