ಚಕ್ರವರ್ತಿ ಚಂದ್ರಚೂಡ್ (ಚಕ್ರವರ್ತಿ ಚಂದ್ರಚೂಡ್) ಅವರು ಸಿನಿಮಾ ನಿರ್ಮಾಪಕರ ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದ ಶುರುವಾಗಿದ್ದು, ಅದಕ್ಕೆ ನಿರ್ಮಾಪಕ ಕೆ. ಮಂಜು ಪ್ರತಿಕ್ರಿಯೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಸುದೀಪ್ (ಕಿಚ್ಚ ಸುದೀಪ್) ಜೊತೆ ಚಂದ್ರಚೂಡ್ ಆಪ್ತವಾಗಿದ್ದಾರೆ. ಆ ಕುರಿತು ಕೂಡ ಕೆ. ಮಂಜು ಪ್ರತಿಕ್ರಿಯೆ. ‘ಚಂದ್ರಚೂಡ್ ವೈಯಕ್ತಿಕ ವಿಷಯಗಳನ್ನು ನಾವು ಮಾತನಾಡುವುದಿಲ್ಲ. ಚಿತ್ರರಂಗದ ಬಗ್ಗೆ ಮಾತ್ರ ಮಾತನಾಡಿದ್ದೇವೆ. ಯಾವ ನಿರ್ಮಾಪಕರು ಕೂಡ ಮೋಸ ಮಾಡಿಲ್ಲ. ಚಿತ್ರರಂಗಕ್ಕೆ ನಿನ್ನ ಕೊಡುಗೆ ಏನಿದೆ? ಸುದೀಪ್ ಕೂಡ ನಿರ್ಮಾಪಕ ಅಲ್ವಾ? ನಿರ್ಮಾಪಕರ ಬಗ್ಗೆ ಚಂದ್ರಚೂಡ್ ಈ ರೀತಿ ಮಾತನಾಡಿದ್ದು ಸುದೀಪ್ ಅವರಿಗೆ ಗೊತ್ತಾದರೆ ಸುಮ್ಮನೆ ಇರುತ್ತಾರಾ? ಆ ಬಗ್ಗೆ ನಾನು ಮಾತನಾಡಿದ್ದರಲ್ಲಿ ತಪ್ಪು ಏನಿದೆ’ ಎಂದು ಕೆ. ಮಂಜು (ಕೆ ಮಂಜು) ಅವರು ಪ್ರಶ್ನಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.