
ಜನವರಿ 31: ಕೇಂದ್ರ ಸರ್ಕಾರ 2021 ರ ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ ನಿಯಮಗಳು ಪರಿಷ್ಕರಿಸುತ್ತಿದೆ. ಈ ಸಂಬಂಧ ತಿದ್ದುಪಡಿ ತರಲು ಅದರ ಕರಡು ನಿಬಂಧನೆಗಳನ್ನು ನಿನ್ನೆ ಸೋಮವಾರ ಬಹಿರಂಗಪಡಿಸಿದೆ. ಸಾಮಾನ್ಯ ಸೋಷಿಯಲ್ ಮೀಡಿಯಾ ಬಳಕೆದಾರನ (ಸಾಮಾಜಿಕ ಮಾಧ್ಯಮ ಬಳಕೆದಾರ) ಮೇಲೆ ಪರಿಣಾಮ ಬೀರುವಿಕೆ ಸೇರಿದಂತೆ ಕೆಲವು ಪ್ರಮುಖ ಸಂಗತಿಗಳು ಈ ಪ್ರಸ್ತಾವಿತ ನಿಯಮಗಳಲ್ಲಿವೆ.
ಗಮನಿಸಬೇಕಾದ ಹೊಸ ಐಟಿ ನಿಯಮಗಳು…
ಆನ್ಲೈನ್ನಲ್ಲಿ ಸಾಮಾನ್ಯ ಬಳಕೆದಾರರು ಹಾಕುವ ಪೋಸ್ಟ್ಗಳು ಸೂಕ್ಷ್ಮವಿದ್ದರೆ, ಅವರಿಗೆ ಸರ್ಕಾರದಿಂದ ನೇರವಾಗಿ ನೋಟೀಸ್ ಹೋಗಬಹುದು.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಸರ್ಕಾರ ನೀಡುವ ಸೂಚನೆಗಳು ಗೈಡ್ಲೈನ್ಸ್ ಮಾತ್ರವೇ ಆಗದೆ, ಕಾನೂನಾತ್ಮಕವಾಗಿ ಪಾಲಿಸುವಂಥದ್ದಾಗಿರುತ್ತದೆ. ಇವನ್ನು ಪಾಲಿಸದಿದ್ದರೆ ಕಾನೂನು ಪ್ರಕ್ರಿಯೆ ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ
ಸಾಮಾನ್ಯ ಬಳಕೆದಾರರ ಮೇಲೆ ಯಾಕೆ ಸರ್ಕಾರದ ಕಣ್ಣು?
ಇವತ್ತು ಸೋಷಿಯಲ್ ಮೀಡಿಯಾ ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳು ಗಣನೀಯವಾಗಿ ವಿಸ್ತರಣೆ. ಮಾಧ್ಯಮ ಸಂಸ್ಥೆಯು ಹೆಚ್ಚು ಪ್ರಭಾವಶಾಲಿಯಾದ ಪೋಸ್ಟ್ಗಳು ಸಾಮಾನ್ಯ ಯೂಸರ್ಗಳಿಂದ ಬರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಸುಲಭವಾಗಿ ಹರಡಬಹುದು. ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಗಳು, ಯೂಟ್ಯೂಬ್ ಚಾನೆಲ್ ನಡೆಸುವವರು ಮೊದಲಾದವರು ಪ್ರಸ್ತುತ ವಿದ್ಯಮಾನಗಳ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಇತರರನ್ನು ಪ್ರಭಾವಿಸಬಹುದು. ಹೀಗಾಗಿ, ಸರ್ಕಾರವು ಈ ಬಳಕೆದಾರರ ಪೋಸ್ಟ್ಗಳ ಮೇಲೆ ನಿಗಾ ಇರಿಸಲು ಹೊರಟಿರಬಹುದು.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಹೆಚ್ಚಿನ ಜವಾಬ್ದಾರಿ
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಇಂತಿಂತಹ ಕಾಂಟೆಂಟ್ಗಳ ಮೇಲೆ ನಿಗಾ ಇರಿಸಬೇಕು ಎಂದು ಸರ್ಕಾರದಿಂದ ಸಲಹೆ, ಸೂಚನೆಗಳು, ಮಾರ್ಗಸೂಚಿಗಳು ಇವೆ. ಆದರೆ, ಈ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎನ್ನುವ ಕಟ್ಟುಪಾಡು ಇಲ್ಲ. ಈಗ ಪ್ರಸ್ತಾವಿತ ನಿಯಮಗಳ ಪ್ರಕಾರ, ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಕಟ್ಟುಪಾಡುಗಳಂತೆ ಭಾವಿಸಿ ಕಾರ್ಯ ನಿರ್ವಹಿಸಿ. ಇಂತಹ ತಪ್ಪು ಪೋಸ್ಟ್ ಅನ್ನು ತೆಗೆದುಹಾಕಬೇಕೆಂದರೆ ಅದನ್ನು ತೆಗೆಯುವುದು ಅನಿವಾರ್ಯ. ಇಲ್ಲದಿದ್ದರೆ ಕಾನೂನು ಪ್ರಕ್ರಿಯೆಯನ್ನು ಎದುರಿಸಲಾಗುತ್ತದೆ.
ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರಿಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು
ಕೆಲವು ವಾರಗಳ ಹಿಂದೆ ಸರ್ಕಾರವು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ನಿರ್ದೇಶನದ ಪ್ರಕಾರ, ಒಂದು ಪೋಸ್ಟ್ ಅನ್ನು ತೆಗೆದುಹಾಕುವ ಸೂಚನೆಯನ್ನು ನೀಡಿದರೆ ಅದರ ಅವಧಿಯನ್ನು 24-36 ಗಂಟೆಗಳಿಂದ ಕೇವಲ 2-3 ಗಂಟೆಗೆ ಇಳಿಸಲಾಗಿದೆ.
ಸದ್ಯ ಸರ್ಕಾರದ ಕರಡು ನಿಯಮಗಳ ಬಗ್ಗೆ ಯಾರಿಗೇ ಆದರೂ ಅಭಿಪ್ರಾಯ ವ್ಯಕ್ತಪಡಿಸಲು ಏಪ್ರಿಲ್ 14ರವರೆಗೆ ಕಾಲಾವಕಾಶ ಇದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ