ಪ್ರಿಯಾಂಕಾ ಚೋಪ್ರಾ (ಪ್ರಿಯಾಂಕಾ ಚೋಪ್ರಾ) ಭಾರತದ ನಟಿಯಾದರೂ ಮಿಂಚುತ್ತಿರುವುದು ಹಾಲಿವುಡ್‌ನಲ್ಲಿ. 2017 ರಲ್ಲಿ ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಪ್ರಿಯಾಂಕ ಆರಂಭದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಕೆಲವು ಪಾತ್ರಗಳಲ್ಲಿ ನಟಿಸಿದರಾದರೂ ವರ್ಷಗಳು ಕಳೆದಂತೆ ಅವರು ಹಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಸಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಮುಖ ನಾಯಕಿಯ ಪಾತ್ರಗಳು ಹೆಚ್ಚಾಗಿ ಆಕ್ಷನ್ ನಾಯಕಿಯ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ಸಿನಿಮಾಗಳು ಯಶಸ್ವಿಯೂ ಆಗುತ್ತಿವೆ. ಇದೀಗ ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿ ಆಕ್ಷನ್, ಪೋಸ್ಟರ್ ಬಿಡುಗಡೆ ಆಗಿದೆ.
ಪ್ರಿಯಾಂಕಾ ಚೋಪ್ರಾ ‘ದಿ ಬ್ಲಫ್’ ಹೆಸರಿನ ಆಕ್ಷನ್ ಜಾನರ್ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ‘ದಿ ಬ್ಲಫ್’ ಸಿನಿಮಾದಲ್ಲಿ ಪ್ರಿಯಾಂಕಾ ಅವರದ್ದು ನಾಯಕಿಯ ಪಾತ್ರ, ಸಿನಿಮಾದ ಪ್ರಧಾನ ಪಾತ್ರವೂ ಅವರದ್ದೆ. ಸಿನಿಮಾದಲ್ಲಿ ಪೈರೇಟ್ (ಕಡಲ್ಗಳ್ಳ) ಪಾತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ತಾಯಿಯಾಗಿ ತನ್ನ ಕಾಯ್ದುಕೊಳ್ಳುವ ಪೈರೇಟ್ ಪಾತ್ರ ಪ್ರಿಯಾಂಕಾ ಚೋಪ್ರಾ ಅವರದ್ದು. ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು, ಅದ್ಭುತ ಆಕ್ಷನ್ ಭರಿತ ಸಿನಿಮಾ ಇದು ತಿಳಿಯುತ್ತಿದೆ.
ಸಿನಿಮಾದ ವಿಲನ್ ಪಾತ್ರದಲ್ಲಿ ಹಾಲಿವುಡ್ನ ಖ್ಯಾತ ನಟ ಕಾರ್ಲ್ ಅರ್ಬನ್ ನಟಿಸಿದ್ದಾರೆ. ಈ ಹಿಂದೆ ಅವರು ‘ಥಾರ್’, ‘ಬ್ರೂನೊ: ಸುಪ್ರಿಮಸಿ’, ‘ಲಾಾರ್ಡ್ ಆಫ್ ದಿ ರಿಂಗ್ಸ್’, ‘ಸ್ಟಾರ್ ಟ್ರೆಕ್’, ‘ಸ್ಟಾರ್ ವಾರ್ಸ್’, ‘ವಾಕಿಂಗ್ ವಿತ್ ಡೈನೋಸಾರ್ಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ದಿ ಬ್ಲಫ್’ ಸಿನಿಮಾದಲ್ಲಿ ಪ್ರಿಯಾಂಕಾ ಅವರಿಗೆ ಎದುರಾಗಿ ನಟಿಸುತ್ತಿದ್ದಾರೆ. ‘ದಿ ಬ್ಲಫ್’ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಫ್ರಾಂಕ್ ಇ ಫ್ಲವರ್ಸ್.
ಇದನ್ನೂ ಓದಿ:ದೀಪಿಕಾ ಪಡುಕೋಣೆ ಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ: ಡಬಲ್ ಧಮಾಕ
ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ. ಅದರ ಹೊರತಾಗಿ ಹಾಲಿವುಡ್ ಆಕ್ಷನ್ ಸಿನಿಮಾ ‘ಜಡ್ಜ್ ಮೆಂಟಲ್ ಡೇ’ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ‘ದಿ ಬ್ಲಫ್’ ಸಿನಿಮಾ ಶೂಟಿಂಗ್ ಮುಗಿದಿದ್ದು, ಸಿನಿಮಾ ಫೆಬ್ರವರಿಯಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ