ಬೆಂಗಳೂರು, (ಫೆಬ್ರವರಿ 26): ಸಂಸದೆ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರ (ರಾಬರ್ಟ್ ವಾದ್ರಾ) ಬೆಂಗಳೂರಿನಲ್ಲಿ (ಬೆಂಗಳೂರು) ಮೊಕ್ಕಾಂ ಹೂಡಿದ್ದು, ಕಳೆದ ಎರಡು ದಿನಗಳಿಂದ ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕನ ಪುತ್ರನ ಜೊತೆ ಸಿಟಿ ರೌಂಡ್ಸ್ ಹೊಡೆಯುತ್ತಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿರುವ ರಾಬರ್ಟ್ ವಾದ್ರಾ, ನಿನ್ನೆ (ಫೆಬ್ರವರಿ 25) ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ರಂಜಾನ್ ನಿಮಿತ್ತ ಬೆಂಗಳೂರಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ಖಾಸಗಿ ಹೋಟೆಲ್ ನಲ್ಲಿ ಹಿರಿಯ ನಾಯಕನ ಜೊತೆ ಮಾತುಕತೆ ನಡೆಸಿದ್ದರು. ಇನ್ನು ಕೆಲ ಹಿರಿಯ ನಾಯಕರು ಭೇಟಿಗೆ ಸಮಯ ಕೇಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಇದು ಕಾಂಗ್ರೆಸ್ ಮನೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರಿ ಹಂಚಿಕ ಮುಸುಕಿನ ಗುದ್ದಾಟದ ನಡುವೆ ರಾಬರ್ಟ್ ವಾದ್ರಾ ನಿಗೂಢ ಬೆಂಗಳೂರಿಗೆ ಬಂದು ಕೆಲ ನಾಯಕರ ಜೊತೆ ಸಿಎಂ ಮಾತುಕತೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.