10000 ರೂಪಾಯಿಗಿಂತ ಕಡಿಮೆ ಹೂಡಿಕೆಯಲ್ಲಿ ಶುರು ಮಾಡಬಹುದಾದ ಸಣ್ಣ ವ್ಯಾಪಾರಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ಇಂತಹ ಬ್ಯುಸಿನೆಸ್ಗಳಿಂದ ಯಾವುದೇ ರಿಸ್ಕ್ ಇಲ್ಲದೆ ಒಳ್ಳೆ ಆದಾಯ ಗಳಿಸಬಹುದು.

ಸ್ವಂತ ವ್ಯಾಪಾರ ಹಲವರ ಕನಸು. ಆದರೆ ಹೆಚ್ಚು ಹಣ ಹೂಡಿ ನಷ್ಟವಾದರೆ? ಈ ಭಯವೇ ಅವರನ್ನು ಹಿಂದೆ ಸರಿಯುವಂತೆ ಮಾಡುತ್ತದೆ. 10,000 ರೂ. ಒಳಗೆ ಶುರು ಮಾಡುವ ವ್ಯಾಪಾರಗಳು ರಿಸ್ಕ್ ಇಲ್ಲದೆ ಆದಾಯ ನೀಡುತ್ತವೆ.

ಮನೆಯಲ್ಲೇ ಆಹಾರ ತಯಾರಿಸಿ ಮಾರಾಟ ಮಾಡುವುದು ಉತ್ತಮ ಆಯ್ಕೆ. ಇಡ್ಲಿ-ದೋಸೆ ಹಿಟ್ಟು, ಸಾಂಬಾರ್, ಚಟ್ನಿ, ತಿಂಡಿಗಳನ್ನು ಹತ್ತಿರದ ಅಂಗಡಿಗಳಿಗೆ ಅಥವಾ ನೇರವಾಗಿ ಗ್ರಾಹಕರಿಗೆ ಮಾರಬಹುದು. ರುಚಿ, ಸ್ವಚ್ಛತೆ ಇದ್ದರೆ ಸಾಕು.

ಎರಡನೆಯದು ರೀಚಾರ್ಜ್ ಮತ್ತು ಆನ್ಲೈನ್ ಸೇವಾ ಕೇಂದ್ರ. ಮೊಬೈಲ್, ಡಿಟಿಎಚ್ ರೀಚಾರ್ಜ್, ಬಿಲ್ ಪಾವತಿಗಳಂತಹ ಸೇವೆ ನೀಡಿ ಕಮಿಷನ್ ಗಳಿಸಬಹುದು. ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ಇದ್ದರೆ ಸಾಕು. ಹಳ್ಳಿಗಳಲ್ಲಿ ಈ ಬ್ಯುಸಿನೆಸ್ಗಳಲ್ಲಿ ಬೇಡಿಕೆಯಿದೆ.

ಮೂರನೆಯದು ಪರಿಸರ ಸ್ನೇಹಿ ವಸ್ತುಗಳ ತಯಾರಿಕೆ. ಪೇಪರ್ ಬ್ಯಾಗ್, ಬಟ್ಟೆ ಚೀಲಗಳಿಗೆ ಈಗ ತುಂಬಾ ಬೇಡಿಕೆಯಿದೆ. ಈ ವಸ್ತುಗಳನ್ನು ತಯಾರಿಸಲು ಕಾಗದ, ಬಟ್ಟೆ, ಪ್ರಿಂಟಿಂಗ್ ಖರ್ಚು ಮಾತ್ರ ಬೇಕಾಗುತ್ತದೆ. ಕೇವಲ 7-10 ಸಾವಿರ ಹೂಡಿಕೆಯಲ್ಲಿ ಈ ಬ್ಯುಸಿನೆಸ್ ಶುರು ಮಾಡಬಹುದು.

ನಾಲ್ಕನೆಯದು ಮನೆಯಂಗಳದಲ್ಲಿ ತರಕಾರಿ ಬೆಳೆಯುವುದು. ಕಡಿಮೆ ಜಾಗದಲ್ಲಿ ತರಕಾರಿ, ಇತರೆ ಗಿಡಗಳನ್ನು ಬೆಳೆಸಬಹುದು. ಬೀಜ, ಕುಂಡಗಳಿಗೆ ಮಾತ್ರ ಖರ್ಚು. ಇದರಿಂದ ಬರುವ ಆದಾಯ ಕುಟುಂಬದ ಖರ್ಚಿಗೆ ನೆರವಾಗುತ್ತದೆ.

Source link
ಕೇವಲ 10 ಸಾವಿರ ಸಾಕು, ಮನೆಯಲ್ಲೇ ಲಾಭದಾಯಕ ಬ್ಯುಸಿನೆಸ್ ಮಾಡಿ, ಒಳ್ಳೆಯ ಆದಾಯ ಗಳಿಸಿ