ಸ್ಯಾಂಡಲ್‌ವುಡ್‌ನ ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರು ಹಾಸನದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್‌ನ್ನು ಭೂಮಾಲೀಕ ದೇವರಾಜು ತೆರವುಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ಬಂದ ನಂತರ, ದೇವರಾಜು ಅವರು ಈ ಕ್ರಮ ಕೈಗೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಕೊತ್ತಲವಾಡಿ ಸಿನಿಮಾದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅಕ್ರಮವಾಗಿ ಹಾಕಿದ್ದ ಕಾಂಪೌಂಡ್‌ನ್ನು ಭೂಮಾಲೀಕ ದೇವರಾಜು ಎಂಬವರು ತೆರವುಗೊಳಿಸಿದ್ದಾರೆ. ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ತಮ್ಮ ನಿವಾಸದ ಪಕ್ಕದಲ್ಲಿದ್ದ ಜಾಗ ಅತಿಕ್ರಮಣ ಮಾಡಿರುವ ಆರೋಪ ಪುಷ್ಪಾ ಅರುಣ್‌ಕುಮಾರ್ ವಿರುದ್ಧ ಕೇಳಿ ಬಂದಿತ್ತು.

ಪುಷ್ಪಾ ಅರುಣ್‌ಕುಮಾರ್ ಅವರು ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವಾಸ ಹೊಂದಿದ್ದಾರೆ. ಮನೆಯ ಪಕ್ಕದ ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಪುಷ್ಪಾ ಅರುಣ್‌ಕುಮಾರ್ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದರು ಎಂಬ ಆರೋಪಿಸಲಾಗಿತ್ತು. ಲಕ್ಷ್ಮಮ್ಮ ಅವರು ಈ ಜಾಗವನ್ನು ಜಿಪಿಎ ಓಲ್ಡರ್ ಆಗಿ ದೇವರಾಜು ಅವರಿಗೆ ಬರೆದುಕೊಟ್ಟಿದ್ದರು.

ಪುಷ್ಪಾ ಅರುಣ್‌ಕುಮಾರ್ ಕಾಂಪೌಂಡ್ ಹಾಕಿದ ದಿನವೇ ದೇವರಾಜು ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುಮಾರು ಒಂದೂವರೆ ಸಾವಿರ ಅಡಿ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದಾರೆ ಎಂದು ದೇವರಾಜು ಆರೋಪಿಸಿದ್ದರು.

ದೂರು ದಾಖಲಿಸಿದ ಬಳಿಕ ದೇವರಾಜು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಯನ್ನು ಪುಪ್ಪ ಅವರು ಒದಗಿಸಿಲ್ಲವಾದ್ದರಿಂದ ನಮ್ಮ ಪರ ತೀರ್ಪು ಬಂದಿದೆ. ಹಾಗಾಗಿ ಇಂದು ನಾವು ನ್ಯಾಯಾಲಯದ ಅನುಮತಿಯಂತೆ ಅಕ್ರಮವಾಗಿ ಕಟ್ಟಿದ್ದ ಕಾಂಪೌಂಡ್ ತೆರವುಗೊಳಿಸಿದ್ದೇವೆ ಎಂದು ದೇವರಾಜು ಹೇಳಿದ್ದಾರೆ.

ಇದನ್ನೂ ಓದಿ: ನಟ ಯಶ್ ಮನೆಯ ಸಿನಿಮಾ ಅಂದ್ರೆ ಇಡೀ ದೇಶ ನೋಡತ್ತೆ: ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಪುಷ್ಪ

ಪುಷ್ಪಾ ಅರುಣ್ ಕುಮಾರ್ ಸ್ಯಾಂಡಲ್‌ವುಡ್ ನಿರ್ಮಾಪಕಿಯಾಗಿದ್ದು, 2025ರಲ್ಲಿ ಬಿಡುಗಡೆಯಾದ ಕೊತ್ತಲವಾಡಿ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಮತ್ತು ಕಾವ್ಯಾ ಶೈವ ನಟಿಸಿದ್ದರು. ಚಿತ್ರ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಪುಷ್ಪಾ ಅವರ ಪುತ್ರ ಯಶ್ ಸ್ಟಾರ್ ನಟರಾಗಿದ್ದಾರೆ. ಸೊಸೆ ರಾಧಿಕಾ ಪಂಡಿತ್ ಸಹ ಚಂದನವನದ ನಾಯಕಿಯಾಗಿ ನಟಿಸಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಮತ್ತೆ ಅದೇ ನಿರ್ದೇಶಕರ ಜೊತೆ ಮತ್ತೊಂದು ಸಿನಿಮಾ ಘೊಷಿಸಿದ ಪುಷ್ಪಾ ಅರುಣ್ ಕುಮಾರ್!

Source link
ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಹಾಕಿದ್ದ ಅಕ್ರಮ ಕಾಂಪೌಂಡ್ ತೆರವು